ಭೂಮಿಕಾ ಪ್ರತಿಷ್ಠಾನ ಉಡುಪುಮೂಲೆ (ರಿ) ಎಡನೀರು ವತಿಯಿಂದ ಕನ್ನಡ ಸಂಸ್ಕೃತಿ ಶಿಬಿರ.
ಭೂಮಿಕಾ ಪ್ರತಿಷ್ಠಾನ ಉಡುಪುಮೂಲೆ (ರಿ) ಎಡನೀರು ವತಿಯಿಂದ ಕನ್ನಡ ಸಂಸ್ಕೃತಿ ಶಿಬಿರ. ಎಡನೀರು : ಭೂಮಿಕಾ ಪ್ರತಿಷ್ಠಾನ ಉಡುಪುಮೂಲೆ (ರಿ) ಎಡನೀರು ಕಾಸರಗೋಡು ಇದರ ನೇತೃತ್ವದಲ್ಲಿ 13 ನೇ ವರ್ಷದ ಐದು ದಿನಗಳ ಉಚಿತ ಕನ್ನಡ ಸಂಸ್ಕೃತಿ ಶಿಬಿರವು ಶ್ರೀ ಈಶ್ವರಾನಂದ ಭಾರತಿ ಸ್ವಾಮೀಜಿ ಹೈಯರಿ ಸೆಕೆಂಡರಿ ಶಾಲೆ ಎಡನೀರು ಕಾಸರಗೋಡಿನಲ್ಲಿ ಇತ್ತೀಚೆಗೆ ಜರಗಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಪರಮಪೂಜ್ಯ ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಭಾರತಿ ಶ್ರೀಪಾದಂಗಳವರು ನೆರವೇರಿಸಿದರು.ಮುಖ್ಯ ಅತಿಥಿಯಾಗಿ ಬಿ. ಎ.ಆರ್. ಎಚ್. ಬೋವಿಕ್ಕಾನ ಶಾಲೆಯ…
