ರಾಜಕೀಯ ಪಿತೂರಿಯಿಂದಾಗಿ ದೇಶದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ : ಶಾಹಿದ ತಸ್ನೀಮ್
ಬಿಸಿರೋಡ್-ಡಿ.10: ರಾಜಕೀಯ ಪಿತೂರಿಯ ಭಾಗವಾಗಿ ಕಾನೂನುಗಳನ್ನು ದುರ್ಬಳಕೆ ಮಾಡಿ ಅಮಾಯಕರನ್ನು ವಿಚಾರಣೆ ಇಲ್ಲದೆ ವರ್ಷಗಟ್ಟಲೆ ಜೈಲಲ್ಲಿ ಕೊಳೆಸುತ್ತಿರುವುದು ಮತ್ತು ಕೊನೆಗೆ ಸಾಕ್ಷ್ಯಧಾರಗಳೇ ಇಲ್ಲದೇ ಬಿಡುಗಡೆಯಾಗುತ್ತಿರುವುದು ಮಾನವ ಹಕ್ಕಿನ ಉಲ್ಲಂಘನೆಯಾಗಿದೆ. ಕರಾಳ ಕಾನೂನುಗಳನ್ನು ತಮ್ಮ ಸ್ವಚ್ಛಾಚಾರಕ್ಕೆ ದುರ್ಬಳಕೆ ಮಾಡಿದ ಅಧಿಕಾರಿಗಳನ್ನು ಉತ್ತರದಾಯಿಗಳನ್ನಾಗಿಸಬೇಕು ಮತ್ತು ಮುಗ್ಧರಿಗೆ ಪರಿಹಾರ ಒದಗಿಸಬೇಕು. ಅತಿ ಹೆಚ್ಚು ದುರ್ಬಳಕೆಗೀಡಾಗುತ್ತಿರುವ ಇಂತಹ ಕರಾಳ ಕಾನೂನುಗಳನ್ನು ತಕ್ಷಣ ಹಿಂಪಡೆಯಬೇಕು. ಇದಕ್ಕಾಗಿ ಜನಾಂದೋಲನ ರೂಪಿಸಲು ಇಂದಿನ ವಿಶ್ವ ಮಾನವ ಹಕ್ಕುಗಳ ದಿನ ಪ್ರೇರಣೆಯಾಗಲಿ ಎಂದು ವಿಮೆನ್ ಇಂಡಿಯಾ ಮೂವ್ಮೆಂಟ್ ರಾಷ್ಟ್ರೀಯ…
