ನರೇಗ ಬಚಾವೋ ಸಂಗ್ರಾಮ ರಾಷ್ಟ್ರವ್ಯಾಪಿ ಹೋರಾಟ: ಕೇಂದ್ರ ಸರಕಾರದ ವಿರುದ್ಧ ಬಂಟ್ವಾಳದಲ್ಲಿ ಕಾಂಗ್ರೆಸ್ ಪಾದಯಾತ್ರೆ ಘೋಷಣೆ – ರಮಾನಾಥ್ ರೈ
ಬಂಟ್ವಾಳ: ಯುಪಿಎ ಸರಕಾರದ ಅವಧಿಯಲ್ಲಿ ಜಾರಿಯಾದ ಮಹತ್ವಾಕಾಂಕ್ಷೆಯ ಕಾಯ್ದೆಯ ಮತ್ತು ಯೋಜನೆಗಳ ಹೆಸರು ಬದಲಾವಣೆ ಮಾಡಲು ಹೊರಟು ಕಾರ್ಯಕ್ರಮಗಳ ಮೂಲ ಸ್ಚರೂಪವೇ ಬದಲಾಗಿದೆ.ಅ ಕಾರಣಕ್ಕಾಗಿ ಕೇಂದ್ರ ಸರಕಾರದ ವಿರುದ್ದ ನರೇಗ ಬಚಾವೋ ಸಂಗ್ರಾಮ ಹಮ್ಮಿಕೊಂಡಿದ್ದು,ರಾಷ್ಟ್ರ ವ್ಯಾಪಿ ಸಂಗ್ರಾಮವಾಗಿದೆ. ಇದು ಜಿಲ್ಲಾ ಮಟ್ಟದಲ್ಲಿ ಹಾಗೂ ತಾಲೂಕು ಮಟ್ಟದಲ್ಲಿ ಕಾರ್ಯಕ್ರಮಗಳನ್ಬು ಬೇರೆ ಬೇರೆ ರೀತಿಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಸಚಿವ ಬಿ.ರಮಾನಾಥ್ ರೈ ಹೇಳಿದರು.ಅವರು ಪಾಣೆಮಂಗಳೂರು ಮತ್ತು ಬಂಟ್ವಾಳ ಕಾಂಗ್ರೆಸ್ ವತಿಯಿಂದ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ…
