Headlines

ಮಧ್ಯರಾತ್ರಿ ಬೆಂಕಿ ಅವಘಡ: ಮನೆ, ವಾಹನಗಳು ಬೆಂಕಿಗೆ ಆಹುತಿ

ಶಾರ್ಟ್ ಸರ್ಕ್ಯೂಟ್‌ ನಿಂದ ಮೂರು ದ್ವಿಚಕ್ರ ವಾಹನ ಹಾಗೂ ಶೆಡ್ ಸಹಿತ ವಿವಿಧ ಸಾಮಾಗ್ರಿಗಳು ಉರಿದು ನಾಶ ಗೊಂಡ ಘಟನೆ ನಡೆದಿದೆ. ಪೈವಳಿಕೆ ಪಂಚಾಯತ್ ವ್ಯಾಪ್ತಿಯ ಬೊಳಂ ಪಾಡಿ ಬಳಿಯ ಕಯ್ಯಾರು ಕೆಳಗಿನ ಮನೆ ಪ್ರಕಾಶ್ ರೈ ಎಂಬವರ ಮನೆಯಲ್ಲಿ ಘಟನೆ ನಡೆದಿದೆ. ನಿನ್ನೆ ಮುಂಜಾನೆ ಪ್ರಕಾಶ್ ರೈ ಯವರು ಹೊರಗಡೆ ಹೋದಾಗ ಸಂಪೂರ್ಣ ಸುಟ್ಟು ಹೋದ ಸ್ಥಿತಿಯಲ್ಲಿ ಕಂಡು ಬಂದಿದೆ. ಮನೆಯ ಬಳಿಯಲ್ಲೇ ಹೆಂಚು ಹಾಸಿದ ಶೆಡ್ಜ್ ಇದ್ದು ಇದಕ್ಕೆ ಬೆಂಕಿ ತಗಲಿ ಇದೇ ಪರಿಸರದಲ್ಲಿರಿಸ…

Read More

ವಾಕಿಂಗ್ ಟುಗೆದರ್ ಫೌಂಡೇಶನ್–ಆಸ್ಟರ್ ಮಿಮ್ಸ್ ಸಹಯೋಗದಲ್ಲಿ ಕ್ಯಾನ್ಸರ್ ಸ್ಕ್ರೀನಿಂಗ್ ಶಿಬಿರ

ಉಪ್ಪಳ–ಬೇಕೂರು ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿರುವ ವಾಕಿಂಗ್ ಟುಗೆದರ್ ಫೌಂಡೇಶನ್, ಕಾಸರಗೋಡು ಆಸ್ಟರ್ ಮಿಮ್ಸ್‌ ಜೊತೆಗೂಡಿ ಕ್ಯಾನ್ಸರ್ ಸ್ಕ್ರೀನಿಂಗ್ ಟೆಸ್ಟ್ ಶಿಬಿರವನ್ನು ಆಯೋಜಿಸುತ್ತಿದೆ. ಉದ್ಯೋಗ, ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರಗಳಿಗೆ ಫೌಂಡೇಶನ್ ವಿಶೇಷ ಗಮನ ನೀಡುತ್ತಿದೆ. ಕಳೆದ ಎರಡು ವರ್ಷಗಳಿಂದ ಮಂಜೇಶ್ವರ ಪ್ರದೇಶದ ವಿವಿಧ ಸಮಸ್ಯೆಗಳ ಕುರಿತು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ . ಇತರ ಸ್ವಯಂಸೇವಾ ಸಂಸ್ಥೆಗಳು ಹಾಗೂ ಆಸ್ಪತ್ರೆಗಳೊಂದಿಗೆ ಸಹಕಾರ ಮಾಡಿಕೊಂಡು ಇನ್ನೂ ಹಲವು ಕಾರ್ಯಕ್ರಮಗಳನ್ನು ನಡೆಸುವ ಯೋಜನೆಯೂ ಇದೆ. ಫೆಬ್ರವರಿ 10ರಂದು ಮಂಗಳವಾರ ಬೇಕೂರು ಸುಭಾಷ್ ನಗರದಲ್ಲಿರುವ ಸೀ…

Read More

ತುರ್ತಿ ತರವಾಡು ಸನ್ನಿಧಿಯಲ್ಲಿ ಶ್ರೀ ವಯನಾಟ್ಟುಕುಲವನ್ ತೆಯ್ಯಂ ಕಟ್ಟು ಮಹೋತ್ಸವ ಆಮಂತ್ರಣ ಬಿಡುಗಡೆ

ತುರ್ತಿ ಶ್ರೀ ವಿಷ್ಣುಮೂರ್ತಿ ವಯನಾಟ್ಟು ಕುಲವನ್ ಮಹಾಮಲರಾಯ ದೈವಸ್ಥಾನ ಪಡೆಂಕುಡಿಯ ತರವಾಡು ಸನ್ನಿಧಿಯಲ್ಲಿ ಇದೇ ಬರುವ ಏಪ್ರಿಲ್ ತಿಂಗಳ 9 10 11 12 ಎಂಬಿ ದಿನಾಂಕಗಳಲ್ಲಿ ನಡೆಯಲಿರುವ ಶ್ರೀ ವಯನಾಟುಕುಲವನ್ ತೆಯ್ಯಂ ಕಟ್ಟು ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭವು ತರವಾಡು ಸನ್ನಿಧಿಯಲ್ಲಿ ನಡೆಯಿತು. ಶ್ರೀ ದೈವಗಳಲ್ಲಿ ಪ್ರಾರ್ಥಿಸಿದ ಬಳಿಕ ಅಡ್ಕ ಶ್ರೀ ಭಗವತಿ ಕ್ಷೇತ್ರದ ಕಾರ್ನವರಾದ ಶ್ರೀ ಕೃಷ್ಣ ಕಾರ್ ನವರು.. ಆಮಂತ್ರಣ ಪತ್ರಿಕೆಯನ್ನು ಸಮಾಜ ಸೇವ ಧುರೀಣರಾದ ಶ್ರೀ ಕೆ ಆರ್ ಜಯಾನಂದ…

Read More

ಕ್ಯಾನ್ಸರ್ ಬಗ್ಗೆ ಭಯ ಬೇಡ, ಅರಿವು ಇರಲಿ – ಡಾ. ಹೆಚ್. ಆರ್ ತಿಮ್ಮಯ್ಯ

ಮಂಗಳೂರು-ಕ್ಯಾನ್ಸರ್ ಎಂಬ ಮಾರಕ ಖಾಯಿಲೆಗೆ ಭಯ ಪಡದೆ ಆರಂಭದಲ್ಲಿಯೇ ಶೀಘ್ರ ಚಿಕಿತ್ಸೆ ಪಡೆದುಕೊಳ್ಳುವುದು ಅತ್ಯಗತ್ಯ. ಕ್ಯಾನ್ಸರ್ ಶೀಘ್ರ ಪತ್ತೆ ಮತ್ತು ತಪಾಸಣೆಯಿಂದ ತಡೆಗಟ್ಟಬಹುದು. ಈ ರೋಗದ ವಿರುದ್ಧ ಹೋರಾಡಲು ಸಾರ್ವಜನಿಕರಲ್ಲಿ ಅರಿವು ಮೂಡಿಸುವುದರಿಂದ ಸ್ವಸ್ಥ ಸಮಾಜ ನಿರ್ಮಾಣವಾಗುತ್ತದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಹೆಚ್. ಆರ್ ತಿಮ್ಮಯ್ಯ ಹೇಳಿದರು.ಅವರು ಶನಿವಾರ ನಗರದ ಜಿಲ್ಲಾ ಆಸ್ಪತ್ರೆಯ ಆರ್.ಎ.ಪಿ.ಸಿ.ಸಿ ಸಭಾಂಗಣದಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ವೆನ್‍ಲಾಕ್…

Read More

“ಬಾಲ್ಯ ವಿವಾಹ ಮುಕ್ತ ಭಾರತ” ಅಭಿಯಾನದಡಿ ಕಾನೂನು ಅರಿವು ಕಾರ್ಯಗಾರ

ಮಂಗಳೂರು:- ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಬೆಂಗಳೂರು ಜಿಲ್ಲಾ ನ್ಯಾಯಾಂಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ ಜಿಲ್ಲಾಡಳಿತ ಹಾಗೂ ವಿವಿಧ ಬ್ಯಾಂಕ್‍ಗಳ ಒಕ್ಕೂಟ, ದಕ್ಷಿಣ ಕನ್ನಡ, ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ “ಬಾಲ್ಯ ವಿವಾಹ ಮುಕ್ತ ಭಾರತ” ಅಭಿಯಾನದಡಿ ಕಾನೂನು ಅರಿವು ಕಾರ್ಯಗಾರ ಶನಿವಾರ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಿತು.ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ನ್ಯಾಯಾಧೀಶ ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹೆಚ್ ಶಶಿಧರ ಶೆಟ್ಟಿ ಮಾತನಾಡಿ,…

Read More

ಹರೇಕಳ ನ್ಯೂಪಡ್ಪು ಪಿಯು ಕಾಲೇಜು ನೂತನ ಕಟ್ಟಡಕ್ಕೆ ಶಿಲಾನ್ಯಾಸ

ಪದ್ಮಶ್ರೀ ಹರೇಕಳ ಹಾಜಬ್ಬ ಅವರ ಪರಿಶ್ರಮದಿಂದ ನೂತನವಾಗಿ ಆರಂಭಗೊಂಡಿರುವ ಹರೇಕಳ ನ್ಯೂಪಡ್ಪು ಸರಕಾರಿ ಪದವಿಪೂರ್ವ ಕಾಲೇಜಿಗೆ ದಗನೆಪಡ್ಪುವಿನಲ್ಲಿ ಸರಕಾರದಿಂದ ಮಂಜೂರುಗೊಂಡಿರುವ ಜಾಗದಲ್ಲಿ ಎಂಆರ್ ಪಿಎಲ್ ಕಂಪೆನಿ ಮಂಗಳೂರು ಇದರ 45 ಲಕ್ಷ ರೂ. ಅನುದಾನದಲ್ಲಿ ನಿರ್ಮಾಣಗೊಳ್ಳಲಿರುವ ಕಾಲೇಜಿನ ನೂತನ ಕಟ್ಟಡದ 2 ಕೊಠಡಿಗಳಿಗೆ ಶಿಲಾನ್ಯಾಸ ಕಾರ್ಯಕ್ರಮ ನಡೆಯಿತು. ಕರ್ನಾಟಕ ವಿಧಾನಸಭಾಧ್ಯಕ್ಷ ಡಾ.ಯು.ಟಿ.ಖಾದರ್ ಫರೀದ್ ಎಂಆರ್ ಪಿಎಲ್ ಕಂಪೆನಿ ಅನುದಾನದಲ್ಲಿ ನಿರ್ಮಾಣಗೊಳ್ಳಲಿರುವ ಕಾಲೇಜಿನ ನೂತನ ಕಟ್ಟಡಕ್ಕೆ ಶಿಲಾನ್ಯಾಸ ಗೈದರು.ಬಳಿಕ ಮಾತನಾಡಿದ ಅವರು ,ನ್ಯೂಪಡ್ಪು ಸರಕಾರಿ ಪದವಿಪೂರ್ವ ಕಾಲೇಜಿನ ಮುಂದಿನ…

Read More

ಜಿಲ್ಲೆಯ ಟೋಲ್ ಗೇಟ್ ಗಳಲ್ಲಿ ಹಿಂದಿ ಭಾಷಿಕರಿಂದ ದೌರ್ಜನ್ಯ: ಕರವೇ ಎಚ್ಚರಿಕೆ

ಉಡುಪಿ: ಉಡುಪಿ ಜಿಲ್ಲೆಯ ಟೋಲ್ ಗೇಟ್ ಗಳಲ್ಲಿ ಹಿಂದಿ ಭಾಷಿಕರಿಂದ ದೌರ್ಜನ್ಯ ಹೆಚ್ಚಾಗುತ್ತಿದ್ದು, ಕನ್ನಡಿಗರ ಮೇಲೆ ದರ್ಪ ತೋರಿಸುತ್ತಿದ್ದಾರೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಗೌರವಾಧ್ಯಕ್ಷ ಅನ್ಸಾರ್ ಅಹಮ್ಮದ್ ಹೇಳಿದರು. ಉಡುಪಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕೆಲ ದಿನಗಳ ಹಿಂದೆ ಸಾಸ್ತಾನ ಟೋಲ್ ಗೇಟ್ ನಲ್ಲಿ ಮಾಜಿ ಸೈನಿಕರೊಬ್ಬರನ್ನು ಅವಮಾನಿಸಲಾಯಿತು. ಅಲ್ಲದೇ ಕನ್ನಡಪರ ಸಂಘಟನೆ ವಾಹನವನ್ನು ಹೆಜಮಾಡಿ ಟೋಲ್ ಗೇಟ್ ನಲ್ಲಿ ಅವಮಾನಿಸಿದ್ದಾರೆ. ಹಿಂದಿ ಭಾಷಿಕರಿಂದ ಕನ್ನಡಿಗರ ಮೇಲೆ ಪದೇ ಪದೇ ದೌರ್ಜನ್ಯ ನಡೆಯುತ್ತಿದೆ. ಈ…

Read More

ಲೇಖಕ, ಕಾದಂಬರಿಕಾರ, ಸಂಘಟಕ ಕಥಾಬಿಂಧು ಪ್ರಕಾಶನ ರೂವಾರಿ, ಮಂಗಳೂರಿನ ಪಿ. ವಿ. ಪ್ರದೀಪ್ ಕುಮಾರ್ ಇವರೀಗೆ, “ನಾಡೋಜ ಡಾ. ಕಯ್ಯಾರ ರಾಷ್ಟ್ರೀಯ ಪ್ರಶಸ್ತಿ”2026ಕ್ಕೆ ಆಯ್ಕೆ

ಡಾ. ವಾಮನ್ ರಾವ್ ಬೇಕಲ್ ಸ್ಥಾಪಕ ಸಂಚಾಲಕರಾಗಿರುವ “ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯ (ರಿ. 223/2008.)ಇದರ ಅಂಗ ಸಂಸ್ಥೆಯಾದ ಕೇರಳ ರಾಜ್ಯ -ಕನ್ನಡ ಚುಟುಕು ಸಾಹಿತ್ಯ ಪರಿಷತ್ತು, ಇದರ ವಾರ್ಷಿಕೋತ್ಸವದ ಪ್ರಯುಕ್ತ 22.02.2026 ಭಾನುವಾರ ಕನ್ನಡ ಭವನ ನುಳ್ಳಿಪ್ಪಾಡಿ ಕಾಸರಗೋಡು ನಲ್ಲಿನಡೆಯಲಿರುವ “ಕಾಸರಗೋಡು -ಕರ್ನಾಟಕ ಚುಟುಕು ಸಾಹಿತ್ಯ ಸಮ್ಮೇಳನ ದಲ್ಲಿ ಈ ಪ್ರಶಸ್ತಿ ಯನ್ನು ಪಿ.ವಿ ಪ್ರದೀಪ್ ಕುಮಾರ್ ಇವರಿಗೆ ಪ್ರಶಸ್ತಿ ನೀಡಿ ಗೌರವಿಸಲಿದ್ದೇವೆ ಎಂದು ಕನ್ನಡ ಭವನ ಸ್ಥಾಪಕ ಅಧ್ಯಕ್ಷರಾದ…

Read More

ಲಾಡ್ಜ್ ನಲ್ಲಿ ಕುರ್ಚಿಯಲ್ಲಿ ಕುಳಿತ ಸ್ಥಿತಿಯಲ್ಲೇ ವ್ಯಕ್ತಿ ಮೃತ್ಯು

ಉಡುಪಿ: ಉಡುಪಿ ನಗರದ ಹಳೆ ಸರಕಾರಿ ಬಸ್ ನಿಲ್ದಾಣದ ಬಳಿ ಇರುವ ವಸತಿಗೃಹದಲ್ಲಿ ಯಾತ್ರಾರ್ಥಿಯೊಬ್ಬರು ಕುಳಿತ ಕುರ್ಚಿಯಲ್ಲಿಯೇ ಸಾವನಪ್ಪಿರುವ ಘಟನೆ‌ ನಡೆದಿದೆ.‌ವ್ಯಕ್ತಿಯು ಕೊಠಡಿಯಿಂದ‌ ಹೊರಬರದಿರುವುದನ್ನು ಗಮನಿಸಿದ ಲಾಡ್ಜ್ ಸಿಬ್ಬಂದಿ ‌ಸಂಶಯಪಟ್ಟು ಬಾಗಿಲು‌ ತೆರೆದು‌ ನೋಡಿದಾಗ ವ್ಯಕ್ತಿ ಮೃತಪಟ್ಟಿರುವುದು ಕಂಡುಬಂದಿದೆ. ಮೃತ ವ್ಯಕ್ತಿಯನ್ನು ದಾವಣಗೆರೆಯ ನಿವಾಸಿ ಮಹಾಂತೇಶ ಎಂ.ಜಿ. ಎಂದು ಗುರುತಿಸಲಾಗಿದೆ. ಸಾವಿಗೆ ಸ್ವಷ್ಟ ಕಾರಣ ತಿಳಿದುಬಂದಿಲ್ಲ. ಅನಾರೋಗ್ಯದಿಂದ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ. ಮೃತ ವ್ಯಕ್ತಿ ಮನೆಯಲ್ಲಿ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಹೋಗುವುದಾಗಿ ಹೇಳಿ ಬಂದಿದ್ದನೆಂದು ತಿಳಿದುಬಂದಿದೆ.ನಗರ ಪೋಲಿಸ್ ಠಾಣೆಯ…

Read More

ಶಾರ್ಟ್ ಸರ್ಕ್ಯೂಟ್‌ನಿಂದ ಕಾರಿಗೆ ಬೆಂಕಿ.ತಪ್ಪಿದ ದೊಡ್ಡ ಅನಾಹುತ

ಮಂಗಳೂರು:ಶಾರ್ಟ್ ಸರ್ಕ್ಯೂಟ್‌ನಿಂದ ಕಾರೊಂದಕ್ಕೆ ಬೆಂಕಿ ತಗುಲಿ ಭಾಗಶಃ ಸುಟ್ಟು ಹೋಗಿರುವ ಘಟನೆ ನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ಸಮೀಪ ನಡೆದಿದೆ.ಘಟನೆ ವೇಳೆ ಕಾರು ಚಾಲಕ ಸಮಯಕ್ಕೆ ಸರಿಯಾಗಿ ವಾಹನದಿಂದ ಇಳಿದುಕೊಂಡ ಪರಿಣಾಮ ಅಪಾಯದಿಂದ ಪಾರಾಗಿದ್ದಾರೆ. ಜನ ನಿಬಿಡ ಹಾಗೂ ವಾಹನ ದಟ್ಟಣೆಯ ಪ್ರದೇಶದಲ್ಲೇ ಘಟನೆ ಸಂಭವಿಸಿದರಿಂದ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ತಕ್ಷಣ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದರು. ಘಟನೆಯಲ್ಲಿ ಕಾರಿನ ಅರ್ಧಭಾಗ ಸುಟ್ಟು ಹಾನಿಯಾಗಿದೆ.ಘಟನೆಯ ಕುರಿತು ಹೆಚ್ಚಿನ…

Read More
error: Content is protected !!