ಮಳೆ ನಿಂತ ಬಳಿಕ ಕೊಡೆ ಹಿಡಿದಂತಾಗಿದೆ ಕಾಂಗ್ರೆಸ್ ನಾಯಕರ ಸ್ಥಳ ವೀಕ್ಷಣೆ: ಶಾಸಕ ವೇದವ್ಯಾಸ ಕಾಮತ್ ಟೀಕೆ
ಮಂಗಳೂರು: ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ತಮ್ಮ ಪ್ರಯತ್ನದಿಂದ ಮಂಜೂರಾದ ಅಭಿವೃದ್ಧಿ ಕಾಮಗಾರಿಗಳ ವಿಚಾರದಲ್ಲಿ ಕಾಂಗ್ರೆಸ್ ನಾಯಕರು ರಾಜಕೀಯ ಗಿಮಿಕ್ ಮಾಡುತ್ತಿದ್ದಾರೆ ಎಂದು ಶಾಸಕ ವೇದವ್ಯಾಸ ಕಾಮತ್ ಆರೋಪಿಸಿದರು. ನಗರದ ಅಟಲ್ ಕೇಂದ್ರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ಸಿಗರ ಇತ್ತೀಚಿನ ನಡೆಗಳನ್ನು “ಮಳೆ ನಿಂತ ಬಳಿಕ ಕೊಡೆ ಹಿಡಿದಂತಾಗಿದೆ” ಎಂಬುದಕ್ಕೆ ಹೋಲಿಸಿದರು. ಕ್ಷೇತ್ರದಲ್ಲಿ ಸಂಭವಿಸಿದ ಮಳೆ ಹಾನಿಯ ಕುರಿತು ಸಮಗ್ರ ವರದಿ ಸಲ್ಲಿಸಿ ರಾಜ್ಯ ವಿಪತ್ತು ಉಪಶಮನ ನಿಧಿ (SDMF) ಅಡಿಯಲ್ಲಿ 28 ಕಾಮಗಾರಿಗಳಿಗೆ…
