ವಿಧವೆಯರನ್ನು ಮರುಮದುವೆಯಾಗುವುದೆಂದು ನಂಬಿಸಿ ವಂಚಿಸಿದಆರೋಪಿಯ ಬಂಧನ

ಕಾಸರಗೋಡು: ಮರು ಮದುವೆಗೆ ಬಯಸುತ್ತಿದ್ದ ವಿಧವೆ ಮಹಿಳೆಯರನ್ನು ಮದುವೆಯಾಗುವ ಭರವಸೆಯಿಂದ ಬಲೆಗೆ ಬೀಳಿಸಿ , ಅವರ ಜೊತೆ ಸುತ್ತಾಡಿ ಲೈಂಗಿಕವಾಗಿ ಬಳಸಿಕೊಂಡು ವಿಲಾಸಿ ಜೀವನ ನಡೆಸಿ ವಂಚಿಸುತ್ತಿದ್ದ ವ್ಯಕ್ತಿಯನ್ನು ಕಾಸರಗೋಡು ವನಿತಾ ಪೋಲೀಸರು ಬಂಧಿಸಿದ್ದಾರೆ. ಕೇರಳದ ತೃಶ್ಶೂರು ಜಿಲ್ಲೆಯ ಕೈಪಮಂಗಲಂ ಕೂರಿಕಳ ನಿವಾಸಿ ಶೋಭಿ ಯಾನೆ ಪ್ರಶೋಬ್ (36)ಬಂಧಿತ ವ್ಯಕ್ತಿಯಾಗಿದ್ದಾನೆ. ಕಾಸರಗೋಡು ವನಿತಾ ಪೋಲೀಸ್ ಠಾಣಾ ವ್ಯಾಪ್ತಿಯ ಓರ್ವ ಮಹಿಳೆ ಜಿಲ್ಲಾ ಪೋಲೀಸ್ ವರಿಷ್ಠರಿಗೆ ನೀಡಿದ್ದ ದೂರಿನ ಹಿನ್ನೆಲೆಯಲ್ಲಿ ಈತನ ಕುರಿತು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ….

Read More

ಸಂಪೂರ್ಣ ಹದಗೆಟ್ಟಿದ ವರ್ಕಾಡಿ ರಸ್ತೆ ಸ್ಥಳೀಯರ ಆಕ್ರೋಶ

ಮಂಜೇಶ್ವರ: ವರ್ಕಾಡಿ ಪಂಚಾಯತ್‌ ವ್ಯಾಪ್ತಿಯ 2 ಹಾಗೂ 15 ನೇ ವಾರ್ಡ್‌ಗಳಿಗೆ ಸೇರಿದ ಮುಡಿಮಾರ್ ಮತ್ತು ಸುಂಕದಕಟ್ಟೆಯನ್ನು ಹಾಗೂ ಕರ್ನಾಟಕದ ಗಡಿಯನ್ನು ಸುಲಭವಾಗಿ ಸಂಪರ್ಕಿಸುವ ರಸ್ತೆ ಸಂಪೂರ್ಣವಾಗಿ ಹದೆಗೆಟ್ಟಿದ್ದರೂ ಅಧಿಕಾರಿಗಳಾಗಲೀ ಜನಪ್ರತಿನಿಧಿಗಳಾಗಲೀ ಯಾರೂ ಇತ್ತ ಗಮನ ಹರಿಸದೆ ಇರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಈ ರಸ್ತೆಯನ್ನು ಅವಲಂಬಿಸಿ ಸುಮಾರು 250 ಕುಟುಂಬಗಳು ಇಲ್ಲಿ ವಾಸಿಸುತ್ತಿದೆ. ಈ ರಸ್ತೆ ಭಾರೀ ಶೋಚನೀಯಾವಸ್ಥೆಗೆ ತಲುಪಿದೆ. 15 ವರ್ಷಗಳ ಹಿಂದೆ ನಿರ್ಮಿಸಲಾದ ಈ ರಸ್ತೆಗೆ ಮರು ಡಾಮಾರೀಕರಣ ಮಾಡುವ ಎಲ್ಲಾ ಸಿದ್ಧತೆಗಳು…

Read More

ಪರಿಸರ ದಿನ

ಹಚ್ಚ ಹಸುರಿನ ನಡುವೆಮದುಮಗಳ ಸಿಂಗಾರದಂತೆಮಿನುಗುವಳು ಭೂದೇವಿ.ತಾನೂ ಬದುಕುವುದರೊಂದಿಗೆಇತರ ಜೀವಿಗಳಿಗೂಆಶ್ರಯತಾಣವಾಯಿತು ವೃಕ್ಷ. ಸುತ್ತಲಿನ ಪರಿಸರವುಮನುಜನಿಗೆ ವರವುಸ್ವಚ್ಛ ಪರಿಸರವೇಆರೋಗ್ಯದಾಯಕವು.ಪ್ರಕೃತಿಯು ಜೀವಿಗಳಿಗೆಅತಿ ಅಗತ್ಯವುನಾವು ಇಲ್ಲದಿರೆ ಇರುವುದುಪ್ರಕೃತಿಯುಪ್ರಕೃತಿಯು ಇಲ್ಲದಿರೆ ಮನುಜನಿಗೆಇರುವುದೇ ಉಳಿಗಾಲವು?ಇದನರಿತು ನಡೆದರೆಬದುಕು ಸುಂದರ ಪಯಣ.ಉಳಿಸೋಣ ಬೆಳೆಸೋಣಮರಗಿಡ ಬಳ್ಳಿಗಳಒಂದೇ ದಿನಕ್ಕಲ್ಲ ಪರಿಸರ ದಿನಪ್ರತಿದಿನವು ಇರಲಿಪರಿಸರ ಕಾಳಜಿಯು. ✍️..ಸುಜಿತ್ ಕುಮಾರ್ ಬೇಕೂರ್

Read More

ಉಪ್ಪಳ ತಾಲೂಕು ಆಸ್ಪತ್ರೆ ಯಲ್ಲಿ ವೈದ್ಯರ ಸಿಬ್ಬಂದಿಗಳ ಕೊರತೆ: ಆಸ್ಪತ್ರೆ ಮುಂಭಾಗದಲ್ಲಿ ಯೂತ್ ಕಾಂಗ್ರೆಸ್ ಧರಣಿ

ವೈದ್ಯರು ಹಾಗೂ ಸಿಬ್ಬಂದಿಗಳು ಸಾಕಷ್ಟು ಇಲ್ಲದೆ ರಾತ್ರಿ ಹೊತ್ತಿನ ಚಿಕಿತ್ಸೆಯನ್ನು ಸ್ಥಗಿತಗೊಳಿಸಿರುವ ಮಂಜೇಶ್ವರ ತಾಲೂಕು ಹೆಡ್ ಕ್ವಾಟರ್ಸ್ ಆಸ್ಪತ್ರೆಗೆ ಇಂಡಿಯನ್ ಯೂತ್ ಕಾಂಗ್ರೆಸ್ ಮಂಜೇಶ್ವರ ಅಸೆಂಬ್ಲಿ ಸಮಿತಿಯ ನೇತೃತ್ವದಲ್ಲಿ ಇಂದು ಪ್ರತಿಭಟನಾ ಮಾರ್ಚ್ ಹಾಗೂ ಧರಣಿ ನಡೆಯಿತು. ನಾಯಬಜಾರ್ ನಲ್ಲಿರುವಆಸ್ಪತ್ರೆ ಗೆ ಯೂತ್ ಕಾಂಗ್ರೆಸ್ ಅಸೆಂಬ್ಲಿ ಸಮಿತಿಯ ಅಧ್ಯಕ್ಷ ಜುನೈದ್ ಉರ್ಮಿ ಇವರ ಅಧ್ಯಕ್ಷತೆಯಲ್ಲಿ ಕೆಪಿಸಿಸಿ ಸದಸ್ಯ ಹಕ್ಕಿಂ ಕುನ್ನಿಲ್ ಧರಣಿಯನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಕೇರಳ ರಾಜ್ಯ ಸರ್ಕಾರ ಆರೋಗ್ಯ ರಂಗದಲ್ಲಿ ಪೂರ್ಣ ವಿಫಲಗೊಂಡಿದ್ದು,…

Read More

ದೇಲಂಪಾಡಿ ಪ್ರದೇಶದಲ್ಲಿ ಜನರ ಜೀವ ಮತ್ತು ಆಸ್ತಿಯನ್ನು ಸಂರಕ್ಷಿಸಲು ಎಂ.ಎಲ್. ಅಶ್ವಿನಿ ಒತ್ತಾಯ.

ವನ್ಯಜೀವಿಗಳ ಹಾವಳಿ ಹೆಚ್ಚಾಗಿ ಕಂಡುಬರುವ ದೇಲಂಬಾಡಿ ಪಂಚಾಯಿತಿನ ಜನರ ಜೀವ ಮತ್ತು ಆಸ್ತಿಯನ್ನು ರಕ್ಷಿಸಿ, ಸೌರ ಬೇಲಿ, ಬೀದಿ ದೀಪ ಮತ್ತು ಎಚ್ಚರಿಕೆ ವ್ಯವಸ್ಥೆಗಳನ್ನು ಅಳವಡಿಸಬೇಕೆಂದು ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷೆ ಎಂ.ಎಲ್.ಅಶ್ವಿನಿ ಒತ್ತಾಯಿಸಿದ್ದಾರೆ.ಬಿಜೆಪಿ ದೇಲಂಪಾಡಿ ಪ್ರಾದೇಶಿಕ ಸಮಿತಿ ನೇತೃತ್ವದಲ್ಲಿ ಪರಪ್ಪದಲ್ಲಿರುವ ಅರಣ್ಯ ಇಲಾಖೆ ಮರದ ಡಿಪೋದಲ್ಲಿ ನಡೆದ ಧರಣಿಯನ್ನು ಅವರು ಉದ್ಘಾಟಿಸಿ ಮಾತನಾಡಿದರು . ಕಾಡು ಪ್ರಾಣಿಗಳ ದಾಳಿಯಿಂದ ಬೆಳೆಗಳು ಹಾನಿಗೊಳಗಾದಾಗ, ಕೇವಲ ಅತ್ಯಲ್ಪ ಪರಿಹಾರವನ್ನು ಮಾತ್ರ ನೀಡಲಾಗುತ್ತದೆ. ಈ ಮೊತ್ತ ಫಲಾನುಭವಿಗಳಿಗೆ ಸಿಗುವಾಗ ಬಹಳಷ್ಟು ವಿಳಂಬವು…

Read More

ಎಪ್ಪತ್ತರ ಹರೆಯದ್ಲಲೂ ಇಪ್ಪತ್ತರ ಹರೆಯದಂತೆ ಲವಲವಿಕೆಯಿಂದ ಯಕ್ಷಗಾನ ತರಗತಿ ನೀಡುತ್ತಿರುವ ಯಕ್ಷಗುರು ಶ್ರೀ ರಾಮ ಸಾಲಿಯಾನ್ ಮಂಗಲ್ಪಾಡಿ

ಯಕ್ಷಗಾನವನ್ನು ಒಂದು ಜಾನಪದ ಕಲೆ ಎಂದು ನಾವು ಕರೆಯುತ್ತಿದ್ದರೂ ಅದು ಕಾಲಾನುಗತವಾಗಿ ಜಾನಪದಕ್ಕಿಂತ ಭಿನ್ನವಾದ ವಾತಾವರಣದಲ್ಲಿ ಬೆಳೆದು ಬಂದಿದೆ ಎನ್ನುವುದು ನಿರ್ವಿವಾದ . ಯಕ್ಷಗಾನವು ಯಾವುದೇ ಒಂದು ಕಲೆಯ ಅಂಗವಲ್ಲ .ಸ್ವಯಂ ಪೂರ್ಣತೆಯನ್ನು ಪಡೆದ ಒಂದು ಸಮಷ್ಟಿ ಕಲೆ .ಯಕ್ಷಗಾನ ಕಲೆಯ ಮೂಲ ಆದಿಮಾನವನ ಕಲ್ಪನೆ,ಚಿಂತನೆಗಳ ಫಲ . ಯಕ್ಷಗಾನದಲ್ಲಿ ಸಾಹಿತ್ಯ ಸಂಗೀತ,ಅಭಿನಯ ,ಅಲಂಕಾರಗಳು ಪರಸ್ಪರ ಪೂರಕವಾಗಿ ಕ್ರಿಯಾಶೀಲವಾಗಿರುತ್ತದೆ.ಇದರಲ್ಲಿ ಸಾಹಿತ್ಯಕ್ಕೆ ಅಕ್ಷರವು ಮಾದ್ಯಮವಾಗುತ್ತದೆ.ಅಭಿನಯಕ್ಕೆ ನಟ ಮಾಧ್ಯಮನಾಗಿದ್ದಾನೆ.ಅಲಂಕಾರಕ್ಕೆ ಬೌತಿಕ ವಸ್ತುಗಳು,ಸಲಕರಣೆಗಳು ಮಾದ್ಯಮವಾಗಿರುತ್ತದೆ.ಶತಮಾನಗಳ ಇತಿಹಾಸವನ್ನು ದಾಟಿ ಬಂದರೂ ಈ ಕಲೆ…

Read More

ಮೂಡಂಬೈಲ್ ಶಾಲೆಯಲ್ಲಿ ನೂತನವಾಗಿ ನಿರ್ಮಿಸಿದ ಶೌಚಾಲಯ ಮತ್ತು ಶುದ್ಧ ಕುಡಿಯುವ ನೀರಿನ ಯೋಜನೆಯ ಉದ್ಘಾಟನೆ.

ಸರಕಾರಿ ಪ್ರೌಢಶಾಲೆ ಮೂಡಂಬೈಲ್ ನಲ್ಲಿ ಜಿಲ್ಲಾ ಪಂಚಾಯತಿನ ವತಿಯಿಂದ ಒದಗಿಸಲಾದ ಆಧುನಿಕ ವ್ಯವಸ್ಥೆಯನ್ನು ಒಳಗೊಂಡಿರುವ ಶೌಚಾಲಯವನ್ನು ಹಾಗೂ ಶುದ್ಧ ಜಲ ನೀರಿನ ಯೋಜನೆಯನ್ನು ಕಾಸರಗೋಡು ಜಿಲ್ಲಾ ಪಂಚಾಯತ್ ಸದಸ್ಯೆಯಾದ ಶ್ರೀಮತಿ ಕಮಲಾಕ್ಷಿ ಅವರು ನಿರ್ವಹಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಅಬ್ದುಲ್ಲಾ ಪಜಿಂಗರ್ ಅವರು ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಮಿಂಚಾಯತ್ ಉಪಾಧ್ಯಕ್ಷರಾದ ಜಯರಾಮ ಬಲ್ಲಂಗುಡೆಯಲು ಹಾಗೂ ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿಯಾದ ಜಾರ್ಜ್ ಕ್ರಾಸ್ತಾರವರು ಸಭೆಯಲ್ಲಿ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯನಿ ಶ್ರೀಮತಿ ದಯಾವತಿ ಅವರು ಅತಿಥಿಗಳನ್ನು…

Read More

ಐಪಿಎಲ್ ನಲ್ಲಿ ಚೊಚ್ಚಲ ಪ್ರಶಸ್ತಿ ಗೆದ್ದ ಆರ್.ಸಿ ಬಿ

ಅಹ್ಮದಾಬಾದ್: ಐಪಿಎಲ್ ಕ್ರಿಕೆಟ್ ಚರಿತೆಯ 18ವರ್ಷಗಳ ಕಾಯುವಿಕೆಗೆ ಕೊನೆಗೂ ಬೆಂಗಳೂರು ರಾಯಲ್ ಚಾಲೆಂಜರ್ಸ್ ಪಾಲಿಗೆ ವಿಜಯಲಕ್ಷ್ಮಿ ಒಲಿದಿದ್ದಾಳೆ. “ಈ ಸಲ ಕಪ್ ನಮ್ದೇ ” ಎಂಬ ಭರವಸೆಯ ಮಾತು ಪೊಳ್ಳಾಗಲಿಲ್ಲ. ಐಪಿಎಲ್ ಸೀಸನ್ -18ರ ಕಿರೀಟವನ್ನು ರಾಯಲ್ ಚ್ಯಾಲೆಂಜರ್ಸ್ ಬೆಂಗಳೂರು ವೀರೋಚಿತವಾಗಿ ಗೆದ್ದುಕೊಂಡಿದೆ. ಅಹ್ಮದಾಬಾದಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಪಂಜಾಬ್ ಕಿಂಗ್ಸ್ ನ ಕೆಚ್ಚೆದೆಯ ಹೋರಾಟವನ್ನು ನಿಷ್ಕ್ರಿಯಗೊಳಿಸಿದ ಟೀಂ ಬೆಂಗಳೂರು ಪ್ರಪ್ರಥಮ ಬಾರಿಗೆ ಐಪಿಎಲ್ ಕಿರೀಟ ಗೆದ್ದುಕೊಂಡಿದೆ. ಕನ್ನಡ ನಾಡೆಲ್ಲಾ ಸಂಭ್ರಮಿಸುತ್ತಿದೆ. ಫೈನಲ್ ಪಂದ್ಯದಲ್ಲಿ ಟಾಸ್ ಸೋತು…

Read More

ಕನ್ನಡ ಭಾಷೆಗೆ ಅಪಮಾನ ಕಮಲ್ ಹಾಸನ್ ಗೆ ಚಾಟಿ ಬೀಸಿದ ಕರ್ನಾಟಕ ಹೈಕೋರ್ಟ್

ನೀವು ಇತಿಹಾಸಗಾರರೇ ? ಸಂಶೋದಕರೇ ? ಕಮಲ್ ಗೆ ಪ್ರಶ್ನೆ ಹಾಕಿದ ಹೈಕೋರ್ಟ್ ಇತ್ತೀಚಿಗೆ ಕಾರ್ಯಕ್ರಮವೊಂದರಲ್ಲಿ ಕನ್ನಡ ಭಾಷೆಯ ಬಗ್ಗೆ ಹಗುರವಾಗಿ ಮಾತನಾಡಿ ಕನ್ನಡಿಗರ ಆಕ್ರೋಶಕ್ಕೆ ಕಾರಣರಾದ ಚಿತ್ರನಟ ಕಮಲ್ ಹಾಸನ್ ಗೆ ಕರ್ನಾಟಕ ಉಚ್ಚ ನ್ಯಾಯಾಲಯ ಸರಿಯಾದ ಚಾಟಿ ಬೀಸಿದೆ. ಕನ್ನಡ ಭಾಷೆ ತಮಿಳು ಭಾಷೆಯಿಂದ ಹುಟ್ಟಿದೆ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ ನಂತರ ಕನ್ನಡ ಪರ ಸಂಘಟನೆಗಳ ಸಹಿತ ಕೋಟ್ಯಂತರ ಕನ್ನಡಿಗರು ಬಹಿರಂಗ ಕ್ಷಮೆ ಕೇಳಲು ಕಮಲ್ ಗೆ ಹೇಳಿದರೂ ನಾನು ಕ್ಷಮೆ ಕೇಳುವ…

Read More

ವಿವಿಧ ನೂತನ ಸೌಕರ್ಯ ಉದ್ಘಾಟನೆಯೊಂದಿಗೆ ವಾಮಂಜೂರು ಜಿ.ಎಲ್ ಪಿ ಶಾಲೆಯ ಶಾಲಾ ಪ್ರವೇಶೋತ್ಸವ

ಜಿ.ಎಲ್ ಪಿ ಶಾಲೆ ವಾಮಂಜೂರಿನಲ್ಲಿ ಶಾಲಾ ಮಟ್ಟದ ಪ್ರವೇಶೋತ್ಸವ ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಾರ್ಡು ಸದಸ್ಯರಾದ ಶ್ರೀಯುತ ಆದರ್ಶ್ ಬಿ.ಎಂ ವಹಿಸಿದ್ದರು. ಪ್ರವೇಶೋತ್ಸವದ ಉದ್ಘಾಟನೆಯನ್ನು ಮಂಜೇಶ್ವರ ಬ್ಲಾಕ್ ಪಂಚಾಯತ್ ಮೆಂಬರ್ ಆದ ಶ್ರೀಯುತ ಅಬ್ದುಲ್ ಹಮೀದ್ ಅವರು ನೆರವೇರಿಸಿದರು. ವಾಮಂಜೂರು ಶಾಲಾ ಹಳೆ ವಿದ್ಯಾರ್ಥಿಯಾದ ಶ್ರೀಯುತ ಮುಜಿಬು ರಹಿಮಾನ್ ಇವರು ಕೊಡುಗೆಯಾಗಿ ನೀಡಿದ ಇಂಗಿಷ್ ಭಾಷೆಯ ಲ್ಯಾಬ್ ಹಾಗೂ ಇಂಟರಾಕ್ಟಿವ್ ಪ್ಲಾಟ್ ಪ್ಯಾನಲ್ನ ಉದ್ಘಾಟನೆಯನ್ನು ನಿವೃತ್ತ ಡಿಡಿಇ ಶ್ರೀಯುತ ದಿನೇಶ್ ನೆರವೇರಿಸಿದರು. ಯುಕೆಜಿ ತರಗತಿಯನ್ನು…

Read More
error: Content is protected !!