ವಿಮಾನ ದುರಂತದಲ್ಲಿ ಮೃತ ಪಟ್ಟ ಪ್ರಯಾಣಿಕರಿಗೆ ಸಂತಾಪ ಸೂಚಿಸಿದ -ಗಣೇಶ್ ಪಾವೂರು

ಮಂಜೇಶ್ವರ :ಗುಜರಾತ್ನ ಅಹ್ಮದಾಬಾದ್ ನಲ್ಲಿ ನಡೆದ ಬೋಯಿಂಗ್ ವಿಮಾನ ದುರಂತದಲ್ಲಿ ಮೃತ ಪಟ್ಟ ಪ್ರಯಾಣಿಕರಿಗೆ ತೀಯಾ ವೆಲ್ಫೇರ್ ಅಸೋಸಿಯೇಷನ್ ಕಾಸರಗೋಡು ಜಿಲ್ಲಾ ಅಧ್ಯಕ್ಷ ಗಣೇಶ್ ಪಾವೂರು ಸಂತಾಪ ಸೂಚಿಸಿದ್ದಾರೆ. ಬದುಕಿ ಉಳಿದ ಗಾಯಲು ಬೇಗ ಗುಣ ಮುಖರಾಗಲಿ ಏಂದು ಅವರು ಹಾರೈಸಿದ್ದಾರೆ ಹಾಗೂ ಇದನ್ನು ಕೇಂದ್ರ ಸರಕಾರ ತನಿಖೆ ನಡೆಸಿ ಇದರ ಸತ್ಯಂಶವನ್ನು ಕಂಡು ಹಿಡಿಯಬೇಕು ಏಂದು ಗಣೇಶ್ ಪಾವೂರು ಅಗ್ರಹಿಸಿದ್ದಾರೆ ಈ ದುರಂತದಲ್ಲಿ ಮೃತ ಪಟ್ಟ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳಿಗೆ ಅವರು ಸಂತಾಪ ಸೂಚಿಸಿದ್ದಾರೆ.

Read More

ಜನಜಾಗೃತಿಯ ಹಾದಿಯಲ್ಲಿ ದೀಪ ಜ್ಯೋತಿಯಾಗಿದ್ದ ಕುಳೂರು ಬೀಡು ಕೆ.ದಾಸಣ್ಣ ಆಳ್ವ ನಿಧನ

ಮಂಜೇಶ್ವರ: ಮೀಂಜ ಗ್ರಾಮ ಪಂಚಾಯಿತು ವ್ಯಾಪ್ತಿಯ ಕುಳೂರು ಗ್ರಾಮದ, ಸಮಾಜಸೇವೆ ಮತ್ತು ಜನಜಾಗೃತಿಯ ಹಾದಿಯಲ್ಲಿ ದೀಪದಂತೆ ಜ್ಯೋತಿ ಹರಡಿದ್ದ ಹಿರಿಯ ಸಮಾಜ ಸೇವಕ ಹಾಗೂ ಕುಳೂರು ಬೀಡಿನ ಮನೆತನದ ಹಿರಿಯ ಸದಸ್ಯ ಧಾರ್ಮಿಕ, ಕುಳೂರು ಬೀಡು ಕೆ. ದಾಸಣ್ಣ ಆಳ್ವ (93) ಇಂದು ಮುಂಜಾನೆ ನಿಧನರಾಗಿದ್ದಾರೆ. ಅಸೌಖ್ಯ ನಿಮ್ಮಿತ ಕಳೆದ ಒಂದು ವಾರದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು ಚಿಕಿತ್ಸೆಗೆ ಸ್ಪಂಧಿಸದ ಹಿನ್ನೆಲೆಯಲ್ಲಿ ಇಂದು ಮುಂಜಾನೆ ಕೊನೆಯುಸಿರೆಳೆದಿದ್ದಾರೆ. ಮೃತರ ಅಂತ್ಯಕ್ರಿಯೆಯ ವಿಧಿ ವಿಧಾನಗಳು ಅಪರಾಹ್ನ 3.30 ಕ್ಕೆ…

Read More

ಗುಜರಾತ್ ನ ಅಹಮದಾಬಾದ್ ನ ಮೇಘಾನೀ ಪ್ರದೇಶದಲ್ಲಿ ನೆಲಕ್ಕಪ್ಪಳಿಸಿದ ಏರ್ ಇಂಡಿಯಾ ಬೋಯಿಂಗ್ 787-8 ವಿಮಾನ

ಗುಜರಾತಿನ ಅಹ್ಮದಾಬಾದ್ ನ ಮೇಘನಿ ನಗರ ಪ್ರದೇಶದಲ್ಲಿ ಇಂದು ಮಧ್ಯಾಹ್ನ ಏರ್ ಇಂಡಿಯಾ ವಿಮಾನ ಪತನವಾಗಿದೆ. ಸರದಾರ್ ವಲ್ಲಭಾ ಭಾಯಿ ಪಟೇಲ್ ವಿಮಾನ ನಿಲ್ದಾಣದಿಂದ ಟೇಕಾಫ್ ಆದ ಕೂಡಲೇ ವಿಮಾನ ಫತನವಾಗಿದ್ದು, ವಿಮಾನದಲ್ಲಿ 242ಪ್ರಯಾಣಿಕರಿದ್ದರು. ಇದರಲ್ಲಿ ಇಬ್ಬರು ಪೈಲಟ್ ಸೇರಿಜಂತೆ 12ಮಂದಿ ವಿಮಾನ ಸಿಬಂದಿಗಳೆನ್ನಲಾಗಿದೆ. ವಿಮಾನ ನಿಲ್ದಾಣ ಬಳಿಯಲ್ಲೇ ಪತನವಾದ ವಿಮಾನದಿಂದ ಬೆಂಕಿ , ದಟ್ಟ ಹೊಗೆಯೇಳುತ್ತಿದೆ. ದಟ್ಟ ಜ್ವಾಲೆಯ ಹೊಗೆಯಿಂದ ಏನೂ ಕಾಣದ ಪರಿಸ್ಥಿತಿ ಇದೆಯೆಂದು ಪ್ರಾಥಮಿಕ ವರದಿ ಉಲ್ಲೇಖಿಸಿದೆ. ಜನರ ಸಾವು ನೋವಿನ ಮಾಹಿತಿ…

Read More

ಯಕ್ಷಕಿರೀಟಿ ಶ್ರಿಯುತ ಸುಬ್ರಾಯ ಹೊಳ್ಳರಿಗೆ ದುಬಾಯಿ ಯಕ್ಷ ಶ್ರೀ ರಕ್ಷಾ ಗೌರವ ಪ್ರಶಸ್ತಿ 2025

ದುಬೈ: ದಶಮಾನೋತ್ಸವ ಸಡಗರದಲ್ಲಿರುವ ಯಕ್ಷಗಾನ ಅಭ್ಯಾಸ ಕೇಂದ್ರ ಯು ಎ ಇ (YAKU) ವರ್ಷಂಪ್ರತಿ, ದುಬಾಯಿ ಅಥವ ತಾಯಿನಾಡಿನ ಯಕ್ಷಗಾನ ರಂಗದ ಸಾಧಕರೊಬ್ಬರನ್ನು ಗುರುತಿಸಿ, ನೀಡುತ್ತಾ ಬಂದಿರುವಂತೆ, 2024-2025 ನೇ ಸಾಲಿನ ಯಕ್ಷಶ್ರೀ ರಕ್ಷಾ ಗೌರವ ಪ್ರಶಸ್ತಿಯನ್ನು ಯಕ್ಷಗಾನದ ಪ್ರಾತಿನಿಧಿಕ ಕಲಾವಿದ, ಕಾಸರಗೋಡು ಶ್ರೀಯುತ ಸುಬ್ರಾಯ ಹೊಳ್ಳರಿಗೆ ನೀಡಲಾಗುವುದೆಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ. ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇಯ ದಶಮಾನೋತ್ಸವ ಕಾರ್ಯಕ್ರಮದಂಗವಾಗಿ ಜೂ.29 ರಂದು ಯಕ್ಷಧ್ರುವ ಪಟ್ಲ ಪೌಂಡೇಶನ್ ದುಬೈ (ಯುಎಇ) ಘಟಕದ ಸಹಯೋಗದೊಂದಿಗೆ ಕರಾಮದ ಇಂಡಿಯನ್…

Read More

ಬಿಲ್ಡಿಂಗ್ ಕಂಟ್ರಾಕ್ಟರ್ ಕಟ್ಟೆಬಜಾರ್ ನಿವಾಸಿ ವೆಂಕಟೇಶ್ ಹೃದಯಾಘಾತಕ್ಕೆ ಬಲಿ

ಮಂಜೇಶ್ವರ; ಹೊಸಂಗಡಿ ಕಟ್ಟೆಬಜಾರ್ ನಿವಾಸಿ ಬಿಲ್ಡಿಂಗ್ ಕಂಟ್ರಾಕ್ಟರ್ ಆಗಿ ಖ್ಯಾತಿ ಪಡೆದಿರುವ ವೆಂಕಟೇಶ್ (58) ಇಂದು ಬೆಳಗ್ಗಿನ ಜಾವಾ ಹೃದಯಾಘಾತದಿಂದ ನಿಧನಹೊಂದಿದ್ದಾರೆ. ನಿನ್ನೆ ರಾತ್ರಿ ಎಂದಿನಂತೆ ಊಟ ಮಾಡಿ ಮಲಗಿದ್ದು ಇಂದು ಬೆಳಗ್ಗೆ ಮಂಚದಿಂದ ಕೆಳಗೆ ಕುಸಿದು ಬಿದ್ದಿದ್ದಾರೆ. ತಕ್ಷಣ ಸ್ಥಳೀಯರು ಹೊಸಂಗಡಿ ಖಾಸಗಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಮುಂದಿನ ಚಿಕಿತ್ಸೆಗೆ ಮಂಗಳೂರಿನ ದೇರಳಕಟ್ಟೆ ಆಸ್ಪತ್ರೆಗೆ ಸಾಗಿಸುವ ಮಧ್ಯೆ ನಿಧನರಾದರು. ಇವರು ಕಟ್ಟೆಬಜಾರ್ ನಿವಾಸಿ ದಿ. ಸೀತಾರಾಮ ಮತ್ತು ದಿ. ಲೀಲಾವತಿ ಪುತ್ರನಾದ ಇವರು ಪತ್ನಿ…

Read More

ತುಳುನಾಡಿನ ಸ್ಪೆಷಲ್ ಹಲಸಿನ ಹಣ್ಣಿನ ಅಪ್ಪ

ಬೇಕಾಗುವ ಸಾಮಗ್ರಿಗಳು ಹಲಸಿನ ಹಣ್ಣಿನ ಅಪ್ಪ ತಯಾರಿಸಲು ಸೂಚನೆಗಳು : ಮೊದಲಿಗೆ ಅಕ್ಕಿಯನ್ನು ತೊಳೆದು 2 ಗಂಟೆಗಳ ಕಾಲ ನೆನೆಸಿಡಿ. ನೀವು ಅಕ್ಕಿಯ ಬದಲು ಅಕ್ಕಿ ಹಿಟ್ಟನ್ನು ಬಳಸಿ ನೇರವಾಗಿ ಸೇರಿಸಬಹುದು. ಆದರೆ ನೆನೆಸಿದ ಅಕ್ಕಿ ಉತ್ತಮ ವಿನ್ಯಾಸ ಮತ್ತು ರುಚಿಯನ್ನು ನೀಡುತ್ತದೆ . ಹಲಸಿನ ಹಣ್ಣನ್ನು ಕತ್ತರಿಸಿ, ಬೀಜ ತೆಗೆದು ಬೇಡದ ಭಾಗಗಳನ್ನು ತ್ಯಜಿಸಿ. ಸುಲಭವಾಗಿ ರುಬ್ಬಲು ನೀವು ಹಲಸಿನ ಹಣ್ಣನ್ನು ಕತ್ತರಿಸಬಹುದು.ಅಕ್ಕಿಯನ್ನು ನೆನೆಸಿದ ನಂತರ ನೀರನ್ನು ಸಂಪೂರ್ಣವಾಗಿ ಬಸಿದುಕೊಳ್ಳಿ. ನಂತರ ನೆನೆಸಿದ ಅಕ್ಕಿ, ಹಲಸು,…

Read More

ಶ್ರೀ ರಾಜ ಬೆಳ್ಚಪ್ಪಾಡ ಸೇವಾ ಟ್ರಸ್ಟ್ ನ ಏಳನೇ ವಾರ್ಷಿಕೋತ್ಸವದ ಅಂಗವಾಗಿ ಬಡಮಕ್ಕಳಿಗೆ ಕಲಿಕೋಪಕರಣ ವಿತರಣೆ

ಮಂಜೇಶ್ವರ : ಶ್ರೀ ರಾಜ ಬೆಳ್ಳಪ್ಪಾಡ ಸೇವಾ ಟ್ರಸ್ಟ್ ಉದ್ಯಾವರ ಮಾಡ ಇದರ ವತಿಯಿಂದ ಸಂಸ್ಥೆಯ 7 ನೇ ವರ್ಷದ ವಾರ್ಷಿಕೋತ್ಸವ ದ ಅಂಗವಾಗಿ ಬಡ ಶಾಲಾ ಮಕ್ಕಳ ಕಲಿಕೆಗೆ ಬೇಕಾದ ಸಾಮಾಗ್ರಿಗಳ ಕಿಟ್ ಳನ್ನು ಉದ್ಯಾವರ ಮಾಡದ ಸತ್ಯ ದೈವಗಳ ಭಂಡಾರ ಮನೆಯಲ್ಲಿ ಪ್ರಾರ್ಥನೆ ಮಾಡಲಾಯಿತು. ಬಳಿಕ ಅನ್ಯ ರಾಜ್ಯದ ವಲಸೆ ಕಾರ್ಮಿಕರ ಬಡ ಮಕ್ಕಳೇ ತುಂಬಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ತಲಪಾಡಿಯ ವಿದ್ಯಾರ್ಥಿಗಳಿಗೆ ಹಸ್ತಾಂತರ ಮಾಡಲಾಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ಮಾರ್ಗದರ್ಶಕ ರಾಜ…

Read More

ಬಾಯಾರು ಆರೋಗ್ಯ ಕೇಂದ್ರದ ಅವಗಣನೆಗೆ ಎದುರಾಗಿ ಯು ಡಿ ಎಫ್ ಬೃಹತ್ ಪ್ರತಿಭಟನೆ

ಮಂಜೇಶ್ವರ : ಬಾಯಾರು ಕುಟುಂಬ ಆರೋಗ್ಯ ಕೇಂದ್ರದ ಅವಗಣನೆಗೆ ಎದುರಾಗಿ ಯು ಡಿ ಎಫ್ ಪೈವಳಿಕೆ ಪಂಚಾಯತ್ ಸಮಿತಿ ವತಿಯಿಂದ ಬೃಹತ್ ಪ್ರತಿಭಟನಾ ಮಾರ್ಚ್ ಮತ್ತು ಧರಣಿ ನಡೆಸಿತು.ನೂತನ ಕಟ್ಟಡ ಚಿಕಿತ್ಸಾ ಸೌಲಭ್ಯಗಳೊಂದಿಗೆ ಆಸ್ಪತ್ರೆ ಕೂಡಲೇ ಕಾರ್ಯಾಚರಿಸಬೇಕು,ಅಗತ್ಯ ವೈದ್ಯರ ಸೇವೆ ಲಭ್ಯವಾಗಬೇಕು,ಅಗತ್ಯದ ಔಷಧಗಳ ಲಭ್ಯತೆ ಖಾತರಿಪಡಿಸಬೇಕು ಮತ್ತು ಸಂಧ್ಯಾ ಸಮಯದಲ್ಲಿ ಹೊರ ರೋಗಿಗಳ ವಿಭಾಗ ಕಾರ್ಯಾಚರಿಸಬೇಕು.ಎಂಬಿತ್ಯಾದಿ ಬೇಡಿಕೆಗಳನ್ನು ಮುಂದಿಟ್ಟು ಗ್ರಾಮಾಧಿಕಾರಿ ಕಚೇರಿ ಪರಿಸರದಿಂದ ಆರಂಭಗೊಂಡ ಮಾರ್ಚ್ ಕುಟುಂಬ ಆರೋಗ್ಯ ಕೇಂದ್ರ ಪರಿಸರದಲ್ಲಿ ಸಮಾಪ್ತಿಗೊಂಡಿತು. ನಂತರ ನಡೆದ ಪ್ರತಿಭಟನಾ…

Read More

ಪ್ರಾಣಿಪ್ರಿಯೆ ಶಶಿಕಲಾ ಕೊಳೆತ ಸ್ಥಿತಿಯಲ್ಲಿ ಶವವಾಗಿ ಪತ್ತೆ

ಮಂಗಳೂರು : ಮಂಗಳೂರಿನ ಹೊರವಲಯದ ಕುಂಜತ್ತಬೈಲ್ ನಲ್ಲಿ ಒಂಟಿ ಮಹಿಳೆಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಪರಿಸರವಾಸಿಗಳಿಗೆ ಅತೀವ ವೇದನೆ ತಂದಿದೆ ಮತ್ತು ನಮಗೆ ಇದು ತುಂಬಲಾರದ ನಷ್ಟವಾಗಿದೆ ಎಂದು ಸ್ಥಳೀಯರು ತಮ್ಮ ಅಳಲನ್ನು ವ್ಯಕ್ತಪಡಿಸಿದ್ದಾರೆ. 60 ರ ಹರೆಯದ ಶಶಿಕಲಾ ಶೆಟ್ಟಿ ಒಂಟಿ ಮಹಿಳೆ , ಪರಿಸರ ಪ್ರೇಮಿ ಮತ್ತು ಪ್ರಾಣಿ ಪಕ್ಷಿಗಳನ್ನು ಅತಿಯಾಗಿ ಪ್ರೀತಿಸುತ್ತಿದ್ದರು.ಅದರಲ್ಲೂ ಅಸಂಖ್ಯ ಸಂಖ್ಯೆಯ ಶ್ವಾನಗಳನ್ನು ಇವರು ಸಾಕುತ್ತಿದ್ದರು.ಎಷ್ಟೊಂದು ಸಂಖ್ಯೆಯ ಶ್ವಾನಗಳು ಇವರ ಮನೆಯ ಆವರಣದಲ್ಲಿ ಇರುವುದರಿಂದ ಯಾರೊಬ್ಬರೂ ಸುಲಭವಾಗಿ ಮನೆಯೊಳಗೆ…

Read More

ವಿವಿಧ ಬೇಡಿಕೆ ಈಡೇರಿಕೆ ಒತ್ತಾಯಿಸಿ BKMU ವತಿಯಿಂದ ಬ್ರಹತ್ ಮಾರ್ಚ್ ಹಾಗೂ ಧರಣಿ.

ಕೃಷಿ ಕಾರ್ಮಿಕರಿಗಾಗಿ ಸಮಗ್ರ ರಾಷ್ಟ್ರೀಯ ಕಾನೂನು ಜಾರಿಗೆ ತರಬೇಕು,ಭೂರಹಿತರಿಗೆ ಭೂಮಿ ಮಂಜೂರು ಮಾಡಬೇಕು,ಸಾಮಾಜಿಕ ಭದ್ರತಾ ಪಿಂಚಣಿಗಳನ್ನು ರೂ. 6,000ಕ್ಕೆ ಹೆಚ್ಚಿಸಿ ಜಾತಿ ಗಣತಿ ಜಾರಿಗೊಳಿಸಿ ಖಾಸಗಿ ವಲಯದಲ್ಲಿ ಎಸ್.ಸಿ, ಎಸ್.ಟಿ, ಓ.ಬಿ.ಸಿ ಮೀಸಲಾತಿ ಜಾರಿಗೆ ತರಬೇಕು,ಉದ್ಯೋಗ ಖಾತರಿ ಯೋಜನೆಯನ್ನು ನಾಶ ಮಾಡುವ ಕೇಂದ್ರ ಸರಕಾರದ ಪ್ರಯತ್ನಗಳನ್ನು ಕೊನೆ ಗೊಳಿಸಿ ಕೆಲಸದ ದಿನಗಳು ಮತ್ತು ವೇತನವನ್ನು ಹೆಚ್ಚಿಸಬೇಕು ಮೊದಲಾದ ಬೇಡಿಕೆಗಳನ್ನು ಮುಂದಿರಿಸಿಕೊಂಡು ಕೃಷಿ ಕಾರ್ಮಿಕ ರ ಯೂನಿಯನ್ (BKMU) ವತಿಯಿಂದಕೇರಳದ 140 ವಿಧಾನ ಸಭಾ ವ್ಯಾಪ್ತಿಯ ಕೇಂದ್ರ ಸರಕಾರಿ…

Read More
error: Content is protected !!