ಮಂಜೇಶ್ವರ: ಲೋಕಸಭೆಯ ವಿಪಕ್ಷ ನಾಯಕ ಶ್ರೀ ರಾಹುಲ್ ಗಾಂಧಿಯವರ ಎದೆಗೆ ಗುಂಡು ಹಾರಿಸುವುದಾಗಿ ಚಾನೆಲ್ ಚರ್ಚೆಯಲ್ಲಿ ಬಹಿರಂಗ ಬೆದರಿಕೆಯೊಡ್ಡಿದ ಬಿಜೆಪಿಯ ಕೇರಳ ವಕ್ತಾರನ ವಿರುದ್ಧ ಪಿಣರಾಯಿ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಪಿಣರಾಯಿ ವಿಜಯನ್ ಹಾಗೂ ಕುಟುಂಬದ ಸಹಸ್ರ ಭಾನಗಡಿಗಳನ್ನು ಮುಚ್ಚಿ ಹಾಕಲು ಕೇಂದ್ರದ ಮೋದಿ ಸರ್ಕಾರ ಕೈ ಜೋಡಿಸಿದ ಕಾರಣ ಇಲ್ಲಿ ಪಿಣರಾಯಿ ಗೃಹ ಇಲಾಖೆಯನ್ನು ಸಂಘಿಗಳ ಕೈಗೊಪ್ಪಿಸಿದ್ದಾರೆ.
ರಾಹುಲ್ ಗಾಂಧಿಯವರ ನಿರ್ಭೀತ ಹೋರಾಟಗಳು ಬಿಜೆಪಿಯ ನಿದ್ದೆಗೆಡಿಸಿವೆ.
ಚಾನೆಲ್ ಚರ್ಚೆಯಲ್ಲಿ ಬಿಜೆಪಿ ವಕ್ತಾರ ಪಿಂಟು ಮಹಾದೇವ ಎಂಬ ಲೋ ಪ್ರೊಫೈಲ್ ನಾಯಕನ ಬೆದರಿಕೆ ಕೇವಲ ಬಾಯಿಬಡುಕತನ ಎಂದು ನಿರ್ಲಕ್ಷಿಸಲಾಗದು. ತಮ್ಮ ಅಂತರಂಗದ ಚಿಂತನೆಗಳನ್ನು ಈ ರೀತಿಯ ಮಾನಗೇಡಿಗಳಿಂದ ಹೇಳಿಸಿ ಜನತೆಯ ಪ್ರತಿಕ್ರಿಯೆ ತಿಳಿಯಬಯಸುವುದು ಹಾಗೂ ಕೊನೆಯಲ್ಲಿ ಜ್ಯಾರಿಗೆ ತರುವುದು ಸಂಘಿಗಳ ಹಿನ್ನೆಲೆ ಎಂಬುದು ತಿಳಿದ ವಿಷಯ. ತನ್ನ ಆಡಳಿತದ ಎರಡನೇ ಅವಧಿಯನ್ನು ಪೂರ್ತಿಗೊಳಿಸಿ ಮೂರನೇ ಅವಧಿಗೆ ಅಳಿಯನಿಗೆ ಪಟ್ಟಾಭಿಷೇಕ ಮಾಡುವುದು ಪಿಣರಾಯಿಯ ದುರುದ್ದೇಶ. ಇದರ ಈಡೇರಿಕೆಗಾಗಿ ಯಾವ ಹಂತಕ್ಕೆ ಹೋಗಲೂ ಹೇಸದ ಈ ಸರ್ಕಾರ ಸಂಘಪರಿವಾರಕ್ಕೆ ಸಂಪೂರ್ಣ ಶರಣಾಗಿದೆ. ಸೋಶಿಯಲ್ ಇಂಜಿನಿಯರಿಂಗ್ ಎಂಬ ಮೋಹಕ ಹೆಸರಿನ ಅಪಾಯಕಾರಿ ಆಟದಲ್ಲಿ ಸಿಪಿಎಂ ನಿರತವಾಗಿದೆ ನಿರತವಾಗಿದೆ. ಇದು ಅಂತಿಮವಾಗಿ ಕೇರಳದಲ್ಲಿ ಸಿಪಿಎಂ ನ ಸರ್ವಪತನಕ್ಕೆ ಹಾದಿ ಮಾಡಿ ಕೊಡಲಿದೆ .
ರಾಹುಲ್ ಗಾಂಧಿಯವರ ವಿರುದ್ಧ ಸಡಿಲ ನಾಲಗೆ ಹರಿಯಬಿಟ್ಟು ಕೊಲೆ ಬೆದರಿಕೆಯೊಡ್ಡಿದ ಪಿಂಟು ಮಹಾದೇವನನ್ನು ತಕ್ಷಣವೇ ಬಂಧಿಸಲು ಸರ್ಕಾರ ಮುಂದಾಗಬೇಕು ಎಂದು ಮಂಜೇಶ್ವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಮುಹಮ್ಮದ್ ಡಿಎಂಕೆ ಆಗ್ರಹಿಸಿದ್ದಾರೆ.ರಾಹುಲ್ ಗಾಂಧಿಯವರ ವಿರುದ್ಧ ಕೊಲೆ ಬೆದರಿಕೆಯೊಡ್ಡಿದ ಬಿಜೆಪಿಯ ವಕ್ತಾರನ ವಿರುದ್ಧ ಕ್ರಮ ಕೈಗೊಳ್ಳದ ಕೇರಳ ಸರ್ಕಾರದ ಬೇಜವಾಬ್ದಾರಿಯ ಧೋರಣೆ ವಿರುದ್ಧ ಮಂಜೇಶ್ವರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಹೊಸಂಗಡಿ ಜಂಕ್ಷನ್ ನಲ್ಲಿ ಏರ್ಪಡಿಸಲಾದ ಪ್ರತಿಭಟನಾ ಸಂಗಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಶ್ರೀ ಹಾಜಿ ಖಲೀಲ್ ಬಜಾಲ್ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ನೇತಾರರಾದ ಫಾರೂಕ್ ಶಿರಿಯ, ಬಾಬು ಬಂದ್ಯೋಡು,ಹನೀಫ್ ಪಡಿಂಞಾರ್, ಪುರುಷೋತ್ತಮ ಅರಿಬೈಲ್,ದಾಮೋದರ ಮಾಸ್ಟರ್, ನಾಗೇಶ್ ಮಂಜೇಶ್ವರ, ಫ್ರಾನ್ಸಿಸ್ ಡಿ ಸೋಜಾ, ಮುಹಮ್ಮದ್ ಮಜಾಲ್, ಗುರುವಪ್ಪ ಮಂಜೇಶ್ವರ, ಹುಸೈನ್ ಕುಬಣೂರ್, ಮೊಹಮ್ಮದ್ ಜೆ, ನವೀನ್ ಮಾಸ್ಟರ್, ಮಾಲಿಂಗ ಮಂಜೇಶ್ವರ, ಎಲಿಯಾಸ್ ಡಿ ಸೋಜಾ, ಕೆ.ವಿ.ರಾಮನ್, ಲಕ್ಷ್ಮಣ ಪಚ್ಲಂಪಾರೆ, ಅಶ್ರಫ್ ಮುಟ್ಟಂ, ಶೋಭಾ ಸೋಮಪ್ಪ, ಸೀತಾ ಡಿ, ಜೆಸ್ಸಿ ಕಣ್ವತೀರ್ಥ, ರಂಜಿತ್ ಮಂಜೇಶ್ವರ, ಶಾಫಿ ಮಾಸ್ಟರ್, ಅಬೂಬಕ್ಕರ್ ಡಿ, ಅಬೂಸಾಲಿ ಮುರತ್ತಣೆ, ಅಬೂಬಕ್ಕರ್ ಪೊಯ್ಯೆ, ಉಮ್ಮರ್ ಪಾಲೆಂಗ್ರಿ, ಶೇಕಬ್ಬ ಮೀಪಪದವು, ಶಾಫಿ ತಲೆಕಳ, ಅಬ್ದುಲ್ಲಾ ಮಾಸ್ಟರ್, ಝೈನುದ್ದೀನ್ ಹೇರೂರ್, ತುಳಸಿ ಮುಟ್ಟಂ, ಮೊಹಮ್ಮದ್ ಹನೀಫ್ ಪೆರಿಂಗಡಿ ,ರಹೀಂ ಚೆಕ್ ಪೋಸ್ಟ್, ರಝಾಕ್. ವಾಮಂಜೂರ್, ಮೊಯ್ದಿನ್ ಗುಡ್ಡೆ, ಫಾರೂಕ್ ಕುಂಜತ್ತೂರು, ಹಮೀದ್ ಕಣಿಯೂರು, ದಿಲ್ ದಾರ್ ಅಹ್ಮದ್, ಅಬ್ದುಲ್ ರಹ್ಮಾನ್ ಹಾಜಿ, ನಾರಾಯಣ, ಮೊಯ್ದಿನ್ ಹಸನ್, ಶಬೀರ್ ಮಂಜೇಶ್ವರ, ಅಬ್ಬಾಸ್ ಎಂಕೆ, ಸೂಪಿ ಜಮಾಲ್, ಉದಯಕುಮಾರ್ ಎಸ್.ಪಿ, ಹರ್ಷ ಡಿ, ಮುಸ್ತಫಾ ಹೊಸಬೆಟ್ಟು, ರಶೀದ್ ಮಂಜೇಶ್ವರ, ಜಹದಾರ್ ಮಂಜೇಶ್ವರ, ವಿ.ವಿ.ರಾಮನ್, ಗಂಗಾಧರ್, ಯಾಕೂಬ್ ಕೋಡಿ, ಯೋಗೀಶ್ ಉದ್ಯಾವರ ಮುಂತಾದವರು ಉಪಸ್ಥಿತರಿದ್ದರು. ಶ್ರೀ ಗಣೇಶ್ ಪಾವೂರು ಸ್ವಾಗತಿಸಿ, ಶ್ರೀ ಅಹ್ಮದ್ ಮನ್ಸೂರ್ ವಂದಿಸಿದರು.