ಅಮೆರಿಕದಿಂದ ಭಾರತ ಸೇರಿ 17 ದೇಶಗಳ ಆಮದು ಸರಕುಗಳಿಗೆ ಶೇ.10 ಸುಂಕ
ನವದೆಹಲಿ: ಬಲವಂತದ ಕಾರ್ಮಿಕರ ಶ್ರಮದಿಂದ ಉತ್ಪಾದಿಸಲಾದ ವಸ್ತುಗಳ ಬಳಕೆಯನ್ನು ತಡೆಯುವ ಉದ್ದೇಶದಿಂದ ಅಮೆರಿಕವು ಭಾರತ ಸೇರಿದಂತೆ 17 ದೇಶಗಳಿಂದ ಆಮದು ಆಗುವ ಕೆಲವು ಸರಕುಗಳ ಮೇಲೆ ಶೇ.10ರ ಸುಂಕ ವಿಧಿಸಿದೆ. 1974ರ ಟ್ರೇಡ್ ಆ್ಯಕ್ಟ್‌ನ ಸೆಕ್ಷನ್ 301 ಅಡಿಯಲ್ಲಿ ಈ ಕ್ರಮ ಜಾರಿಗೆ ಬಂದಿದ್ದು, ಆರಂಭದಲ್ಲಿ ಭಾರತಕ್ಕೆ ಶೇ.12.5ರ ಸುಂಕ ಪ್ರಸ್ತಾಪಿಸಲಾಗಿತ್ತು. ಆದರೆ, ಬಲವಂತದ ಕಾರ್ಮಿಕರಿಂದ ತಯಾರಾದ ಸರಕುಗಳ ಆಮದನ್ನು ನಿಷೇಧಿಸುವಂತೆ ಭಾರತ ವಿದೇಶಿ ವ್ಯಾಪಾರ ನೀತಿಗೆ ತಿದ್ದುಪಡಿ ಮಾಡಿದ ಹಿನ್ನೆಲೆಯಲ್ಲಿ ಸುಂಕವನ್ನು ಶೇ.10ಕ್ಕೆ ಇಳಿಸಲಾಗಿದೆ. ಒಟ್ಟು…
