ಬಂದ್ಯೋಡ್ ಅಡ್ಕದಲ್ಲಿ ಸಿಎನ್‌ಜಿ–ಇಲೆಕ್ಟ್ರಿಕ್ ಆಟೋ ಡಿಕ್ಕಿ; ಇಬ್ಬರಿಗೆ ಗಾಯ
ಬಂದ್ಯೋಡು ಅಡ್ಕದಲ್ಲಿ ಸಿಎನ್‌ಜಿ ಆಟೋರಿಕ್ಷಾ ಮತ್ತು ಎಲೆಕ್ಟ್ರಿಕಲ್ ಆಟೋರಿಕ್ಷಾ ನಡುವೆ ಸಂಭವಿಸಿದ ಡಿಕ್ಕಿಯಲ್ಲಿ ಇಬ್ಬರಿಗೆ ಗಾಯಗಳಾಗಿವೆ.ಸಿಎನ್‌ಜಿ ಆಟೋರಿಕ್ಷಾ ಚಾಲಕ ಹಕೀಮ್ ಮದ್ಯಪಾನ ಮಾಡಿದ್ದರಿಂದಲೇ ಅಪಘಾತ ಸಂಭವಿಸಿದೆ ಎಂಬ ಆರೋಪ ಕೇಳಿಬಂದಿದೆ. ಘಟನಾ ಸ್ಥಳಕ್ಕೆ ಬಂದ ಕುಂಬಳೆ ಎಸ್‌ಐ ಜಿಜೀಶ್ ಆಟೋ ಚಾಲಕ ಹಕೀಮ್ ಅವರನ್ನು ವೈದ್ಯಕೀಯ ಪರೀಕ್ಷೆಗೆಂದು ವಶಕ್ಕೆ ಪಡೆದು ಕರೆದೊಯಿದಿದ್ದಾರೆಇವರು ಪ್ರತಿದಿನವೂ ಮದ್ಯಪಾನ ಮಾಡುತ್ತಾರೆ ಎಂಬುದಾಗಿ ಇತರ ಆಟೋ ಚಾಲಕರು ಪೊಲೀಸರಿಗೆ ತಿಳಿಸಿದ್ದಾರೆ.
