Headlines

ಶ್ರೀ ರಾಮ್ ಫೈನಾನ್ಸ್ ಮಂಗಳೂರು ಇದರ ವತಿಯಿಂದ 1000 ಕ್ಕೂ ಅಧಿಕ ವಿಧ್ಯಾರ್ಥಿಗಳಿಗೆ ವಿಧ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮ.

ಮಂಗಳೂರು: ನಮ್ಕ ದೇಶದಲ್ಲಿ ಶೇ 65% ರಷ್ಣು ಯುವ ಸಮೂಹವೇ ಇದೆ, ಈ ಯುವ ಸಮೂಹದ ಸಮಯಗಳು ದೇಶ ಕಟ್ಟುವ ಕಾರ್ಯಕ್ಕೆ ವಿನಿಯೋಗ ಆಗಬೇಕೆ ಹೊರತು, ದುರುಪಯೋಗವಾದರೆ ದೇಶಕ್ಕೆ ಮಾರಕ. ಹಾಗಾಗಿ ಯುವಕ ಶಕ್ತಿ ಸದ್ಬಳಕೆ, ಸ್ವಾಭಿಮಾನದ ಜೀವನ ನಮ್ಮ ಸಮಾಜದಲ್ಲಿ ಆಗಬೇಕಾದರೆ ಉಳ್ಳವರು ಮುಂದೆ ಬರಬೇಕು, ವಿದ್ಯಾರ್ಜನೆಗೆ, ನೈತಿಕ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಬೇಕು, ವ್ಯವಹಾರದ ತನ್ನ ಪಾಲನ್ನು ಶಿಕ್ಷಣಕ್ಕೆ ನೀಡುತ್ತಿರುವ ಶ್ರೀ ರಾಮ್ ಫೈನಾನ್ಸ್ ನ ಸೇವೆ ನಿಜವಾಗಿಯೂ ಮೆಚ್ಚತಕ್ಕದ್ದು ಎಂದು ದ.ಕ ಜಿಲ್ಲಾ ಸಂಸದರಾದ…

Read More

ಮಂಗಳೂರು: ಮರದ ದಿಮ್ಮಿ ಸಾಗಿಸುತ್ತಿದ್ದ ಲಾರಿ ಪಲ್ಟಿ; ಚಾಲಕ ಪಾರು

ಮಂಗಳೂರು: ಮರದ ದಿಮ್ಮಿಗಳನ್ನು ಸಾಗಿಸುತ್ತಿದ್ದ ಲಾರಿಯೊಂದು ರಸ್ತೆಯಲ್ಲೇ ಪಲ್ಟಿಯಾದ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಎಕ್ಕೂರಿನಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ. ಮರದ ದಿಮ್ಮಿಗಳನ್ನು ಹೊತ್ತ ಲಾರಿ ಮಂಗಳೂರು ಕಡೆಯಿಂದ ತಲಪಾಡಿ ಕಡೆಗೆ ಸಾಗುತ್ತಿತ್ತು. ಈ ವೇಳೆ ಎಕ್ಕೂರು ಬಳಿ ಇಳಿಜಾರು ರಸ್ತೆಯಲ್ಲಿ ಲಾರಿ ಮಗುಚಿ ಬಿದ್ದಿದೆ.ಅಪಘಾತದ ವೇಳೆ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಲಾರಿಯನ್ನು ಚಲಾಯಿಸುತ್ತಿದ್ದ. ಇದರಿಂದಾಗಿ ಚಾಲಕ ವಾಹನದ ನಿಯಂತ್ರಣ ಕಳೆದುಕೊಂಡಿದ್ದಾನೆ ಎಂದು ವರದಿಯಾಗಿದೆ. ಅದೃಷ್ಟವಶಾತ್ ಚಾಲಕ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಲಾರಿ ರಸ್ತೆಯಲ್ಲಿ…

Read More

ಕೆಎಂಸಿ ಆಸ್ಪತ್ರೆಯ ಸುಧಾರಿತ ವೈದ್ಯಕೀಯ ತಂತ್ರಜ್ಞಾನ, ಉತ್ತಮ ಆರೈಕೆ ಗ್ಯಾಸ್ಟ್ರೋಎಂಟರ್ಲಾಜಿ ಸೇವೆ 25ನೇ ವರ್ಷಕ್ಕೆ ಪಾದಾರ್ಪಣೆ

ಮಂಗಳೂರು: ಕೆಎಂಸಿ ಆಸ್ಪತ್ರೆಯ ಗ್ಯಾಸ್ಟ್ರೋ ಎಂಟರಾಲಾಜಿ ಸೇವೆಗೆ 25 ವರ್ಷ ತುಂಬಿದ್ದು . ಉತ್ತಮ ಗುಣಮಟ್ಟದ ಚಿಕಿತ್ಸೆ ಹಾಗೂ ಸಹಾನುಭೂತಿಯ ರೋಗಿಯ ಆರೈಕೆಯನ್ನು ಸೂಚಿಸುತ್ತಿದೆ . 2000ನೇ ವರ್ಷದಲ್ಲಿ ಆರಂಭವಾದ ಈ ಸೇವೆಯು ಸುಧಾರಿತ ಡೈಯಾಗ್ನೋಸ್ಟಿಕ್ ಮತ್ತು ಜೀರ್ಣಕ್ರಿಯೆಗೆ ಸಂಬಂಧಿಸಿದ ವಿವಿಧ ಸಮಸ್ಯೆಗಳಿಗೆ ಚಿಕಿತ್ಸೆಯನ್ನು ನೀಡುತ್ತಾ ಬರುತ್ತಿದೆ ಎಂದು ಗ್ಯಾಸ್ಟ್ರೋ ಎಂಟರಾಲಾಜಿ ವಿಭಾಗದ ಮುಖ್ಯಸ್ಥರಾದ ಡಾ. ಬಿ ವಿ ತಂತ್ರಿ ತಿಳಿಸಿದರು. ಅವರು ಕೆಎಂಸಿ ಆಸ್ಪತ್ರೆಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿ , ಕಳೆದ…

Read More

ಸೆ.15ರಂದು ಮಂಗಳೂರಿನಲ್ಲಿ ಜೀ಼ಕನ್ನಡದ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಮತ್ತು ಕಾಮಿಡಿ ಕಿಲಾಡಿಯ ಮಹಾ ಆಡಿಷನ್

ಮಂಗಳೂರು: ಜೀ಼ ಕನ್ನಡ ವಾಹಿನಿ ಪ್ರತಿಭಾನ್ವಿತ ಕಲಾವಿದರಿಗೆ ಅವಕಾಶ ಕೊಡಲು ಮತ್ತೊಮ್ಮೆ ವೇದಿಕೆ ಸಿದ್ಧಮಾಡಿದೆ . ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಮತ್ತು ಕಾಮಿಡಿ ಕಿಲಾಡಿಗಳು ಆಡಿಷನ್ 31 ಜಿಲ್ಲೆಗಳಲ್ಲಿ ನಡೆಯುತ್ತಿದೆ. ಪ್ರತಿಭೆ ಇದ್ದರೂ ಅವಕಾಶ ಸಿಗದೇ ಇರುವವವರಿಗೆ ಜೀ಼ಕನ್ನಡ ಒಂದು ಅತ್ಯುತ್ತಮ ವೇದಿಕೆ ಕಲ್ಪಿಸಿಕೊಡುತ್ತಿದೆ. ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಭಾಗವಹಿಸುವವರ ವಯೋಮಿತಿ 6 ರಿಂದ 60 ರವರೆಗೆ ಇರಬೇಕು ಮತ್ತು ನೀವು ಉತ್ತಮವಾಗಿ ಡ್ಯಾನ್ಸ್ ಮಾಡುವವರಾಗಿರಬೇಕು. ಇನ್ನು, ಕಾಮಿಡಿ ಕಿಲಾಡಿಗಳಲ್ಲಿ ಭಾಗವಹಿಸುವುದಾದರೆ ನಿಮ್ಮ ವಯಸ್ಸು 16 ರಿಂದ…

Read More

ವೃದ್ಧೆಯ ಚಿನ್ನದ ಸರ ಕದ್ದ ಖದೀಮನ ಬಂಧನ

ಉಡುಪಿ:ಅಜೆಕಾರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವೃದ್ಧೆಯ ಚಿನ್ನದ ಎಗರಿಸಿದ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.ಬೆಳಗಾವಿ ಜಿಲ್ಲೆಯ ಸುನಿಲ್ ರಮೇಶ್ ಲಮಾಣಿ(29) ಬಂಧಿತ ಆರೋಪಿಯಾಗಿದ್ದು ಈತನಿಂದ ಕಳವು ಮಾಡಿದ ಚಿನ್ನದ ರೋಪ್ ಚೈನನ್ನು ವಶಪಡಿಸಿಕೊಳ್ಳಲಾಗಿದೆ. ಸೆ.9ರಂದು ಕಾರ್ಕಳ ಎಳ್ಳಾರ ಗ್ರಾಮದ ಮುಳ್ಳಾಡು ನಿವಾಸಿ ಕುಮುದಾ ಶೆಟ್ಟಿ (80) ಎಂಬವರು ಮನೆಯ ಅಂಗಳ ದಲ್ಲಿ ಕುಳಿತುಕೊಂಡಿದ್ದರು ಆಗ ತಾನು ಕಾರ್ಕಳದ ಸೂಪರ್ ವೈಸರ್ ಎಂದು ಹೇಳಿಕೊಂಡು ಬಂದ ಅಪರಿಚಿತ ವ್ಯಕ್ತಿಯೊಬ್ಬ ಮನೆಯಲ್ಲಿ ಸಿಸಿ ಕ್ಯಾಮರಾ ಇದೆಯೇ ಎಂದು ವಿಚಾರಿಸಿದನು ಬಳಿಕ…

Read More

ಪಂಜಾಬ್ ಪ್ರವಾಹ ಸಂತ್ರಸ್ತರಿಗೆ ನೆರವಿಗೆ ಕೋರಿ ಮಂಗಳೂರಿನ ಸಿಖ್ ಸಮುದಾಯದ ವತಿಯಿಂದ ನಾಳೆ ದೇಣಿಗೆ ಸಂಗ್ರಹಣೆ ಅಭಿಯಾನವು ನಡೆಯಲಿದೆ – ಕಮಲ್ ಜಿತ್ ಸಿಂಗ್

ಕಾಸರಗೋಡು: ಪಂಜಾಬ್ ಪ್ರವಾಹ ಸಂತ್ರಸ್ತರಿಗೆ ನೆರವಿಗೆ ಕೋರಿ ಮಂಗಳೂರಿನ ಸಿಖ್ ಸಮುದಾಯದ ವತಿಯಿಂದ ನಾಳೆ ಬೆಳ್ಳಿಗೆ 10 ರಿಂದ 5 ಗಂಟೆಯ ತನಕ ಕೊಟ್ಟಾರ ಚೌಕಿಯಲ್ಲಿ ದೇಣಿಗೆ ಸಂಗ್ರಹಣೆ ಅಭಿಯಾನವು ನಡೆಯಲಿದೆ ಎಂದು ಕಮಲ್ ಜಿತ್ ಸಿಂಗ್ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದ ಸುಖ್ವಿಂದರ್ ಸಿಂಗ್ , ಇಂದು ಪಂಜಾಬ್ ರಾಜ್ಯದಲ್ಲಿ ತೀವ್ರ ಪ್ರವಾಹದ ಪರಿಣಾಮ ಸಾವಿರಾರು ಕುಟುಂಬಗಳು ತಮ್ಮ ಮನೆ, ಹೊಲ ಹಾಗೂ ಜೀವನೋಪಾಯ ಕಳೆದುಕೊಂಡಿವೆ. ಬೆಳೆಗಳು, ಜಾನುವಾರುಗಳು ಹಾಗೂ ಆಸ್ತಿ-ಪಾಸ್ತಿಗಳು…

Read More

ಕಾಸರಗೋಡು ಕನ್ನಡ ಗ್ರಾಮೋತ್ಸವ 2025 ನವಂಬರ್ 4ಕ್ಕೆ

ಕೇರಳ ರಾಜ್ಯ ಕನ್ನಡ ಭಾಷಾ ಅಲ್ಪಸಂಖ್ಯಾತರ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಸಂಘಟನೆಯಾದ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ ),ಕನ್ನಡ ಗ್ರಾಮ, ಕಾಸರಗೋಡು ಇದರ 35ನೇ ಸಂಸ್ಥಾಪನಾ ದಿನಾಚರಣೆ ಹಾಗೂ ಕಾಸರಗೋಡು ಕನ್ನಡ ಗ್ರಾಮದ ಸಂಸ್ಥಾಪಕ ಶಿವರಾಮ ಕಾಸರಗೋಡು ಅವರ 60ನೇ ವರ್ಷದ ಜನ್ಮ ದಿನಾಚರಣೆ – ಜನ್ಮ ವರ್ಷಾಚರಣೆ ,ಅಭಿನಂದನಾ ಕಾರ್ಯಕ್ರಮವನ್ನು ಕೇರಳ – ಕರ್ನಾಟಕ ಸಾಹಿತ್ಯ, ಸಾಂಸ್ಕೃತಿಕ ಉತ್ಸವವನ್ನಾಗಿಸಿ ಕೇರಳ – ಕರ್ನಾಟಕ ಕನ್ನಡ ರಾಜ್ಯೋತ್ಸವ – ‘ಕಾಸರಗೋಡು ಕನ್ನಡ ಗ್ರಾಮೋತ್ಸವ ‘2025 ಎಂಬ ಶೀರ್ಷಿಕೆಯ…

Read More

ಹಾಸನ ಗಣೇಶ ಮೆರವಣಿಗೆ ವೇಳೆ ಟ್ರಕ್ ದುರಂತ: ಪ್ರಧಾನಿ ಮೋದಿ ಸಂತಾಪ

ನವದೆಹಲಿ: ಹಾಸನದಲ್ಲಿ ಗಣೇಶ ಮೆರವಣಿಗೆ ವೇಳೆ ಸಂಭವಿಸಿದ ಟ್ರಕ್ ದುರಂತದಲ್ಲಿ ಮೃತಪಟ್ಟವರಿಗೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ಈ ಕುರಿತು ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಕಚೇರಿ, “ಕರ್ನಾಟಕದ ಹಾಸನ ಜಿಲ್ಲೆಯಲ್ಲಿ ಸಂಭವಿಸಿರುವುದು ನಿಜಕ್ಕೂ ಹೃದಯವಿದ್ರಾವಕ ಘಟನೆ. ಈ ದುರಂತದಲ್ಲಿ ಹಲವರು ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡಿದ್ದಾರೆ. ಅವರ ಬಗ್ಗೆ ಕನಿಕರವಿದೆ. ಗಾಯಗೊಂಡವರು ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಪಾರ್ಥಿಸುತ್ತೇನೆ” ಎಂದು ತಿಳಿಸಿದೆ. ಜೊತೆಗೆ ಮೃತರ ಕುಟುಂಬಸ್ಥರಿಗಾಗಿ ಪಿಎಂಎನ್‌ಆರ್‌ಎಫ್ ನಿಧಿಯಿಂದ ತಲಾ 2 ಲಕ್ಷ ರೂ….

Read More

ಮಂಜೇಶ್ವರದಲ್ಲಿ ಮಿನಿ ಹೈ ಮಾಸ್ಟ್ ಲೈಟ್ ಉದ್ಘಾಟನೆ ವಿಳಂಬ – ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ.

ಮಂಜೇಶ್ವರ: ಮಂಜೇಶ್ವರ ಕಣ್ಣೂರು ವಿಶ್ವವಿದ್ಯಾಲಯದ ಕಾನೂನು ಕಾಲೇಜು ಮುಂಭಾಗದಲ್ಲಿ ಶಾಸಕರ ನಿಧಿಯಿಂದ ನಿರ್ಮಿಸಲಾಗಿರುವ ಮಿನಿ ಹೈ ಮಾಸ್ಟ್ ಲೈಟ್ ವರ್ಷಗಳಾಗಿ ಸ್ಥಾಪನೆಯಾಗಿದ್ದು, ವಿದ್ಯುತ್ ಸಂಪರ್ಕ ಸೇರಿದಂತೆ ಎಲ್ಲಾ ತಾಂತ್ರಿಕ ಕಾಮಗಾರಿಗಳು ಪೂರ್ಣಗೊಂಡಿರುವಂತೆಯೇ, ಇನ್ನೂ ಅಧಿಕೃತವಾಗಿ ಉದ್ಘಾಟನೆಯಾಗದೇ ಇರುವುದು ಸ್ಥಳೀಯರ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಪ್ರದೇಶವಾಸಿಗಳ ಹೇಳಿಕೆಯಂತೆ ಈ ಲೈಟ್ ಯೋಜನೆಗೆ ಸುಮಾರು 2 ಲಕ್ಷ ರೂ. ವೆಚ್ಚವಾಗಿದ್ದು, ಬಹುತೇಕ ವರ್ಷದ ಹಿಂದೆ ಕಾಮಗಾರಿ ಪೂರ್ಣಗೊಂಡಿದ್ದರೂ ಈಗಾಗಲೇ ಉದ್ಘಾಟನೆಯಿಲ್ಲದ ಕಾರಣ ಅದು ‘ಊಟಕ್ಕಿಲ್ಲದ ಉಪ್ಪಿನಕಾಯಿ’ ಎಂಬಂತಾಗಿದೆ. ಇದರ ಪರಿಣಾಮವಾಗಿ…

Read More

ಬಂಟ್ವಾಳ: ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ ನೀಡಿದ ಆರೋಪಿ ಅಂಧರ್

ಬಂಟ್ವಾಳ : ಮಾರ್ಚ್ 29 ರಂದು ಸಂಜೆ ವೇಳೆ ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ ನೀಡಿದ ಆರೋಪದ ಮೇಲೆ ಆರೋಪಿಯನ್ನು ಪೊಲೀಸರು ಪೊಸ್ಕೋ ಕೇಸ್ ನಲ್ಲಿ ಅರೆಸ್ಟ್ ಮಾಡಿದ್ದಾರೆ.ಬಂಧಿತನನ್ನು ಸಂತ್ರಸ್ಥೆ ಬಾಲಕಿಯ ನೆರೆಮನೆವಾಸಿ ಅಬೂಬಕ್ಕರ್ (50) ಎಂದು ಗುರುತಿಸಲಾಗಿದೆ. ಆರೋಪಿ ದಿನಾಂಕ 29.03.2025 ರಂದು ಸಂಜೆ 05.00 ಗಂಟೆ ಸಮಯಕ್ಕೆ ನೊಂದ ಬಾಲಕಿ ಆಟವಾಡುತ್ತಿದ್ದಾಗ ಆಕೆಯನ್ನು ಯಾರು ವಾಸ್ತವ್ಯ ಇರದ ಮನೆಯ ಹಿಂಬಾಗಿಲಿನಲ್ಲಿರುವ ಸಿಟೌಟ್ ಗೆ ಕರೆದುಕೊಂಡು ಹೋಗಿ ಬಲಾತ್ಕಾರವಾಗಿ ಲೈಂಗಿಕಕ್ರಿಯೆ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ….

Read More
error: Content is protected !!