Headlines

ಮಂಜೇಶ್ವರದಲ್ಲಿ ವಿದ್ಯುತ್ ವ್ಯತ್ಯಯ ಸಮಸ್ಯೆ ಪರಿಹರಿಸಲು ಡಿವೈಎಫ್‌ಐ ಆಗ್ರಹ

ಮಂಜೇಶ್ವರ: ಮಂಜೇಶ್ವರ ಬ್ಲಾಕ್ ವ್ಯಾಪ್ತಿಯ ಉಪ್ಪಳ, ಪೈವಳಿಗೆ, ವರ್ಕಾಡಿ ಮತ್ತು ಮೀಂಜ ಪಂಚಾಯತ್ ಪ್ರದೇಶಗಳ ವಿವಿಧ ಕಡೆಗಳಲ್ಲಿ ನಿನ್ನೆದಿಂದ ವಿದ್ಯುತ್ ವ್ಯತ್ಯಯ ಉಂಟಾಗಿದ್ದು, ಇದರಿಂದ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. 110 ಕೆವಿ ವಿದ್ಯುತ್ ಲೈನ್‌ನಲ್ಲಿ ಉಂಟಾದ ದೋಷದ ಕಾರಣ ಈ ಸಮಸ್ಯೆ ಉಂಟಾಗಿದೆ ಎಂದು ತಿಳಿದುಬಂದಿದ್ದು, ತಕ್ಷಣವೇ ಇದನ್ನು ಸರಿಪಡಿಸುವಂತೆ Democratic Youth Federation of India (ಡಿವೈಎಫ್‌ಐ) ಮಂಜೇಶ್ವರ ಬ್ಲಾಕ್ ಸಮಿತಿ ಆಗ್ರಹಿಸಿದೆ. ಈ ಕುರಿತು ಡಿವೈಎಫ್‌ಐ ವತಿಯಿಂದ ವಿದ್ಯುತ್ ಇಲಾಖೆ ಸಚಿವರಾದ K Krishnankutty…

Read More

ಆದೂರಿನ ಶಾಲೆಯಲ್ಲಿ ರ‍್ಯಾಗಿಂಗ್ ವಿವಾದ – ಎರಡು ಪ್ರದೇಶಗಳ ನಡುವೆ ಸಂಘರ್ಷ, ಹಲವು ಮಂದಿ ಗಾಯ

ಕಾಸರಗೋಡು: ಅಡೂರು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆದ ರ‍್ಯಾಗಿಂಗ್ ಘಟನೆಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳ ನಡುವಿನ ಜಗಳವು ಎರಡು ಸ್ಥಳಗಳ ನಡುವಿನ ಸಾರ್ವಜನಿಕ ಘರ್ಷಣೆಗೆ ಕಾರಣವಾಗಿದ್ದು, ಶೀಘ್ರದಲ್ಲೇ ಪರಿಹಾರ ಕಂಡುಕೊಳ್ಳದಿದ್ದರೆ ಪರಿಸ್ಥಿತಿ ಗಂಭೀರವಾಗಲಿದೆ ಎಂದು ಗುಪ್ತಚರ ಇಲಾಖೆ ವರದಿ ಮಾಡಿದೆ. ಗುರುವಾರ ಸಂಜೆ ಮುಳ್ಳೇರಿಯಾ ಜುಮಾ ಮಸೀದಿಯಿಂದ ಮಗ್ರಿಬ್ ಪ್ರಾರ್ಥನೆ ಮುಗಿಸಿ ಹೊರಬಂದ ಮೂವರು ಜನರ ಮೇಲೆ ದಾಳಿ ನಡೆಸಿದಾಗ ಪರಿಸ್ಥಿತಿ ಕೈ ಮೀರುವ ಭೀತಿ ಉಂಟಾಗಿತ್ತು. ಸಿಎ ನಗರದ ಆದುರಿನ ಆಸಿಫ್ (28), ಪೂತಪಾಲಂತ್ ರಹೀಸ್…

Read More

ಪಳ್ಳಿ ಫಿಶ್ ಮೀಲ್ ವಿರುದ್ಧ ಜಿಲ್ಲಾಧಿಕಾರಿ ಸ್ಪಂದನೆ: ಸ್ಥಳ ಪರಿಶೀಲನೆ ನಡೆಸಿ ವರದಿ ನೀಡಲು ಸೂಚನೆ

ಕಾರ್ಕಳ: ಪಳ್ಳಿ ಗ್ರಾಮದ ಕೊಡಿಮಲೆ ಪರಿಸರದಲ್ಲಿ ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿರುವ ಅನಧಿಕೃತ ಫಿಶ್ ಮೀಲ್ ಘಟಕ ನಿರ್ಮಾಣದ ಬಗ್ಗೆ ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಸ್ಪಂದಿಸಿದ್ದು, ನಿಯಮಬಾಹಿರವಾಗಿ ಕಾಮಗಾರಿ ನಡೆಯುತ್ತಿದ್ದರೆ ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಗ್ರಾಮಸ್ಥರಿಗೆ ಭರವಸೆ ನೀಡಿದ್ದಾರೆ. ಮಾರ್ಚ್ 6ರಂದು ಸುಮಾರು 50ಕ್ಕೂ ಹೆಚ್ಚು ಗ್ರಾಮಸ್ಥರು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು. ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿಯವರು, “ಯಾವುದೇ ಬೃಹತ್ ಕೈಗಾರಿಕೆ ಅಥವಾ ಕಟ್ಟಡ ನಿರ್ಮಾಣಕ್ಕೆ ಸ್ಥಳೀಯ ಗ್ರಾಮ ಪಂಚಾಯತ್‌ನ ಪೂರ್ವಾನುಮತಿ…

Read More

ಸಬಳೂರು ಅಯೋಧ್ಯಾನಗರ ಶ್ರೀರಾಮ ಭಜನಾ ಮಂದಿರಕ್ಕೆ ಧರ್ಮಸ್ಥಳದ ಅನುದಾನ ಚೆಕ್ ವಿತರಣೆಸಂಸ್ಕಾರ–ಸಂಸ್ಕೃತಿ ಉಳಿವಿಗೆ ಭಜನಾ ಮಂದಿರಗಳು ಪ್ರೇರಣೆ: ಪ್ರಕಾಶ್ ಕುಮಾರ್

ಕಡಬ, ಮಾ.6: ನಮ್ಮ ಸಂಸ್ಕಾರ ಹಾಗೂ ಸಂಸ್ಕೃತಿಯ ಉಳಿವಿಗೆ ಭಜನಾ ಮಂದಿರಗಳು ಮಹತ್ತರ ಕೊಡುಗೆ ನೀಡುತ್ತಿದ್ದು, ಸಮಾಜದಲ್ಲಿ ಧರ್ಮಜಾಗೃತಿ ಮೂಡಿಸುವ ಕಾರ್ಯವನ್ನು ನಿರಂತರವಾಗಿ ಮಾಡುತ್ತಿವೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಡಬ ತಾಲೂಕು ಯೋಜನಾಧಿಕಾರಿ ಪ್ರಕಾಶ್ ಕುಮಾರ್ ಹೇಳಿದರು. ಅವರು ಶುಕ್ರವಾರ ಕಡಬ ತಾಲೂಕಿನ ಕೊಯಿಲ ಗ್ರಾಮದ ಸಬಳೂರು ಅಯೋಧ್ಯಾನಗರದ ಶ್ರೀರಾಮ ಭಜನಾ ಮಂದಿರದ ಅಭಿವೃದ್ಧಿಗಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಬಿಡುಗಡೆಯಾದ ₹1 ಲಕ್ಷ ಅನುದಾನದ ಚೆಕ್ ವಿತರಣಾ ಸಮಾರಂಭದಲ್ಲಿ ಅತಿಥಿಯಾಗಿ ಮಾತನಾಡಿದರು. ಮಕ್ಕಳಿಗೆ…

Read More

ಮಲ್ಪೆ: ಕೊಳೆತ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ

ಉಡುಪಿ: ಮಲ್ಪೆ ಬಂದರಿನ ದಕ್ಕೆಯ ಸಮೀಪ ಕೊಳೆತ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾದ ಘಟನೆ ನಡೆದಿದೆ.ಮೃತ ವ್ಯಕ್ತಿಯ ಹೆಸರು ಮತ್ತು ವಿಳಾಸ ಇನ್ನೂ ತಿಳಿದುಬಂದಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಘಟನೆಯ ಕುರಿತು ಮಾಹಿತಿ ಪಡೆದ ಮಲ್ಪೆ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ನಾಗರಾಜ್ ಮತ್ತು ಮಲ್ಲಿಕಾ ಸ್ಥಳಕ್ಕೆ ಭೇಟಿ ನೀಡಿ ಮಹಜರು ಪ್ರಕ್ರಿಯೆ ನಡೆಸಿದರು. ಸಮಾಜಸೇವಕ ನಿತ್ಯಾನಂದ ಒಳಕಾಡು ಅವರ ನೇತೃತ್ವದಲ್ಲಿ ಮೃತದೇಹವನ್ನು ಮೇಲಕ್ಕೆತ್ತುವ ಕಾರ್ಯಾಚರಣೆ ನಡೆಸಲಾಯಿತು. ಈ ಕಾರ್ಯದಲ್ಲಿ ಹರೀಶ್ ಪೂಜಾರಿ ಹಾಗೂ ಭುವನೇಶ್…

Read More

ಪವನ್ ಕುಮಾರ್ ಚಾರಿಟೇಬಲ್ ಟ್ರಸ್ಟ್ ಉದ್ಘಾಟನೆ – ಪ್ರಮೋದ್ ಮಧ್ವರಾಜ್ ಅವರಿಗೆ “ಬಡವರ ಬಂದು” ಪ್ರಶಸ್ತಿ

ಉಡುಪಿ: ಪವನ್ ಕುಮಾರ್ ಚಾರಿಟೇಬಲ್ ಟ್ರಸ್ಟ್‌ನ ಉದ್ಘಾಟನಾ ಕಾರ್ಯಕ್ರಮವು ಕರ್ನಾಟಕ ಸರ್ಕಾರದ ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್ ಅವರ ಅಮ್ಮುಂಜೆ ನಿವಾಸದಲ್ಲಿ ನಡೆಯಿತು. ಟ್ರಸ್ಟ್ ಅನ್ನು ಪ್ರಮೋದ್ ಮಧ್ವರಾಜ್ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಟ್ರಸ್ಟ್ ವತಿಯಿಂದ ಮಾಜಿ ಸಚಿವರು, ಕೊಡುಗೈ ದಾನಿ ಹಾಗೂ ಬಡವರ ನೆರವಿಗೆ ಸದಾ ಮುಂದಾಗುವ ವ್ಯಕ್ತಿಯಾಗಿ ಗುರುತಿಸಿಕೊಂಡಿರುವ ಪ್ರಮೋದ್ ಮಧ್ವರಾಜ್ ಅವರಿಗೆ ಸಂಸ್ಥಾಪಕ ಪವನ್ ಕುಮಾರ್ ಶಿರ್ವ ಅವರು “ಬಡವರ ಬಂದು” ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸ್ಥಾಪಕ ಪವನ್…

Read More

ಸಮಾಜ ಸೇವಾ ರತ್ನ ಪ್ರಶಸ್ತಿಗೆ ಡಾ. ಮಾಲತಿ ಶೆಟ್ಟಿ ಮಾಣೂರು ಆಯ್ಕೆ

ಬೆಂಗಳೂರಿನ ದಿವ್ಯ ಚೇತನ ಚಾರಿಟೇಬಲ್ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ನಡೆಯಲಿರುವ 2026ನೇ ಸಾಲಿನ ಪ್ರತಿಷ್ಠಿತ “ಸಮಾಜ ಸೇವಾ ರತ್ನ” ಪ್ರಶಸ್ತಿಗೆ ಮಂಗಳೂರಿನ ಅಮೃತ ಪ್ರಕಾಶ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ ಡಾ. ಮಾಲತಿ ಶೆಟ್ಟಿ ಮಾಣೂರು ಅವರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿ ಪ್ರದಾನ ಸಮಾರಂಭವು ಮಾರ್ಚ್ 11ರಂದು ಬೆಂಗಳೂರಿನ ಕನ್ನಡ ಭವನದ ನಯನ ಸಭಾಂಗಣದಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ನಡೆಯಲಿದೆ. ತುಮಕೂರಿನ ಶ್ರೀ ವಾಲ್ಮೀಕಿ ಆಶ್ರಮದ ಶ್ರೀ ಶ್ರೀ ಸಂಜಯ…

Read More

ಕಾಟಿಪಲ್ಲ ಗಣೇಶ್‌ಪುರ ದೇವಸ್ಥಾನದಲ್ಲಿ ಹೊಸ ಕನ್ನಡ ಚಿತ್ರದ ಮುಹೂರ್ತ ಪೂಜೆ

ಮಂಗಳೂರು: ಕಾಟಿಪಲ್ಲ ಗಣೇಶ್‌ಪುರ ದೇವಸ್ಥಾನದಲ್ಲಿ ಶುಕ್ರವಾರ ಸಂಜೆ 6 ಗಂಟೆಗೆ ಸಿ.ಎಂ. ಉದಯ್ ಅವರ ಕಥೆ, ಸಂಭಾಷಣೆ, ನಿರ್ದೇಶನ ಹಾಗೂ ನಿರ್ಮಾಣದಲ್ಲಿ ಮೂಡಿ ಬರಲಿರುವ ಹೊಸ ಕನ್ನಡ ಚಲನಚಿತ್ರದ ಮುಹೂರ್ತ ಪೂಜೆ ನೆರವೇರಿತು. ಕಾರ್ಯಕ್ರಮದಲ್ಲಿ ತುಳು ಚಿತ್ರನಟ ಹಾಗೂ ರಂಗಭೂಮಿ ಕಲಾವಿದ ಭೋಜರಾಜ್ ವಾಮಂಜೂರು, ಕಾಂತರಾ ಖ್ಯಾತಿಯ ನವೀನ್ ಬೋಂದೆಲ್, ಸಿ.ಎಂ. ಉದಯ್ ಹಾಗೂ ಅವರ ಧರ್ಮಪತ್ನಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಈ ಚಿತ್ರಕ್ಕೆ ಪ್ರಭು ದಾಸ್ ಪಿ.ಡಿ. ಸಂಗೀತ ನಿರ್ದೇಶನ ನೀಡಲಿದ್ದು, ನಿವಾಸ್ ನಾರಾಯಣ್…

Read More

ತಲಪಾಡಿ ಟೋಲ್‌ನಲ್ಲಿ ಮಂಜೇಶ್ವರ ಪಂಚಾಯತ್ ವ್ಯಾಪ್ತಿಯ ವಾಹನಗಳಿಗೆ ಫ್ರೀ ಪಾಸ್ ನೀಡಲು ಬಿಜೆಪಿ ಮನವಿ

ತಲಪಾಡಿ ಟೋಲ್‌ಗೇಟ್‌ನಲ್ಲಿ ಮಂಜೇಶ್ವರ ಪಂಚಾಯತ್ ವ್ಯಾಪ್ತಿಯ ವಾಹನಗಳಿಗೆ ಉಚಿತ ಪಾಸಿಂಗ್ (ಫ್ರೀ ಪಾಸ್) ನೀಡುವಂತೆ ಬಿಜೆಪಿ ಮಂಜೇಶ್ವರ ಮಂಡಲ ಸಮಿತಿ ಮಂಗಳೂರು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರಿಗೆ ಮನವಿ ಸಲ್ಲಿಸಿದೆ. ತಲಪಾಡಿ ಟೋಲ್‌ನಲ್ಲಿ ತಲಪಾಡಿ ಗ್ರಾಮದ ವಾಹನಗಳಿಗೆ ನೀಡಿರುವಂತೆ ಮಂಜೇಶ್ವರ ಪಂಚಾಯತ್ ವ್ಯಾಪ್ತಿಯ ವಾಹನಗಳಿಗೂ ಫ್ರೀ ಪಾಸಿಂಗ್ ಸೌಲಭ್ಯ ನೀಡಬೇಕು ಎಂದು ಬಿಜೆಪಿ ಒತ್ತಾಯಿಸಿದೆ. ಈ ಕುರಿತು ಮಾತನಾಡಿದ ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ್ ಬಿ.ಎಂ., “ಈ ವಿಷಯದಲ್ಲಿ ಮಂಜೇಶ್ವರ ಶಾಸಕರಾಗಲಿ ಅಥವಾ ಸಂಸದರಾಗಲಿ…

Read More

ಇಫ್ತಾರ್ ಕೂಟದಿಂದ ಮನೆಗೆ ವಾಪಸ್ಸಾಗುವಾಗ ದುರ್ಘಟನೆ – ಸೈಕಲ್‌ನಿಂದ ಬಿದ್ದು ಬಾಲಕ ಸಾವು

ಕಾಸರಗೋಡು: ಇಫ್ತಾರ್ ಕೂಟದಲ್ಲಿ ಭಾಗವಹಿಸಿ ಸೈಕಲ್‌ನಲ್ಲಿ ಮನೆಗೆ ಹಿಂತಿರುಗುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಬಿದ್ದ ಪರಿಣಾಮ 12 ವರ್ಷದ ಬಾಲಕ ಮೃತಪಟ್ಟ ದುರ್ಘಟನೆ ಸಂಭವಿಸಿದೆ. ಕೊಳ್ನಾಡು ಗ್ರಾಮದ ತಾಳಿತ್ತನೂಜಿ ದೇವಸ್ಯ ನಿವಾಸಿ ಅಬೂಬಕ್ಕರ್ ಅವರ ಮಗಳು ಅಸ್ಮ ಅವರ ಪುತ್ರ ಆಸೀಪ್ (12) ಮೃತಪಟ್ಟ ಬಾಲಕನಾಗಿದ್ದಾನೆ. ಮದರಸವೊಂದರಲ್ಲಿ ಆಯೋಜಿಸಲಾದ ಇಫ್ತಾರ್ ಕೂಟದಲ್ಲಿ ಭಾಗವಹಿಸಿ ಮನೆಗೆ ಸೈಕಲ್‌ನಲ್ಲಿ ಹಿಂತಿರುಗುತ್ತಿದ್ದ ವೇಳೆ ರಸ್ತೆಯ ತಿರುವಿನಲ್ಲಿ ಸೈಕಲ್‌ನ ನಿಯಂತ್ರಣ ತಪ್ಪಿ ಬಿದ್ದ ಪರಿಣಾಮ ಆಸೀಪ್‌ಗೆ ದೇಹದ ಒಳಭಾಗದಲ್ಲಿ ತೀವ್ರ ಪೆಟ್ಟು ತಗುಲಿದೆಯೆಂದು…

Read More
error: Content is protected !!