ಜನವರಿ 7ರಂದು ಮಂಗಳೂರಿನಲ್ಲಿ “ದೈವಜ್ಞ ದರ್ಶನ” ಕಾರ್ಯಕ್ರಮ : ಉಭಯ ಶ್ರೀಗಳಿಗೆ ಪೂರ್ಣಕುಂಭ ಸ್ವಾಗತ

ಮಂಗಳೂರು : ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಸಂಸ್ಥಾನ. ದೈವಜ್ಞ ಬ್ರಾಹ್ಮಣ ಮಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಮಹಾಸ್ವಾಮೀಜಿಗಳವರ ಹಾಗೂ ಪರಮಪೂಜ್ಯ ಶ್ರೀ ಶ್ರೀ ಸುಜ್ಞಾನೇಶ್ವರ ಭಾರತೀ ಸ್ವಾಮೀಜಿಗಳವರ ದೈವಜ್ಞ ದರ್ಶನ ಕಾರ್ಯಕ್ರಮ ದಿನಾಂಕ 07- 01 -2026 ನೇ _ಬುಧವಾರ ಸಾಯಂಕಾಲ 6.00 ಗಂಟೆಗೆ ದೈವಜ್ಞ ಕಲ್ಯಾಣ ಮಂಟಪ, ಅಶೋಕನಗರ, ಮಂಗಳೂರು, ಇಲ್ಲಿ ನೆರವೇರಲಿದೆ. ದೈವಜ್ಞ ಬ್ರಾಹ್ಮಣ ಸಮಾಜದ ಸರ್ವಾಂಗೀಣ ವಿಕಾಸ, ಸಮಾಜ ಸಂಘಟನೆ ಹಾಗೂ ಧಾರ್ಮಿಕ ಭಾವನೆಗಳ ಸಂವರ್ಧನೆಗಾಗಿ ನಾಲ್ಕು ದಶಕಗಳ…

Read More

ಜನವರಿ 10ರಂದು “ನರಿಂಗಾನ ಕಂಬಳೋತ್ಸವ”-2026 : ವಿಧಾನ ಸಭೆಯ ಸ್ವೀಕರ್ ಹಾಗೂ ನರಿಂಗಾನ ಕಂಬಳೋತ್ಸವ ಸಮಿತಿಯ ಅಧ್ಯಕ್ಷರಾದ ಯು ಟಿ ಖಾದರ್

ಮಂಗಳೂರು:ನರಿಂಗಾನ ಕಂಬಳ ಸಮಿತಿ ಆಶ್ರಯದಲ್ಲಿ ನರಿಂಗಾನ ಗ್ರಾಮದ ಮೋರ್ಲ ಬೋಳದಲ್ಲಿ ನಾಲ್ಕನೇ ವರ್ಷದ ಹೊನಲು‌ ಬೆಳಕಿನ ಲವಕುಶ ಜೋಡುಕರೆ “ನರಿಂಗಾನ ಕಂಬಳೋತ್ಸವ”-2026 ಜನವರಿ 10ರಂದು ಶನಿವಾರ ಬೆಳಗ್ಗೆ 9.00ರಿಂದ ನಡೆಯಲಿದೆ ಎಂದು ವಿಧಾನ ಸಭೆಯ ಸ್ವೀಕರ್ ಹಾಗೂ ನರಿಂಗಾನ ಕಂಬಳೋತ್ಸವ ಸಮಿತಿಯ ಅಧ್ಯಕ್ಷರಾದ ಯು ಟಿ ಖಾದರ್ ತಿಳಿಸಿದರು. ಅವರು ಸರ್ಕ್ಯೂಟ್ ಹೌಸ್ ನಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಾರ್ಯಕ್ರಮವನ್ನು ಒಡಿಯೂರುವ ಶ್ರೀ ಗುರುದೇವದತ್ತ ಸಂಸ್ಥಾನಂನಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ಉದ್ಘಾಟಿಸಲಿದ್ದು ,ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ…

Read More

ವಿಜೃಂಭಣೆಯಿಂದ ನಡೆದ ಕುಲಾಲ ಸಮಾಜ ಬಾಂಧವರ ಕುಂಭ ಕಲಾವಳಿ-ಕುಲಾಲ ಕಲಾ ಸೇವಾಂಜಲಿ ಕಾರ್ಯಕ್ರಮ…!

ಮಂಗಳೂರು: ಕುಲಾಲ ಸಮುದಾಯವು ತಲೆತಲಾಂತರಗಳಿಂದ ಮಹಾನ್ ಸಾಧಕರನ್ನು ನೀಡಿರುವ ದಿವ್ಯ ಸಮುದಾಯವಾಗಿದ್ದು, ಎಲ್ಲ ಸಮುದಾಯಗಳ ಪ್ರೀತಿ ಮತ್ತು ಸ್ವೀಕಾರವನ್ನು ಪಡೆದಿದೆ. ನಮ್ಮದು ಎಂಬ ಭಾವನೆ ಮೂಡಿದಾಗಲೇ ರಾಜಕೀಯ ಹಾಗೂ ಸಾಮಾಜಿಕ ಬೆಳವಣಿಗೆ ಸಾಧ್ಯ. ಕಲೆ, ಸಂಸ್ಕೃತಿ ಮತ್ತು ಆಚಾರಗಳ ಪಾಲನೆ ಅಗತ್ಯವಿದ್ದು, ಪೂರ್ವಜರ ಆದರ್ಶಗಳನ್ನು ಅನುಸರಿಸಿ ಇನ್ನಷ್ಟು ಸೇವಾಕಾರ್ಯಗಳನ್ನು ಕೈಗೊಳ್ಳಬೇಕು. ಹುಟ್ಟುಸಾವಿನ ನಡುವಿನ ಜೀವನದಲ್ಲಿ ಧರ್ಮ ಹಾಗೂ ಕರ್ತವ್ಯ ಪ್ರಜ್ಞೆ ಅತ್ಯಂತ ಮುಖ್ಯವಾದುದು ಎಂದು ಶ್ರೀ ಧಾಮ ಮಾಣಿಲದ ಯೋಗಿ ಕೌಸ್ತುಭ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ…

Read More

ಅಂಗಡಿಗೆ ಹಾನಿಗೈದು ವ್ಯಾಪಾರಿ, ಸಹೋದರನಿಗೆ ಹಲ್ಲೆ -4 ಮಂದಿ ಬಂಧನ

ಮಂಜೇಶ್ವರ: ಕೇಳಿದ್ದ ಸಾಮಾನು ನೀಡಲಿಲ್ಲ ಎಂಬ ಅಸಮಾಧಾನದಿಂದ ಅಂಗಡಿಗೆ ದಾಳಿ ನಡೆಸಿದ ಆರೋಪದ ಮೇಲೆ ತಂದೆ ಮತ್ತು ಇಬ್ಬರು ಮಕ್ಕಳ ಸೇರಿದಂತೆ ನಾಲ್ವರನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ. ಪೇರಾಲ್ ನಿವಾಸಿಗಳಾದ ಸದಾಶಿವ (48), ಅವರ ಪುತ್ರರಾದ ಶ್ರವಣ್‌ರಾಜ್ (21) ಮತ್ತು ಸುದರ್ಶನ್ (25), ಜೊತೆಗೆ ಸಂಬಂಧಿಕ ಶರತ್ ಕುಮಾರ್ (26) ಬಂಧಿತರು. ಕುಂಬಳೆ ಠಾಣೆಯ ಎಸ್‌ಐ ಕೆ. ಶ್ರೀಜೇಶ್ ನೇತೃತ್ವದ ತಂಡ ಆರೋಪಿಗಳನ್ನು ವಶಕ್ಕೆ ಪಡೆದಿದೆ. ಘಟನೆ ಕಳೆದ ಶನಿವಾರ ಸಂಜೆ ಸುಮಾರು 7.30ರ ವೇಳೆಗೆ ಮೊಗ್ರಾಲ್…

Read More

16.50 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ಅಂಗನವಾಡಿ ಕಟ್ಟಡವನ್ನು ಉದ್ಘಾಟನೆಗೊಳಿಸಿದ ಶಾಸಕ ವೇದವ್ಯಾಸ ಕಾಮತ್

ಕುದ್ರೋಳಿ: ಮನಪಾ ವ್ಯಾಪ್ತಿಯ ವಾರ್ಡ್ ಸಂಖ್ಯೆ 43ರ ಕುದ್ರೋಳಿ ಕಂಡತ್ತಪಳ್ಳಿಯಲ್ಲಿ ಸುಮಾರು 16.50 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ಅಂಗನವಾಡಿ ಕಟ್ಟಡವನ್ನು ಶಾಸಕ ವೇದವ್ಯಾಸ ಕಾಮತ್ ರವರು ಉದ್ಘಾಟನೆಗೊಳಿಸಿದರು. ನಂತರ ಮಾತನಾಡಿದ ಶಾಸಕರು, 2022-23 ನೇ ಸಾಲಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಈ ಯೋಜನೆಯು ಮಂಜೂರಾಗಿದ್ದು ಇದೀಗ ಉದ್ಘಾಟನೆಗೊಳ್ಳುತ್ತಿರುವುದು ಸಂತಸ ತಂದಿದೆ. ಅಂಗನವಾಡಿ ಕೇಂದ್ರಗಳು ಈ ದೇಶದ ಭವಿಷ್ಯವಾಗಿರುವ ಮುಂದಿನ ಪೀಳಿಗೆಯನ್ನು ಉತ್ತಮ ಪ್ರಜೆಯನ್ನಾಗಿಸುವ ಮೊದಲ ಹಂತದ ಜ್ಞಾನ ದೇಗುಲಗಳು. ಇಲ್ಲಿ ಕಲಿಯುವ ಮಕ್ಳಳು ಮುಂದೆ ಈ ದೇಶದ…

Read More

ಉದ್ಯಾವರ ಸಾವಿರ ಜಮಾಅತ್ ಅಸ್ಸಯ್ಯಿದ್ ಶಹೀದ್ ವಲಿಯುಲ್ಲಾಹಿ ದರ್ಗಾದಲ್ಲಿಉದಯಾಸ್ತಮನ ಉರೂಸ್ ಮಹೋತ್ಸವವು ಬಾನುವಾರದಂದು ಅನ್ನದಾನದೊಂದಿಗೆ ಸಮಾಪ್ತಿ

ಮಂಜೇಶ್ವರ: ಸಾಮರಸ್ಯ, ಶಾಂತಿ ಮತ್ತು ಧಾರ್ಮಿಕ ಸಹಬಾಳ್ವೆಯ ಪ್ರತೀಕವಾಗಿ ಹೆಸರುವಾಸಿಯಾದ ಮಂಜೇಶ್ವರದ ಉದ್ಯಾವರದಲ್ಲಿ ಅಂತ್ಯ ವಿಶ್ರಮಗೊಳ್ಳುತ್ತಿರುವ ಉದ್ಯಾವರ ಸಾವಿರ ಜಮಾಅತ್ ಅಸ್ಸಯ್ಯಿದ್ ಶಹೀದ್ ವಲಿಯುಲ್ಲಾಹಿ ದರ್ಗಾದಲ್ಲಿ ಐದು ವರ್ಷಕ್ಕೊಮ್ಮೆ ನಡೆಯುವ ಉದಯಾಸ್ತಮನ ಉರೂಸ್ ಮಹೋತ್ಸವವು ಬಾನುವಾರದಂದು ಅನ್ನದಾನದೊಂದಿಗೆ ಸಮಾಪ್ತಿಯಾಯಿತು. ಕಳೆದ ಹತ್ತು ದಿನಗಳ ಕಾಲ ಭಕ್ತಿಭಾವದಿಂದ ನಡೆದ ಈ ಉರೂಸ್ ಆಚರಣೆಗಳು ಧರ್ಮೀಯ ಏಕತೆ ಮತ್ತು ಮಾನವೀಯತೆಯ ಸಂದೇಶವನ್ನು ಸಾರಿದವು. ಸಮಾರೋಪ ಸಮಾರಂಭದಲ್ಲಿ ಉದ್ಯಾವರ ಶ್ರೀ ಅರಸು ಮಂಜಿಷ್ಠನಾರ್ ಕ್ಷೇತ್ರದ ಪದಾಧಿಕಾರಿಗಳು ಹೊರೆ ಕಾಣಿಕೆಯೊಂದಿಗೆ ಆಗಮಿಸಿ ಭಾಗವಹಿಸಿದ್ದು,…

Read More

ಕನಿಲ ಶ್ರೀ ಭಗವತಿ ಕ್ಷೇತ್ರಕ್ಕೆ ಉದ್ಯಮಿ ಮಹಾಬಲೇಶ್ವರ ಭಟ್ ಭೇಟಿ

ಮಂಜೇಶ್ವರ : ಇತಿಹಾಸ ಪ್ರಸಿದ್ಧ ಕನಿಲ ಶ್ರೀ ಭಗವತಿ ಕ್ಷೇತ್ರದ ನವೀಕರಣ ಕೆಲಸಗಳು ಬರದಿಂದ ಸಾಗುತ್ತಿದ್ದು ಏಪ್ರಿಲ್ ತಿಂಗಳಲ್ಲಿ ಬ್ರಹ್ಮ ಕಲಶೋತ್ಸವ ನಡೆಯಲಿದ್ದು ಪೂರ್ವಭಾವಿಯಾಗಿ ತಯಾರಿಗಳು ನಡೆಯುತ್ತಿದೆ. ಸುತ್ತು ಗೋಪುರ , ದೈವಸ್ಥಾನಗಳು ನವೀಕರಣ ಗೊಳ್ಳುತ್ತಿದ್ದು ಸಮುದಾಯ ಮತ್ತು ಊರವರ ಸಹಕಾರದಿಂದ ನವೀಕರಣ ಮುಂದುವರಿಯುತ್ತಿದೆ. ಈ ಪ್ರಸಿದ್ಧ ಕ್ಷೇತ್ರಕ್ಕೆ ಖ್ಯಾತ ರಷ್ಯಾ ಉದ್ಯಮಿ ಹಾಗೂ ಕೊಡುಗೈ ದಾನಿ ಎಡಕಾನ ಶ್ರೀ ಮಹಾಬಲೇಶ್ವರ ಭಟ್ ಅವರು ಕ್ಷೇತ್ರಕ್ಕೆ ಭೇಟಿ ಕೊಟ್ಟರು. ಕ್ಷೇತ್ರದ ಸಮಿತಿ ಜೀರ್ಣೋದ್ದಾರ ಸಮಿತಿ , ಮಹಿಳಾ…

Read More

ಜನವರಿ ೧೧ ರಂದು ಮಂಗಳೂರಿನ ಅಡ್ಯಾರ್ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜು ಮೈದಾನದಲ್ಲಿ ರಾಮಕ್ಷತ್ರಿಯ ಸಮಾಜದ ಯುವ ಸಂಭ್ರಮ ಕ್ರೀಡೋತ್ಸವ ಕಾರ್ಯಕ್ರಮ

ಮಂಗಳೂರು: ಯುವ ಕ್ಷಾತ್ರ ಅಬ್ಬಕ್ಕನಾಡು, ಉಳ್ಳಾಲ , ರಾಮರಾಜ ಕ್ಷತ್ರಿಯ ಸೇವಾ ಸಂಘ (ರಿ.), ಉಳ್ಳಾಲ , ರಾಮರಾಜ ಕ್ಷತ್ರಿಯ ಮಹಿಳಾ ಸಂಘ ಉಳ್ಳಾಲಅರ್ಪಿಸುವ ಕೃಷ್ಣ ಜೆ. ಪಾಲೆಮಾ‌ರ್ ಇವರ ಭವ್ಯ ಸಾರಥ್ಯದಲ್ಲಿ ರಾಮಕ್ಷತ್ರಿಯ ಸಮಾಜದ ಯುವ ಸಂಭ್ರಮ ಕ್ರೀಡೋತ್ಸವ ಕಾರ್ಯಕ್ರಮವು ಜನವರಿ ೧೧ ರಂದು ಮಂಗಳೂರಿನ ಅಡ್ಯಾರ್ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜು ಮೈದಾನದಲ್ಲಿ ಮುಂಜಾನೆ 7.00 ರಿಂದ ನಡೆಯಲಿದೆ ಮತ್ತು ಸಂಜೆ 6.00ಕ್ಕೆ ‘ಪದಗ್ರಹಣ ಕಾರ್ಯಕ್ರಮ’ ನಡೆಯಲಿದೆ. ಯುವ ಸಂಭ್ರಮ ಕ್ರೀಡೋತ್ಸವದಲ್ಲಿ ಓವರ್-ಆರ್ಮ್ ಕ್ರಿಕೆಟ್ ಮತ್ತು…

Read More

ಶಾಲೆಯಲ್ಲಿ ಮಧ್ಯಾಹ್ನದ ಊಟ ತಯಾರಿಸುವಾಗ ಸ್ಟೌವ್‌ನಿಂದ ಆಕಸ್ಮಿಕವಾಗಿ ಬೆಂಕಿ ತಗುಲಿ ಅಡುಗೆ ನೌಕರೆ, ಉದ್ಯಾವರ ಮಾಡ ನಿವಾಸಿ ಜಯ (56) ಮೃತ್ಯು

ಮಂಜೇಶ್ವರ: ಬಂಗ್ರ ಮಂಜೇಶ್ವರ ಸರಕಾರಿ ಶಾಲೆಯಲ್ಲಿ ಮಧ್ಯಾಹ್ನದ ಊಟ ತಯಾರಿ ಮಾಡುವ ವೇಳೆ ಸ್ಟವ್ ನಿಂದ ಬೆಂಕಿ ತಗುಲಿ ಗಂಭೀರ ಸುಟ್ಟು ಗಾಯಗೊಂಡು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅಡುಗೆಯಾಳು ಮೃತಪಟ್ಟ ಘಟನೆ ನಿನ್ನೆ ರಾತ್ರಿ ನಡೆದಿದೆ.ಬಂಗ್ರ ಮಂಜೇಶ್ವರ ಸರಕಾರಿ ಹೈಸ್ಕೂಲಿನ ಅಡುಗೆ ನೌಕರೆ, ಉದ್ಯಾವರ ಮಾಡ ನಿವಾಸಿ ಜಯ (56) ಮೃತಪಟ್ಟ ವ್ಯಕ್ತಿಯಾಗಿದ್ದಾರೆ. ಗಂಭೀರ ಗಾಯಗೊಂಡು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಅವರು ನಿನ್ನೆ ರಾತ್ರಿ ನಿಧನರಾದರು. ಕಳೆದ ಡಿಸೆಂಬರ್ 16 ರಂದು ಇವರು ಬೆಂಕಿ…

Read More

ಪತ್ರಕರ್ತ, ಮಾಧ್ಯಮ ಕ್ಷೇತ್ರದ ವಿಶೇಷ ಅಂಕಣಕಾರ ಎಸ್ .ಜಗದೀಶ್ಚಂದ್ರ ಅಂಚನ್ ಮಂಗಳೂರಿಗೆ ಕನ್ನಡ ಭವನದ ಪ್ರತಿಷ್ಠಿತ “ಕನ್ನಡ ಪಯಸ್ವಿನಿ ಅಚೀವ್ಮೆಂಟ್ ಅವಾರ್ಡ್ 2026.ಗೆ ಆಯ್ಕೆ

ಕಾಸರಗೋಡು: ಕಾಸರಗೋಡು ಜನಪ್ರಿಯ ಪತ್ರಕರ್ತ, ವಿಮರ್ಶಕ ಅನುಕರಣೀಯ ವ್ಯಕ್ತಿತ್ವದ ಎಸ್ ಜಗದೀಶ್ಚಂದ್ರ ಅಂಚನ್ ಮಂಗಳೂರು ಇವರಿಗೆ ಕನ್ನಡ ಭವನದ ಪ್ರತಿಷ್ಠಿತ ಅಂತರ್ ರಾಜ್ಯ ಪ್ರಶಸ್ತಿಯಾದ “ಕನ್ನಡ ಪಯಸ್ವಿನಿ ಪ್ರಶಸ್ತಿ 2026.” ನ್ನು ಜನವರಿ 18ಕ್ಕೆ ಕನ್ನಡ ಭವನ ರಜತ ಸಂಭ್ರಮ -ನಾಡು ನುಡಿ ಹಬ್ಬ ಕಾರ್ಯಕ್ರಮ ದಲ್ಲಿ, ಕನ್ನಡ ಭವನ, ನುಳ್ಳಿಪ್ಪಾಡಿ, ಕಾಸರಗೋಡಿ ನಲ್ಲಿ ನೀಡಿ ಗೌರವಿಸಲಿದ್ದೇವೆ ಎಂದು ಕನ್ನಡ ಭವನ ಸ್ಥಾಪಕ ಅಧ್ಯಕ್ಷರಾದ ಡಾ. ವಾಮನ್ ರಾವ್ ಬೇಕಲ್ ಹಾಗೂ ಕಾರ್ಯದರ್ಶಿ ವಸಂತ್ ಕೆರೆಮನೆ ತಿಳಿಸಿದ್ದಾರೆ.

Read More
error: Content is protected !!