ಕ್ರೀಡೆಗಳು ಮನೋಸ್ಥೈರ್ಯ ಹಾಗೂ ಶಾರೀರಿಕ ದೃಢತೆಯನ್ನು ಹೆಚ್ಚಿಸುತ್ತದೆ : ಶ್ರೀನಿವಾಸ್ ರಾವ್
ಆನೆಕಲ್ಲು: ” ಕ್ರೀಡೆಗಳು ಮಾನಸಿಕ ಸ್ಥೈರ್ಯದೊಂದಿಗೆ ಶಾರೀರಿಕ ದೃಢತೆಯನ್ನು ಹೆಚ್ಚಿಸಲು ಸಹಕಾರಿಯಾಗುತ್ತದೆ.ಆದ್ದರಿಂದ ಪ್ರಾಥಮಿಕ ಹಂತದಲ್ಲೇ ಮಕ್ಕಳಿಗೆ ಕ್ರೀಡಾ ತರಬೇತಿ ಉತ್ತಮ ರೀತಿಯಲ್ಲಿ ಸಿಗುವಂತಾಗಬೇಕು” ಎಂದು ಎ ಯು ಪಿ ಶಾಲೆ ಬಾಕ್ರಬೈಲ್ ನ ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀನಿವಾಸ್ ರಾವ್ ತಿಳಿಸಿದರು.ಅವರು ಎ.ಯು.ಪಿ ಶಾಲೆ ಆನೆಕಲ್ಲಿನಲ್ಲಿ ಜರಗಿದ ಶಾಲಾ ಮಟ್ಟದ ಕ್ರೀಡೋತ್ಸವನ್ನು ಉದ್ಘಾಟಿಸಿ ಮಾತನಾಡಿದರು. ಹಳೆ ವಿದ್ಯಾರ್ಥಿ ಕುಮಾರಿ ಹರಿಣಾಕ್ಷಿ ಟೀಚರ್ ಮಾತನಾಡಿ ,”ಕ್ರೀಡೆಗಳು ಮಾನಸಿಕ ಒತ್ತಡವನ್ನು ನಿಯಂತ್ರಿಸುವುದರೊಂದಿಗೆ ಉತ್ತಮ ಆರೋಗ್ಯವನ್ನು ನೀಡುತ್ತದೆ.ಆದುದರಿಂದ ಶಾಲಾ ಮಟ್ಟದ ಕ್ರೀಡೆಗಳಲ್ಲಿ ಭಾಗವಹಿಸಿ…
