ಕೊಲ್ಲಾಡು–ಹೊಸಬೆಟ್ಟು ಪ್ರದೇಶಕ್ಕೆ ರಸ್ತೆ ನಿರ್ಮಿಸದಿದ್ದರೆ ಪ್ರತಿಭಟನೆ: ಗಿರಿಧರ ನಾಯ್ಕ ಎಚ್ಚರಿಕೆ
ಪುತ್ತೂರು: ಬೆಳ್ತಂಗಡಿ ತಾಲೂಕಿನ ಕಡಿರುದ್ಯಾವರ ಗ್ರಾಮದ ಕೊಲ್ಲಾಡು–ಹೊಸಬೆಟ್ಟು ಪ್ರದೇಶಕ್ಕೆ ರಸ್ತೆ ಇಲ್ಲದ ಕಾರಣ ಅಲ್ಲಿನ ನಿವಾಸಿಗಳು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಈ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳದಿದ್ದರೆ ಬೆಳ್ತಂಗಡಿಯಲ್ಲಿ ದೊಡ್ಡ ಮಟ್ಟದ ಪ್ರತಿಭಟನೆ ನಡೆಸಲಾಗುವುದು ಎಂದು ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಗಿರಿಧರ ನಾಯ್ಕ ಎಚ್ಚರಿಕೆ ನೀಡಿದರು. ಪುತ್ತೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸೋಮಂತಡ್ಕ–ದಿಡುಪೆ ರಸ್ತೆಯಲ್ಲಿ ಪೊಟ್ಟುಕೆರೆ ಎಂಬಲ್ಲಿಂದ ಕವಲೊಡೆದ ಕೊಲ್ಲಾಡು–ಹೊಸಬೆಟ್ಟು ರಸ್ತೆ ಸುಮಾರು 150 ವರ್ಷಗಳ ಹಿಂದಿನಿಂದಲೂ ಎತ್ತಿನಗಾಡಿ ಹೋಗುವ ದಾರಿಯಾಗಿತ್ತು ಎಂದು…
