ಯಶಸ್ವಿ ಕಲಾವಿದೆರ್ ಮಂಜೇಶ್ವರದ “ಮಂಗಳಾಗಿರಿ” ನಾಟಕಕ್ಕೆ ಶುಭ ಮುಹೂರ್ತ, ಪೋಸ್ಟರ್ ಬಿಡುಗಡೆ
ಯಶಸ್ವಿ ಕಲಾವಿದೆರ್ ಮಂಜೇಶ್ವರ ತಂಡದ 10 ನೇ ವರ್ಷದ ನಾಟಕ “ಮಂಗಳಾಗಿರಿ” ಯ ಶುಭ ಮುಹೂರ್ತ ಹಾಗೂ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ಮಂಜೇಶ್ವರ ಹೊಸಬೆಟ್ಟು ಜಮ್ಮದಮನೆ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಇಂದು ಬೆಳಗ್ಗೆ ನಡೆಯಿತು. ಕ್ಷೇತ್ರದ ಅರ್ಚಕರಾದ ರಾಮಚಂದ್ರ ಐತಾಳ್ ಬಡಾಜೆಯವರು ಕ್ಷೇತ್ರ ಮಾತೆಗೆ ವಿಶೇಷ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಿದರು. ನೂತನ ನಾಟಕದ ಪೋಸ್ಟರ್ ನ್ನು ನಾಟಕದ ನಿರ್ದೇಶಕರಾದ ಎಂ.ಎಸ್ ರವಿ ವರ್ಕಾಡಿ ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿದ ಅವರು “ಯಶಸ್ವಿ ಕಲಾವಿದರು” ಸಂಸ್ಥೆಯು ಹಲವು ವರ್ಷಗಳಿಂದ…