ವಿಶ್ವ ಹೃದಯ ದಿನ: ಇಂಡಿಯಾನಾ ಆಸ್ಪತ್ರೆಯಲ್ಲಿ ₹1,499ಕ್ಕೆ ಸಂಪೂರ್ಣ ಹೃದಯ ತಪಾಸಣೆ

ಮಂಗಳೂರು, ಸೆ. 16:* ವಿಶ್ವ ಹೃದಯ ದಿನದ ಅಂಗವಾಗಿ ನಗರದ ಇಂಡಿಯಾನಾ ಆಸ್ಪತ್ರೆ ಮತ್ತು ಹೃದಯ ಸಂಸ್ಥೆಯು ಸಾರ್ವಜನಿಕರಿಗಾಗಿ ವಿಶೇಷ ರಿಯಾಯಿತಿ ದರದಲ್ಲಿ ಸಂಪೂರ್ಣ ಹೃದಯ ತಪಾಸಣಾ ಪ್ಯಾಕೇಜ್ ಘೋಷಿಸಿದೆ. ಸಾಮಾನ್ಯವಾಗಿ ₹3,000 ಮೌಲ್ಯದ ಈ ತಪಾಸಣಾ ಪ್ಯಾಕೇಜ್‌ನ್ನು ಇದೀಗ ಕೇವಲ ₹1,499ಕ್ಕೆ ನೀಡಲಾಗುತ್ತಿದ್ದು, ಈ ವಿಶೇಷ ಕೊಡುಗೆ ಸೆಪ್ಟೆಂಬರ್ 30, 2026ರವರೆಗೆ ಲಭ್ಯವಿರಲಿದೆ. ಪ್ಯಾಕೇಜ್‌ನಲ್ಲಿ ECHO/TMT, ಲಿಪಿಡ್ ಪ್ರೊಫೈಲ್, ಕ್ರಿಯೇಟಿನೈನ್, ರಾಂಡಮ್ ಬ್ಲಡ್ ಶುಗರ್ (RBS) ಹಾಗೂ ECG ಪರೀಕ್ಷೆಗಳು, ಆಹಾರ ಪದ್ಧತಿ ಕುರಿತು ತಜ್ಞರ…

Read More

ಕರಾವಳಿ ಅಭಿವೃದ್ಧಿಗೆ ಹೊಸ ರೂಪ: ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ

ಮಂಗಳೂರು, ಸೆ.17: ಕರಾವಳಿ ಭಾಗದ ಅಭಿವೃದ್ಧಿಗೆ ಹೊಸ ರೂಪ ನೀಡುವ ಉದ್ದೇಶದಿಂದ ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ನಡೆಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಮಂಗಳೂರು ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಕರಾವಳಿ ಹಾಗೂ ಮಲೆನಾಡು ಭಾಗಗಳು ವಿದ್ಯಾವಂತರು ಮತ್ತು ಬುದ್ಧಿವಂತರು ಇರುವ ಜಿಲ್ಲೆಗಳಾಗಿದ್ದು, ಈ ಭಾಗಕ್ಕೆ ಮತ್ತಷ್ಟು ಶಕ್ತಿ ತುಂಬುವ ಉದ್ದೇಶದಿಂದ ಸಂಪುಟ ಸಭೆ ನಡೆಸಲಾಗುತ್ತಿದೆ ಎಂದರು. ಕರಾವಳಿ ಭಾಗದ ಶಾಸಕರು ಹಾಗೂ ಸಂಸದರು ತಮ್ಮನ್ನು ಭೇಟಿಯಾಗಿ ಸ್ಥಳೀಯ ಸಮಸ್ಯೆಗಳು ಮತ್ತು ವಿವಿಧ ಬೇಡಿಕೆಗಳನ್ನು…

Read More

ಪ್ರಧಾನಿ ಮೋದಿ ಜನ್ಮದಿನದ ಪ್ರಯುಕ್ತ ರಕ್ತದಾನ ಶಿಬಿರ ಆಯೋಜನೆ

ಮಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಜನ್ಮದಿನದ ಅಂಗವಾಗಿ ಮಂಗಳೂರಿನ ಬಜಿಲಕೇರಿಯಲ್ಲಿರುವ ಸೇವಾಂಜಲಿ ಏರೆನಾದಲ್ಲಿ ಸೆಪ್ಟೆಂಬರ್ 18 ರಂದು ರಕ್ತದಾನ ಶಿಬಿರ ಜರುಗಿತು. ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ಆಶ್ರಯದಲ್ಲಿ ಕೆಎಂಸಿ ಆಸ್ಪತ್ರೆಯ ಸಹಯೋಗದೊಂದಿಗೆ ಬಿರುವೆರ್ ಕುಡ್ಲ, ಕಾಳಿಚರಣ್ ಫ್ರೆಂಡ್ಸ್, ಬಜಿಲಕೇರಿ ಫ್ರೆಂಡ್ಸ್ ಸಹಕಾರದಲ್ಲಿ ರಕ್ತದಾನ ಶಿಬಿರ ನಡೆಯಿತು. ದೀಪ ಬೆಳಗಿಸಿ ಮಾತನಾಡಿದ ಸಾಮಾಜಿಕ ಹೋರಾಟಗಾರ ಹನುಮಂತ್ ಕಾಮತ್, ಪ್ರತಿ ಮೂರು ತಿಂಗಳಿಗೊಮ್ಮೆ ನಾವು ರಕ್ತದಾನ ಮಾಡಬಹುದು. ಒಬ್ಬ ವ್ಯಕ್ತಿ ಒಂದು ಸಲ ಮಾಡುವ ರಕ್ತದಾನದಿಂದ ಮೂರು ಅಮೂಲ್ಯ…

Read More

ಯು.ಕೆ. ಉದ್ಯೋಗದ ಆಮಿಷ: 4.84 ಲಕ್ಷ ರೂ. ವಂಚನೆ ಆರೋಪ

​ಕಾಸರಗೋಡು : ಯು.ಕೆ.ಯಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ವಂಚಿಸಿರುವ ಘಟನೆಗೆ ಸಂಬಂಧಿಸಿದಂತೆ ವಿದ್ಯಾನಗರ ಪೊಲೀಸರು ಇಬ್ಬರ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ. ​ಮಧೂರು ಹಿದಾಯತ್ ನಗರದ ಅಬ್ದುಲ್ ರೌಫ್ (45) ವಂಚನೆಗೊಳಗಾದವರು. ಇವರಿಂದ ಕೊಲ್ಲಂ ಮೂಲದ ಶ್ಯಾಮ ಸುಕುಮಾರನ್ ನಾಯರ್ ಹಾಗೂ ಗೈಸ್‌ ಬೋಬಿ ಎಂಬುವವರು ಯು.ಕೆಯ ‘ಬಾರ್ ಚೆಸ್ಟರ್ ಹೆಲ್ತ್ ಕೇರ್’ ಸಂಸ್ಥೆಯಲ್ಲಿ ಕೆಲಸ ಕೊಡಿಸುವುದಾಗಿ ಭರವಸೆ ನೀಡಿದ್ದರು. ಅದರಂತೆ 2025ರ ಸೆಪ್ಟೆಂಬರ್‌ನಿಂದ 2026ರ ಜೂನ್ ಅವಧಿಯಲ್ಲಿ ಹಂತಹಂತವಾಗಿ ಒಟ್ಟು 4,84,200 ರೂ. ಪಡೆದುಕೊಂಡಿದ್ದರು….

Read More

ಕುಂಬಳೆಯಲ್ಲಿ ಅಕ್ರಮ ಮರಳು ಸಾಗಾಟ: ಲಾರಿ ವಶಕ್ಕೆ

​ಕುಂಬಳೆ : ಕುಂಬಳೆ ಪೊಲೀಸರ ತಂಡ ಕಿದೂರು ಮಯಂರಳಂ ಭಾಗದಲ್ಲಿ ದಿಢೀರ್ ಪರಿಶೀಲನೆ ನಡೆಸಿದೆ. ಈ ವೇಳೆ ಉಳುವಾರು ಹೊಳೆಯಿಂದ ಯಾವುದೇ ಪರವಾನಗಿ ಇಲ್ಲದೆ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಲಾರಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ​ಘಟನೆಗೆ ಸಂಬಂಧಿಸಿ ಲಾರಿ ಚಾಲಕ, ನೆಕ್ರಾಜೆ ಸಾಲತ್ತಡ್ಕದ ಮುಹಮ್ಮದ್ ಸಾಬಿತ್ (22) ಎಂಬಾತನನ್ನು ಬಂಧಿಸಲಾಗಿದ್ದು, ಲಾರಿಯ ಆರ್‌ಸಿ ಮಾಲಕನ ಮೇಲೆಯೂ ಪ್ರಕರಣ ದಾಖಲಾಗಿದೆ. ಬಂಧಿತ ಚಾಲಕನನ್ನು ನ್ಯಾಯಾಲಯದ ಆದೇಶದಂತೆ ಜೈಲಿಗೆ ಕಳುಹಿಸಲಾಗಿದೆ. ​ಹೊಳೆಯಿಂದ ಅಕ್ರಮವಾಗಿ ಮರಳು ಕದ್ದು ಸಾಗಿಸಿದ್ದಕ್ಕಾಗಿ ಕೇರಳ ನದಿ…

Read More

ಮಂಗಳೂರು ಸಚಿವ ಸಂಪುಟ ಸಭೆ: ಅಭಿವೃದ್ಧಿಗೆ ಮಹತ್ವದ ಮೈಲಿಗಲ್ಲು – ಮಂಜುನಾಥ ಭಂಡಾರಿ

ಮಂಗಳೂರು:ಮಂಗಳೂರಿನಲ್ಲಿ ನಡೆಯುತ್ತಿರುವ ಸಚಿವ ಸಂಪುಟ ಸಭೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿಯ ದೃಷ್ಟಿಯಿಂದ ಮಹತ್ವದ ಮೈಲಿಗಲ್ಲಾಗಲಿದೆ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಡಾ. ಮಂಜುನಾಥ ಭಂಡಾರಿ ಹೇಳಿದರು. ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರಾವಳಿಯ ಪ್ರವಾಸೋದ್ಯಮ, ಉದ್ಯೋಗ ಸೃಷ್ಟಿ, ಮೂಲಸೌಕರ್ಯ ಸೇರಿದಂತೆ ವಿವಿಧ ಕ್ಷೇತ್ರಗಳ ಅಭಿವೃದ್ಧಿಗೆ ಹಲವು ಪ್ರಸ್ತಾವನೆಗಳನ್ನು ಸರ್ಕಾರದ ಮುಂದಿಡಲಾಗಿದೆ. ಸಚಿವ ಸಂಪುಟ ಸಭೆಯ ಹಿನ್ನೆಲೆಯಲ್ಲಿ ಕಳೆದ 15 ದಿನಗಳಿಂದ ವಿವಿಧ ಇಲಾಖೆಗಳ ಅಧಿಕಾರಿಗಳು ಜಿಲ್ಲೆಯ ಅಗತ್ಯಗಳ ಕುರಿತು ಪ್ರಸ್ತಾವನೆ…

Read More

ಬದಿಯಡ್ಕ: ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಯುವಕ ಪತ್ತೆ

​ಬದಿಯಡ್ಕ : ಇಲ್ಲಿಗೆ ಸಮೀಪದ ಪಟ್ಟಾಜೆಯಲ್ಲಿ 29 ವರ್ಷದ ರಂಜಿತ್ ಎಂಬ ಯುವಕ ಬೆಡ್‌ರೂಂನ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ​ಕುಟುಂಬಸ್ಥರು ಬೆಳಿಗ್ಗೆ ಸಂಬಂಧಿಕರ ಮನೆಗೆ ತೆರಳಿದ್ದರಿಂದ ರಂಜಿತ್ ಮನೆಯಲ್ಲಿ ಒಬ್ಬನೇ ಇದ್ದನು. ರಾತ್ರಿ 8:30ರ ಸುಮಾರಿಗೆ ಕುಟುಂಬದವರು ಮನೆಗೆ ಮರಳಿದಾಗ ಬಾಗಿಲು ಒಳಗಿನಿಂದ ಲಾಕ್ ಆಗಿತ್ತು. ಎಷ್ಟೇ ಕರೆದರೂ ಸ್ಪಂದಿಸದಿದ್ದಾಗ ಬಾಗಿಲು ಮುರಿದು ಒಳಗೆ ಹೋದಾಗ ಘಟನೆ ಬೆಳಕಿಗೆ ಬಂದಿದೆ. ತಕ್ಷಣವೇ ಅವರನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅಷ್ಟರಲ್ಲೇ ಅವರು ಕೊನೆಯುಸಿರೆಳೆದಿದ್ದರು. ​ಮೃತ…

Read More

ದೇವಾಲಯದ ಕಾಣಿಕೆ ಹುಂಡಿ ಕಳವು ಯತ್ನ: ಆರೋಪಿ ವಶಕ್ಕೆ

ಕಾಸರಗೋಡು : ಮುಳ್ಳೇರಿಯ ಸಮೀಪದ ನೆಟ್ಟಣಿಗೆ ಶ್ರೀ ಮಹಾಲಿಂಗೇಶ್ವರ ದೇವಾಲಯದ ಕಾಣಿಕೆ ಹುಂಡಿ ಕಳವು ಯತ್ನ ಹಾಗೂ ಕೃಷಿಕರೊಬ್ಬರ ರಬ್ಬರ್ ಶೀಟ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ, ಮದಕ್ಕ ನಿವಾಸಿ ಸತೀಶ್ (26) ಎಂಬಾತನನ್ನು ಆದೂರು ಪೊಲೀಸರು ಕಸ್ಟಡಿಗೆ ಪಡೆದಿದ್ದಾರೆ. ​ಇತ್ತೀಚೆಗೆ ಪುತ್ತೂರು ಗ್ರಾಮಾಂತರ ವ್ಯಾಪ್ತಿಯ ದೇವಾಲಯವೊಂದರಲ್ಲಿ ನಡೆದ ಕಳವು ಪ್ರಕರಣದಲ್ಲಿ ಸತೀಶನನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ, ಈತನ ಹಳೆಯ ಕೃತ್ಯಗಳು ಬೆಳಕಿಗೆ ಬಂದಿವೆ. ಆಗಸ್ಟ್ 24ರಂದು ನೆಟ್ಟಣಿಗೆ ಕ್ಷೇತ್ರದ ಎರಡು ಕಾಣಿಕೆ ಹುಂಡಿಗಳನ್ನು ಕದ್ದು, ಅವುಗಳನ್ನು ಒಡೆಯಲು ಸಾಧ್ಯವಾಗದೆ…

Read More

ಮುಂಡಳ್ಳಿ ಸಾರ್ವಜನಿಕ ಗಣೇಶೋತ್ಸವದಲ್ಲಿ ಭಕ್ತಿಲಹರಿ ಹರಿಸಿದ ನಿನಾದದ ಭಕ್ತಿ ಸಂಗೀತ

ಭಟ್ಕಳ: ಶ್ರೀ ಸಾರ್ವಜನಿಕ ಗಣೇಶೋತ್ಸವ ಸಮಿತಿ, ಮುಂಡಳ್ಳಿ ವತಿಯಿಂದ ಆಯೋಜಿಸಲಾಗಿದ್ದ 42ನೇ ವರ್ಷದ ಶ್ರೀ ಸಾರ್ವಜನಿಕ ಗಣೇಶೋತ್ಸವದ ಅಂಗವಾಗಿ ಬುಧವಾರ ರಾತ್ರಿ ನಿನಾದ ಕಲ್ಚರಲ್ ಅಕಾಡೆಮಿ, ಭಟ್ಕಳ ವತಿಯಿಂದ ಭಕ್ತಿಭಾವದ ವಿಶೇಷ ಭಕ್ತಿ ಸಂಗೀತ ಕಾರ್ಯಕ್ರಮ ನಡೆಯಿತು. ರಾಜ್ಯ ಪ್ರಶಸ್ತಿ ಪುರಸ್ಕೃತ ಗಾಯಕ ಉಮೇಶ ಮುಂಡಳ್ಳಿ ಅವರ ಸಾರಥ್ಯದಲ್ಲಿ ನಡೆದ ಸಂಗೀತ ಸೇವೆಯಲ್ಲಿ ನಿನಾದ ಉಮೇಶ, ಉತ್ಥಾನ ಉಮೇಶ ಹಾಗೂ ಸುದರ್ಶನ ಶಿರೂರು ಗಾಯನದಲ್ಲಿ ಸಾಥ್ ನೀಡಿದರು. ಹಿರಿಯ ಕಲಾವಿದ ಉಮೇಶ ಶಿರೂರು ಅವರು ಹಾರ್ಮೋನಿಯಂ ವಾದನದೊಂದಿಗೆ…

Read More

ಬಡವರಿಗೆ ಉಚಿತ ಚಿಕಿತ್ಸೆ, ಸಿಬ್ಬಂದಿ ಕೊರತೆ ನೀಗಿಸಲು ಕ್ರಮ: ಖಾದರ್

ಮಂಗಳೂರು: ಕರಾವಳಿ ಹಾಗೂ ತುಳುನಾಡಿನ ಆತಿಥ್ಯ, ಸೌಹಾರ್ದತೆ ಮತ್ತು ಪ್ರೀತಿ-ವಿಶ್ವಾಸದ ಸಂಸ್ಕೃತಿ ದೇಶ-ವಿದೇಶಗಳಲ್ಲಿಯೂ ವಿಶೇಷವಾಗಿ ಗುರುತಿಸಿಕೊಂಡಿದೆ. ಇಂತಹ ಸಂದರ್ಭದಲ್ಲಿ ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ನಡೆಯುತ್ತಿರುವುದಕ್ಕೆ ಎಲ್ಲರೂ ಸಹಕಾರ ನೀಡುವ ಬದಲು ವಿವಿಧ ವಿಚಾರಗಳನ್ನು ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸುವುದು ಸೂಕ್ತವಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಖಾತೆ ಸಚಿವ ಯು.ಟಿ. ಖಾದರ್ ಹೇಳಿದರು. ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೈಲಿನಲ್ಲಿ ಜಾಮರ್ ಅಳವಡಿಸಿರುವ ವಿಚಾರ ಹೊಸದಲ್ಲ. ಜಾಮರ್ ಅಳವಡಿಸಿದ…

Read More
error: Content is protected !!