ಕೃಷಿ ನಾಶ ಮತ್ತು ಉಪ್ಪುನೀರಿನ ಭೀತಿ: ಇಚ್ಚಿಲಂಕೋಟೆಯ ರೈತರು ಸಂಕಷ್ಟದಲ್ಲಿ

ಮಂಗಲ್ಪಾಡಿ: ಮಂಗಲ್ಪಾಡಿ ಪಂಚಾಯತ್‌ನ ಇಚ್ಚಿಲಂಕೋಟೆ ಪ್ರದೇಶವು ತೀವ್ರ ಕೃಷಿ ನಾಶದತ್ತ ಸಾಗುತ್ತಿದ್ದು, ರೈತರು ಭಾರಿ ಆರ್ಥಿಕ ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. ಪರಂಪರಾಗತವಾಗಿ ಅಕ್ಕಿ, ಅಡಕೆ, ಮೆಣಸು ಮೊದಲಾದ ಬೆಳೆಗಳನ್ನು ಬೆಳೆಸಿಕೊಂಡು ಬಂದ ನೂರಾರು ರೈತರು ಇಂದು ಏನು ಮಾಡಬೇಕೆಂದು ತಿಳಿಯದೆ ಸಂದಿಗ್ದತೆಯಲ್ಲಿದ್ದಾರೆ ಸಮೀಪದ ತೋಡು ಮತ್ತು ನದಿಗಳಿಂದ ಕೃಷಿ ಭೂಮಿಗೆ ಉಪ್ಪುನೀರು ನುಗ್ಗುತ್ತಿರುವುದರಿಂದ ತೆಂಗು, ಅಡಕೆ ಮುಂತಾದ ಬೆಳೆಗಳು ಸಂಪೂರ್ಣವಾಗಿ ನಾಶವಾಗುತ್ತಿವೆ. ಮಣ್ಣಿನ ಲವಣಾಂಶ ಹೆಚ್ಚಾಗುವುದರಿಂದ ಸಸ್ಯಗಳು ಒಣಗಿ ಸಾಯುವ ಸ್ಥಿತಿ ಉಂಟಾಗಿದೆ.ಬೇಸಿಗೆ ತೀವ್ರವಾಗುತ್ತಿರುವಂತೆ ಕೃಷಿಗೆ ಅಗತ್ಯವಾದ ಶುದ್ಧ…

Read More

ಆರಿಕ್ಕಾಡಿ ಟೋಲ್‌ಗೇಟ್ ವಿರುದ್ಧ ಎಂಎಲ್‌ಎ ಹೋರಾಟ ಎರಡನೇ ದಿನಕ್ಕೆ; ನೂರಾರು ಜನರ ಬೆಂಬಲ, ಜಯ ಸಾಧಿಸುವ ವಿಶ್ವಾಸ – ಎ.ಕೆ. ಅಶ್ರಫ್

ಆರಿಕ್ಕಾಡಿ ಟೋಲ್‌ಗೇಟ್ ಸಂಬಂಧಿಸಿದ ಎಂಎಲ್‌ಎ ಅವರ ಹೋರಾಟವು ಎರಡನೇ ದಿನಕ್ಕೆ ಪ್ರವೇಶಿಸಿದೆ. ಎಂಎಲ್‌ಎ ಅವರಿಗೆ ಅಭಿನಂದನೆ ಸಲ್ಲಿಸುತ್ತಾ ಮಂಗಲ್ಪಾಡಿ ಪಂಚಾಯತ್ ಆಡಳಿತ ಸಮಿತಿ, ಸುನ್ನಿ ಖತೀಬು ಸಂಘಟನೆಗಳು ಸೇರಿದಂತೆ ಹಲವಾರು ಸಂಘಟನೆಗಳು ತಮ್ಮ ಶುಭಾಶಯ ಮತ್ತು ಬೆಂಬಲವನ್ನು ವ್ಯಕ್ತಪಡಿಸಿವೆ. ನೂರಾರು ಜನರು ಹೋರಾಟ ಸ್ಥಳಕ್ಕೆ ಆಗಮಿಸುತ್ತಿದ್ದಾರೆ. ಯಾವುದೇ ಬೆಲೆ ಕೊಟ್ಟರೂ ಈ ವಿಚಾರದಲ್ಲಿ ಜಯ ಸಾಧಿಸುತ್ತೇವೆ ಎಂದು ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಎಂಎಲ್‌ಎ ಎ.ಕೆ. ಅಶ್ರಫ್ ಹೇಳಿದರು.ಧಾರ್ಮಿಕ ಪಂಡಿತರು ಹಾಗೂ ಇತರೆ ಸಂಘಟನೆಗಳ ಪ್ರತಿನಿಧಿಗಳೂ ಹೋರಾಟ ಪಂಥಲಿಗೆ…

Read More

ಕದ್ರಿ ಕಂಚಿದೀಪಾಲೆ ಮರಳು ಧೂಮಾವತಿ ಮತ್ತು ಪರಿವಾರ ದೈವಗಳ ನೂತನ ಮಹಾದ್ವಾರ ಲೋಕಾರ್ಪಣೆ … !

ಮಂಗಳೂರು:ಕದ್ರಿ ಕಂಚಿದೀಪಾಲೆ ಮರಳು ಧೂಮಾವತಿ ಮತ್ತು ಪರಿವಾರ ದೈವಗಳು ಹಾಗೂ ಅಮೀನ್ ಕುಟುಂಬಿಕರ ಕಂಚಿದೀಪಾಲೆ ಮೂಲಸ್ಥಾನದಲ್ಲಿ ಗೀತಾ ಸುಕುಮಾರನ್ ಅವರ ಕೊಡುಗೆಯಲ್ಲಿ ನಿರ್ಮಾಣವಾದ ನೂತನ ಮಹಾದ್ವಾರವನ್ನು ಕದ್ರಿ ಯೋಗೀಶ್ವರ ಪೀಠಾಧಿಪತಿಗಳಾದ ಶ್ರೀ ನಿರ್ಮಾಲಾನಾಥ ಸ್ವಾಮೀಜಿಗಳು ಲೋಕಾರ್ಪಣೆ ಮಾಡಿದರು . ಈ ಸಂದರ್ಭದಲ್ಲಿ ಮಾತನಾಡಿದ ಅವರು , ದೇವಾಲಯಗಳು , ಮಠಗಳು , ಮಂದಿರಗಳು ಶಕ್ತಿ ಕೇಂದ್ರಗಳ ಆರಾಧನೆ ತಾಣವಾಗಿದೆ . ಇವುಗಳು ಧರ್ಮ ರಕ್ಷಣೆಯಲ್ಲಿ ತಮ್ಮದೇ ಆದ ಪಾತ್ರವನ್ನು ವಹಿಸುತ್ತದೆ . ಧರ್ಮದ ರಕ್ಷಣೆಯ ಉದ್ದೇಶದಿಂದ ಇಂತಹಾ…

Read More

ತುಳು ಕ್ರೈಂ ಥ್ರಿಲ್ಲರ್ ‘ಕಟ್ಟೆಮಾರ್’ ಟ್ರೇಲರ್‌ಗೆ ಅದ್ಧೂರಿ ಬಿಡುಗಡೆ: ಜ.23ರಂದು ತೆರೆಗೆ

ಮಂಗಳೂರು: ಅಸ್ತ್ರ ಪ್ರೊಡಕ್ಷನ್ ಸಂಸ್ಥೆಯ ಲಂಚುಲಾಲ್ ಕೆ.ಎಸ್. ನಿರ್ಮಾಣದ ಬಹುನಿರೀಕ್ಷಿತ ಕ್ರೈಂ ಥ್ರಿಲ್ಲರ್ ತುಳು ಸಿನಿಮಾ ‘ಕಟ್ಟೆಮಾರ್’ ಇದೇ ಜನವರಿ 23ರಂದು ತೆರೆಗೆ ಬರಲಿದ್ದು, ಅದರ ಟ್ರೇಲರ್ ಬಿಡುಗಡೆ ಸಮಾರಂಭ ಮಂಗಳೂರಿನ ಬಿಗ್ ಸಿನಿಮಾಸ್‌ನಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ಅದ್ಧೂರಿಯಾಗಿ ನೆರವೇರಿತು. ಟ್ರೇಲರ್ ಬಿಡುಗಡೆ ಮಾಡಿ ಮಾತನಾಡಿದ ನಿರ್ಮಾಪಕ ಲಂಚುಲಾಲ್ ಕೆ.ಎಸ್., “ಜನವರಿ 23ರಂದು ಕಟ್ಟೆಮಾರ್ ಸಿನಿಮಾ ಬಿಡುಗಡೆಯಾಗುತ್ತಿದೆ. ಬೇರೆ ಭಾಷೆಗಳ ಸಿನಿಮಾಗಳಿಗಿಂತ ತುಳು ಚಿತ್ರವೂ ಯಾವುದಕ್ಕೂ ಕಡಿಮೆಯಾಗಬಾರದು ಎಂಬ ಉದ್ದೇಶದಿಂದ ಈ ಚಿತ್ರವನ್ನು ಭರ್ಜರಿಯಾಗಿ ನಿರ್ಮಿಸಿದ್ದೇವೆ. ತುಳು…

Read More

ಸ್ವಾಮಿ ವಿವೇಕಾನಂದ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿಗೆ ಡಾ. ಮಾಲತಿ ಶೆಟ್ಟಿ ಮಾಣೂರು ಆಯ್ಕೆ

ಮಂಗಳೂರು: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಸನ ಹಾಗೂ ನಾಟ್ಯಮಯೂರಿ ನೃತ್ಯ ಟ್ರಸ್ಟ್ ವಿರಾಜಪೇಟೆ ಕೊಡಗು ಜಂಟಿ ಆಶ್ರಯದಲ್ಲಿ ಜನವರಿ 18ರಂದು ಯುವಶಕ್ತಿಯ ಸಾಕಾರ ಮೂರ್ತಿ ಸ್ವಾಮಿ ವಿವೇಕಾನಂದ ಜಯಂತಿ ಉತ್ಸವ ಪ್ರಯುಕ್ತ ನಡೆಯುವ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಸಾಹಿತ್ಯ ಹಾಗೂ ಪತ್ರಿಕೋದ್ಯಮ ಕ್ಷೇತ್ರದ ಸಾಧನೆಗಾಗಿ ಸ್ವಾಮಿ ವಿವೇಕಾನಂದ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿಗೆ, ಮಂಗಳೂರಿನ ಅಮೃತ ಪ್ರಕಾಶ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ ಡಾ. ಮಾಲತಿ ಶೆಟ್ಟಿ ಮಾಣೂರು ಆಯ್ಕೆಯಾಗಿದ್ದಾರೆ. ಜನವರಿ 18 ರಂದು ಡಾ. ಬಿ.ಆರ್ ಅಂಬೇಡ್ಕರ್…

Read More

ಉಡಾವಣಾ ವೈಫಲ್ಯ ಅನುಭವಿಸಿದ್ದ 16 ಉಪಗ್ರಹಗಳ ಪೈಕಿ ಹಾರಾಟ ನಡೆಸುತ್ತಿದೆ ಸ್ಪ್ಯಾನಿಶ್ ಉಪಗ್ರಹ!

ಶ್ರೀಹರಿಕೋಟ :ಇಸ್ರೋದ ಪಿಎಸ್‌ಎಲ್‌ವಿ-ಸಿ62 ರಾಕೆಟ್, 3ನೇ ಹಂತದಲ್ಲಿ ಉಡಾವಣಾ ವೈಫಲ್ಯ ಅನುಭವಿಸಿ ಅದರಲ್ಲಿದ್ದ ಎಲ್ಲ 16 ಉಪಗ್ರಹಗಳು ನಾಪತ್ತೆ ಆಗಿದ್ದವು. ಅವುಗಳು ಆಗಸದಲ್ಲೇ ದಹನ ಆಗಿರಬಹುದು ಎಂಬ ಶಂಕೆ ಇತ್ತು. ಆದರೆ ಇದರ ನಡುವೆ ಸ್ಪಾನಿಷ್ ಉಪಗ್ರಹವೊಂದು ಜೀವಂತವಾಗಿದೆ ಹಾಗೂ ನಿರ್ಣಾಯಕ ಡೇಟಾವನ್ನು ಭೂಮಿಗೆ ರವಾನಿಸಿದೆ. ಈ ಬಗ್ಗೆ ಉಪಗ್ರಹ ಸಿದ್ಧಪಡಿಸಿ ಅದನ್ನು ಪಿಎಸ್‌ಎಲ್‌ವಿಯಲ್ಲಿ ಕಳಿಸಿದ್ದ, ಸ್ಪ್ಯಾನಿಷ್ ಸ್ಮಾರ್ಟ್‌ ಅಪ್ ‘ಆರ್ಬಿಟಲ್ ಪ್ಯಾರಡೈಮ್’ ಟೀಟ್ ಮಾಡಿದೆ. ‘ನಮ್ಮ ಕೆಸ್ಟೈಲ್ ಇನಿಶಿಯಲ್ ಡೆಮಾನ್ಸ್ಟರ್ (ಕಿಡ್)’ ಕ್ಯಾಪ್ಯೂಲ್ ಗಮನಾರ್ಹವಾಗಿ ಬದುಕುಳಿದಿದೆ’…

Read More

ಪ್ರತಿಷ್ಠಿತ ಶ್ರೀ ಕುಂದೇಶ್ವರ ಪ್ರಶಸ್ತಿ ಪ್ರಕಟ … !

ಮಂಗಳೂರು: ಕಾರ್ಕಳ ಹಿರ್ಗಾನ ಶ್ರೀ ಕುಂದೇಶ್ವರ ಕ್ಷೇತ್ರದ ವತಿಯಿಂದ ಕೊಡ ಮಾಡುವ ಪ್ರತಿಷ್ಠಿತ ಶ್ರೀ ಕುಂದೇಶ್ವರ ಸಮ್ಮಾನ್ ಪ್ರಶಸ್ತಿಗೆ ಯಕ್ಷಗಾನ ರಂಗದ ಅಗ್ರಮಾನ್ಯ ಮಹಿಳಾ ಭಾಗವತೆಯಾದ ಕಾವ್ಯಶ್ರೀ ಅಜೇರನ್ನು ಮತ್ತು ರಂಗಭೂಮಿ ಕ್ಷೇತ್ರಕ್ಕೆ ನೀಡಲಾಗುವ ಕುಂದೇಶ್ವರ ಕಲಾಭೂಷಣ ಪ್ರಶಸ್ತಿಗೆ ಹಿರಿಯ ಕಲಾವಿದ ಉಮೇಶ್ ಮಿಜಾರ್ ರನ್ನು ಆಯ್ಕೆ ಮಾಡಲಾಗಿದೆ ಎಂದು ಸಮಿತಿ ಸಂಚಾಲಕ ಜಿತೇಂದ್ರ ಕುಂದೇಶ್ವರ ತಿಳಿಸಿದರು . ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತಾಡಿದ ಅವರು , ಶ್ರೀ ಕುಂದೇಶ್ವರ ದೇಗುಲದ ಧರ್ಮದರ್ಶಿ, ಯಕ್ಷಗಾನ ಮೇಳ…

Read More

ಅಲೆವೂರು ಗುಡ್ಡೆ ಅಂಗಡಿ ಕಟ್ಟೆ ಗಣಪತಿ ಸನ್ನಿಧಿಯಲ್ಲಿ ಶೀರೂರು ಶ್ರೀ ವೇದವರ್ಧನ ತೀರ್ಥ ಶ್ರೀಪಾದರಿಗೆ ಹುಟ್ಟೂರ ಸನ್ಮಾನ

ಉಡುಪಿ:ಅಲೆವೂರಿನಲ್ಲಿ ಶೀರೂರು ಶ್ರೀಗಳಿಗೆ ಹುಟ್ಟೂರ ಸನ್ಮಾನ ನಡೆಯಿತು.ಅಲೆವೂರು ಗುಡ್ಡೆ ಅಂಗಡಿ ಕಟ್ಟೆ ಗಣಪತಿ ಸನ್ನಿಧಿಯಲ್ಲಿ ಶೀರೂರು ಶ್ರೀ ವೇದವರ್ಧನ ತೀರ್ಥ ಶ್ರೀಪಾದರಿಗೆ ಹುಟ್ಟೂರ ಸನ್ಮಾನ ನಡೆಯಿತು. ಅಲೆವೂರಿಗೆ ಆಗಮಿಸಿದ ಶ್ರೀಗಳಿಗೆ ಸಾರ್ವಜನಿಕ ಗಣೇಶೋತ್ಸವ ಸಮಿತಿ ವತಿಯಿಂದ ಭವ್ಯ ಸ್ವಾಗತ ಕೋರಲಾಯಿತು. ಅಲೆವೂರು ಕಟ್ಟೆ ಗಣಪತಿ‌ ಸನ್ನಿಧಿ ಶೀರೂರು ಮಠಾಧೀಶರಾಗಿದ್ದ ಲಕ್ಷ್ಮೀವರ ತೀರ್ಥರಿಗೆ ಬಹಳ ಪ್ರಿಯವಾದ ತಾಣ. ಈ ನಿಟ್ಟಿನಲ್ಲಿ ಅಲೆವೂರಿನ‌ ಭಕ್ತರಿಗೆ ಶೀರೂರು ಪರ್ಯಾಯ ವಿಶೇಷ ಸಂಭ್ರಮವನ್ನು ತಂದಿದೆ. ಬಳಿಕ ಕಟ್ಟೆ ಗಣಪತಿಗೆ ವಿಶೇಷ ಪೂಜೆ ಸಲ್ಲಿಸಿ…

Read More

ರಸ್ತೆ ವಿಚಾರದ ಗಲಾಟೆ ಹೊಡೆದಾಟಕ್ಕೆ ತಿರುಗು; ಬಿಸಿರೋಡಿನಲ್ಲಿ ಕುಟುಂಬದವರು ಪತ್ರಿಕಾಗೋಷ್ಠಿ ಮೂಲಕ ರಕ್ಷಣೆ ಮನವಿ

ಬಂಟ್ವಾಳ: ರಸ್ತೆ ವಿಚಾರಕ್ಕೆ ಸಂಬಂಧಿಸಿದಂತೆ ಉಂಟಾದ ಗಲಾಟೆ ಇದೀಗ ಹೊಡೆದಾಟದವರೆಗೆ ತಲುಪಿದ್ದು ನಮಗೆ ರಕ್ಷಣೆ ಕೊಡಿ ಎಂದು ಕುಟುಂಬವೊಂದು ಪತ್ರಿಕಾಗೋಷ್ಠಿಯ ಮೂಲಕ ಮನವಿ ಮಾಡಿಕೊಂಡ ಘಟನೆ ಬಿಸಿರೋಡಿನಲ್ಲಿ ನಡೆದಿದೆ.ದ.ಕ.ಜಿಲ್ಲಾ ದಲಿತ್ ಸೇವಾ ಸಮಿತಿ ವಿಟ್ಲ ಇದರ ಸ್ಥಾಪಕ ಅಧ್ಯಕ್ಷ ಸೇಸಪ್ಪ ಬೆದ್ರಕಾಡು ಅವರು ಕುಟುಂಬದ ಪರವಾಗಿ ಬಿಸಿರೋಡಿನ ಪ್ರೆಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಸುಣ್ಣಂಗಳ ನಾಗರಾಜ ಮತ್ತು ಸುರೇಶ್ ನಾಯ್ಕ ಕುಟುಂಬಕ್ಕೆ ರಕ್ಷಣೆ ಒದಗಿಸುವಂತೆ ಕೇಳಿಕೊಂಡಿದ್ದಾರೆ. ಬಂಟ್ವಾಳ ತಾಲೂಕಿನ ಪುಣಚ ಗ್ರಾಮದ ಸುಣ್ಣಂಗಳ ನಾಗರಾಜ…

Read More

ಅನಿಲ ಸಾಗಾಟದ ಟ್ಯಾಂಕರ್‌ಗೆ ಟೆಂಪೋ ಡಿಕ್ಕಿ; ಚಾಲಕ ಗಾಯ, ಅನಿಲ ಸೋರಿಕೆ ಭೀತಿಯಲ್ಲಿ ರಕ್ಷಣೆ ಕಾರ್ಯಾಚರಣೆ

ಬಂಟ್ವಾಳ : ಖಾಸಗಿ ಸಂಸ್ಥೆಗೆ ಸೇರಿದ ಟೆಂಪೋ ವಾಹನವೊಂದು ಅನಿಲ‌ ಸಾಗಾಟದ ಟ್ಯಾಂಕರ್ ವಾಹನಕ್ಕೆ‌ ಹಿಂಬದಿಯಿಂದ‌ ಡಿಕ್ಕಿ ಹೊಡೆದ ಘಟನೆ ರಾಷ್ಟ್ರೀಯ ಹೆದ್ದಾರಿಯ ಕುದ್ರೆಬೆಟ್ಟು ಎಂಬಲ್ಲಿ ಮಂಗಳವಾರ ಸಂಜೆ ನಡೆದಿದೆ. ಕಲ್ಲಡ್ಕ ಫ್ಲೈ ಓವರ್ ನಲ್ಲಿ‌ ಅತಿವೇಗದಿಂದ ಬಂದ‌ ಟೆಂಪೋ ವಾಹನ‌ ಸಮುದ್ರ ಹೋಟೆಲ್ ಬಳಿ ಚಾಲಕನ‌ ನಿಯಂತ್ರಣ ತಪ್ಪಿ‌ ಟ್ಯಾಂಕರ್ ಗೆ‌‌ ಹಿಂದಿನಿಂದ‌ ಡಿಕ್ಕಿಯಾಗಿದೆ. ಪರಿಣಾಮ ಚಾಲಕನ ಕೈ ವಾಹನಗಳ‌ನಡುವೆ ಸಿಲುಕಿಕೊಂಡಿತ್ತು. ಗ್ಯಾಸ್ ಟ್ಯಾಂಕರ್ ಗೆ ವಾಹನ‌‌ ಡಿಕ್ಕಿಯಾಗಿದ್ದರಿಂದ, ಅನಿಲ‌ ಸೋರಿಕೆಯ ಭಯದಿಂದ‌ ಯಾರೂ ವಾಹನಗಳ‌…

Read More
error: Content is protected !!