ಕುಂದಾಪುರ: ಸ್ಕೂಟರ್ ಗೆ ಬಸ್ ಡಿಕ್ಕಿ: ಸಹಸವಾರೆ ಪತ್ನಿ ಮೃತ್ಯು, ಪತಿ ಗಂಭೀರ
ಉಡುಪಿ: ಬಸ್ಸೊಂದು ಸ್ಕೂಟರ್‌ಗೆ ಢಿಕ್ಕಿ ಹೊಡೆದ ಪರಿಣಾಮ ಹಿಂಬದಿ ಸವಾರೆ ಸ್ಥಳದಲ್ಲೇ ಮೃತಪಟ್ಟ ಘಟನೆ ಕುಂದಾಪುರ ಸಂಗಮ್ ಜಂಕ್ಷನ್ ಸಮೀಪದ ನವಭಾರತ್ ಟಿಂಬರ್ ಎದುರಿನ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ. ಮೃತರನ್ನು ಹೊಸಮಠ ಚಾರುಕೊಟ್ಟಿಗೆ ನಿವಾಸಿ ಜಲಜಾ(64) ಎಂದು ಗುರುತಿಸಲಾಗಿದೆ. ಇವರ ಪತಿ ಸ್ಕೂಟರ್ ಸವಾರ ನಾರಾಯಣ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರು ಆನಗಳ್ಳಿಯಿಂದ ಚಾರುಕೊಟ್ಟಿಗೆ ಕಡೆಗೆ ಸ್ಕೂಟರ್‌ನಲ್ಲಿ ಹೋಗುತ್ತಿದ್ದು, ಆಗ ಹಿಂದಿನಿಂದ ಬಂದ ಬಸ್, ಸ್ಕೂಟರ್‌ಗೆ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರ ಪರಿಣಾಮ ನಾರಾಯಣ…
