ರಿಷಬ್ ಶೆಟ್ಟಿ ತೊಡೆಯ ಮೇಲೆ ದೈವ ಮಲಗಿದ ಸಂಗತಿ ಬಗ್ಗೆ ದೈವಾರಾಧಕ ತಮ್ಮಣ್ಣ ಶೆಟ್ಟಿ ಏನಂದ್ರು

ಮಂಗಳೂರು :ರಿಷಬ್ ಶೆಟ್ಟಿ ತೊಡೆಯ ಮೇಲೆ ದೈವ ಮಲಗಿದ ಸಂಗತಿ ತೀವ್ರ ವಿವಾದಕ್ಕೆ ಈಡಾಗಿದೆ. ಹರಕೆ ನೇಮದ ನೆಪದಲ್ಲಿ ದೈವ ನರ್ತಕರು ಅತಿರೇಕದ ವರ್ತನೆ ತೋರಿದ್ದಾರೆ ಎಂದು ಜಾಲತಾಣದಲ್ಲಿ ಭಾರೀ ಟೀಕೆ ವ್ಯಕ್ತವಾಗುತ್ತಿದೆ. ಈ ನಡುವೆ ಹರಕೆ ನೇಮ ಎಂಬುದೇ ಇಲ್ಲ ಎಂದು ತಮ್ಮಣ್ಣ ಶೆಟ್ಟಿ ಹೇಳುತ್ತಿರುವುದು ವಿವಾದವನ್ನು ಹೊಸ ಮಗ್ಗುಲಿಗೆ ಕೊಂಡೊಯ್ದಿದೆ. ಜನ ..ಗೊತ್ತಿಲ್ಲ ಶಿವನೇ .. ಎನ್ನುವಂತಾಗಿದೆ. ಕಾಂತಾರ ಚಿತ್ರದ ಮೂಲಕ ದೈವಾರಾಧನೆಯನ್ನು ಮಾರ್ಕೆಟ್ ಮಾಡುತ್ತಿದ್ದಾರೆಂದು ನಟ, ನಿರ್ದೇಶಕ ರಿಷಬ್ ಶೆಟ್ಟಿ ಬಗ್ಗೆ ತೀವ್ರ…

Read More

ಬ್ರಹ್ಮಾವರ: ಮರಕ್ಕೆ ಡಿಕ್ಕಿ‌ ಹೊಡೆದ ಟಿಪ್ಪರ್: ಚಾಲಕ ಸ್ಥಳದಲ್ಲೇ ಮೃತ್ಯು… !

ಉಡುಪಿ:ಚಾಲಕನ ನಿಯಂತ್ರಣ ತಪ್ಪಿದ ಟಿಪ್ಪರೊಂದು ರಸ್ತೆ ಬದಿಯ ಮರಕ್ಕೆ ಢಿಕ್ಕಿ ಹೊಡೆದ ಪರಿಣಾಮ ಚಾಲಕ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಚೇರ್ಕಾಡಿ ಗ್ರಾಮದ ಪೇತ್ರಿ-ಮಡಿ ರಸ್ತೆಯಲ್ಲಿ ಬುಧವಾರ ಬೆಳಿಗ್ಗೆ ಸಂಭವಿಸಿದೆ. ಮೃತರನ್ನು ಟಿಪ್ಪರ್ ಚಾಲಕ ಶ್ರೀಕಾಂತ್(26) ಎಂದು ಗುರುತಿಸಲಾಗಿದೆ. ನಿಟ್ಟೂರಿನ ರಂಜನ್ ಶೆಟ್ಟಿ ಎಂಬವರ ಮಾಲಕತ್ವದ ಟಿಪ್ಪರ್‌ನ್ನು ಚಾಲಕ ಶ್ರೀಕಾಂತ್, ನಿಟ್ಟೂರಿನಿಂದ ಜೆಲ್ಲಿ ಲೋಡ್‌ಗಾಗಿ ಚಲಾಯಿಸಿಕೊಂಡು ಹೋಗಿದ್ದರು. ಚೇರ್ಕಾಡಿ ಗ್ರಾಮದ ಪೇತ್ರಿ-ಮಡಿ ರಸ್ತೆಯಲ್ಲಿ ಹೋಗುತ್ತಿದ್ದ ಟಿಪ್ಪರ್, ರಸ್ತೆಯ ತಿರುವಿನಲ್ಲಿರುವ ರಸ್ತೆ ಹೊಂಡಕ್ಕೆ ಬಿದ್ದಿದ್ದು, ಇದರಿಂದ ನಿಯಂತ್ರಣ ತಪ್ಪಿದ ಟಿಪ್ಪರ್,…

Read More

ಡಿ.14ರಂದು ತುಳು ಅಕಾಡೆಮಿ ವತಿಯಿಂದ ‘ಮಣೇಲ್ ದ ಪೆರ್ಮೆ ರಾಣಿ ಅಬ್ಬಕ್ಕ’ ವಿಚಾರಗೋಷ್ಠಿ… !

ಮಂಗಳೂರು:ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ಮಂಗಳೂರು ತಾಲೂಕಿನ ಗಂಜಿಮಠ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಳಲಿಯ ದ.ಕ.ಜಿ.ಪಂ.ಹಿ.ಪ್ರಾ.ಶಾಲೆಯಲ್ಲಿ ರಾಣಿ ಅಬ್ಬಕ್ಕನ ಕುರಿತಾಗಿ ‘ಮಣೇಲ್ ದ ಪರ್ಮೆ ರಾಣಿ ಅಬ್ಬಕ್ಕ’ ಎಂಬ ವಿಚಾರ ಕೂಟವನ್ನು ಸ್ಥಳೀಯ ರಾಣಿ ಅಬ್ಬಕ್ಕ ಚಾವಡಿಯ ಸಹಭಾಗಿತ್ವದಲ್ಲಿ ಡಿ.14ರಂದು ಬೆಳಿಗ್ಗೆ 10.00 ಗಂಟೆಗೆ ಆಯೋಜಿಸಲಾಗಿದೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ತಾರಾನಾಥ್ ಗಟ್ಟಿ ಕಾಪಿಕಾಡ್ ತಿಳಿಸಿದರು . ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ರಾಣಿ ಅಬ್ಬಕ್ಕನ ಅರಮನೆ…

Read More

ದ. ಕ ಜಿಲ್ಲಾ ಪಂಚಾಯತ್ ಸರಕಾರಿ ಪ್ರೌಢ ಶಾಲೆ ಅತ್ತಾವರ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅತ್ತಾವರ ಮಂಗಳೂರು ದಕ್ಷಿಣ ವಲಯದ ವಾರ್ಷಿಕ ಕ್ರೀಡಾಕೂಟ

ದ. ಕ ಜಿಲ್ಲಾ ಪಂಚಾಯತ್ ಸರಕಾರಿ ಪ್ರೌಢ ಶಾಲೆ ಅತ್ತಾವರ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅತ್ತಾವರ ಮಂಗಳೂರು ದಕ್ಷಿಣ ವಲಯದ ವಾರ್ಷಿಕ ಕ್ರೀಡಾಕೂಟ ಶಾಲಾ ಮೈದಾನದಲ್ಲಿ ನಡೆಯಿತು.ಉದ್ಯಮಿ ಸತೀಶ್ ಕುಮಾರ್ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು, ಬಳಿಕ ಮಾತನಾಡಿದ ಅವರು ಸರಕಾರಿ ಶಾಲೆಗಳಲ್ಲಿ ಧನಾತ್ಮಕ ಶಕ್ತಿ ಇದೆ ಆದ್ದರಿಂದ ಎಲ್ಲರೂ ಭಾಗವಹಿಸಿ ಸಹಕಾರ ನೀಡುತ್ತಾರೆ ಎಂದರು.ಶಿಕ್ಷಣ ಶಿಕ್ಷಕ ಮಹಾವಿದ್ಯಾಲಯದ ಪ್ರಾಂಶುಪಾಲ ಪುಷ್ಪಲತಾ ಮಾತನಾಡಿ ಪಾಠದ ಜೊತೆಗೆ ಕ್ರೀಡೆಯ ಮೂಲಕ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಬೇಕು ಆವಾಗ ಮಕ್ಕಳು…

Read More

ಡಿ. 14 ರಂದು ಕುದ್ಮುಲ್ ರಂಗರಾವ್ ಟೌನ್ ಹಾಲ್‌ನಲ್ಲಿ ಲತಾಕಿ ಆವಾಜ್ ಶೋಭಾ ಕೆ ಸಾಥ್ ಸಂಗೀತೋತ್ಸವ … !

ಮಂಗಳೂರು: ಖ್ಯಾತಗಾಯಕಿ ಲತಾ ಮಂಗೇಶ್ವರ್ ಅವರ ಹಿಂದಿ ಹಾಡುಗಳನ್ನೊಳಗೊಂಡ ಒಟ್ಟು 24 Solo ಮತ್ತು Duet ಹಾಡುಗಳನ್ನು ಆಯ್ಕೆ ಮಾಡಿ ಲತಾಕಿ ಆವಾಜ್ ಶೋಭಾ ಕೆ ಸಾಥ್ ಎಂಬ ಕಾರ್ಯಕ್ರಮವನ್ನು ಡಿ 14 ರಂದು ನಗರದ ಕುದ್ಮುಲ್ ರಂಗರಾವ್ ಟೌನ್ ಹಾಲ್‌ನಲ್ಲಿ ಆಯೋಜಿಸಲಾಗಿದೆ ಎಂದು ಕಾರ್ಯಕ್ರಮದ ಆಯೋಜಕರಾದ ಶೋಭಾ ಭಾಸ್ಕರನ್ ತಿಳಿಸಿದರು .ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ಈ ಕಾರ್ಯಕ್ರಮದ ವಿಶೇಷವೇನೆಂದರೆ, ನಾನು ನಡೆಸುತ್ತಿರುವ ಸಿಂಚನಮೆಲೊಡಿಸ್ ತಂಡದ ಗಾಯಕರನ್ನೇ ಗಾಯನ ಸ್ಪರ್ಧೆಯಲ್ಲಿ ಧ್ವನಿಯಾಗಲಿದ್ದಾರೆ…

Read More

ಮಂಗಳೂರು ಬೋಳಾರ ಶ್ರೀ ಮಂಗಳಾದೇವಿ ದೇವಸ್ಥಾನ ಶ್ರೀ ಮೂಕಾಂಬಿಕಾ ಯಕ್ಷಗಾನ ತರಬೇತಿ ಕೇಂದ್ರ ಇದರ 12ನೇ ವಾರ್ಷಿಕೋತ್ಸವ

ಮಂಗಳೂರು ಬೋಳಾರ ಶ್ರೀ ಮಂಗಳಾದೇವಿ ದೇವಸ್ಥಾನ ಶ್ರೀ ಮೂಕಾಂಬಿಕಾ ಯಕ್ಷಗಾನ ತರಬೇತಿ ಕೇಂದ್ರ ಇದರ 12ನೇ ವಾರ್ಷಿಕೋತ್ಸವ ನಿರ್ದೇಶಕ ಜಯಕರ ಪಂಡಿತ್ ಬಜಾಲ್ ನಿರ್ದೇಶನದಲ್ಲಿ, ಸಭೆ ಸನ್ಮಾನ ಕಾರ್ಯಕ್ರಮ, ದಕ್ಷ ಯಜ್ಞ, ಗಿರಿಜಾ ಕಲ್ಯಾಣ, ಕಾರ್ತಿಕೇಯ ಕಲ್ಯಾಣ, ಯಕ್ಷಗಾನ ಪ್ರದರ್ಶನದೊಂದಿಗೆ ಶ್ರೀಮಂಗಳದೇವಿ ದೇವಸ್ಥಾನದ ವಠಾರದಲ್ಲಿ ನಡೆಯಿತು.ವೀರನಗರ ಪೆರ್ಲ ಶ್ರೀ ದುರ್ಗಾಪರಮೇಶ್ವರಿ ಸುಬ್ರಮಣ್ಯ ದೇವಸ್ಥಾನದ ಅಧ್ಯಕ್ಷ, ಉದ್ಯಮಿ, ಕೇಶವ ಪೂಜಾರಿ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಯಕ್ಷಗಾನ ಕಲಾವಿದ, ಉದ್ಯಮಿ, ಬೋಳಾರ ಸುರಭಿ ಏಜೆನ್ಸಿ ಮಾಲಕ ಶಿವಪ್ರಸಾದ್ ಪ್ರಭು,…

Read More

ಸ್ಥಳೀಯಾಡಳಿತ ಚುನಾವಣೆಯ ಎರಡನೇ ಹಂತದ ಮತದಾನ ಕಾಸರಗೋಡು ಸಹಿತ ಅತ್ಯುತ್ತರ ಕೇರಳದ ಏಳು ಜಿಲ್ಲೆಗಳಲ್ಲಿ ಇಂದು ಬೆಳಿಗ್ಗೆ ಆರಂಭ

ಮಂಜೇಶ್ವರ : ಸ್ಥಳೀಯಾಡಳಿತ ಚುನಾವಣೆಯ ಎರಡನೇ ಹಂತದ ಮತದಾನ ಕಾಸರಗೋಡು ಸಹಿತ ಅತ್ಯುತ್ತರ ಕೇರಳದ ಏಳು ಜಿಲ್ಲೆಗಳಲ್ಲಿ ಇಂದು ಬೆಳಿಗ್ಗೆ ಆರಂಭಗೊಂಡಿದೆ. ಮೊದಲ, ಎರಡೂವರೆ ತಾಸಿನಲ್ಲಿ ಶೇ. 17 ಮತದಾನವಾಗಿದ್ದು, ಅಹಿತಕರ ಘಟನೆ ವರದಿಯಾಗಿಲ್ಲ.ಕೇರಳದ ಅತ್ಯುತ್ತರ ಕೇರಳದಿಂದ ಆರಂಭವಾಗುವ ಮೊದಲ ವಾರ್ಡ್ ಕಣ್ಣತೀರ್ಥ ಮರಿಯಾಶ್ರಮ ಶಾಲೆಯಲ್ಲಿ ಬೆಳಿಗ್ಗಿನಿಂದಲೇ ಉತ್ತಮ ರೀತಿಯಲ್ಲಿ ಮತದಾನ ಆರಂಭಗೊಂಡಿದ್ದು ಮಂಜೇಶ್ವರ ಗ್ರಾಮ ಪಂಚಾಯತಿನ ಕುಂಜತ್ತೂರು, ಉದ್ಯಾವರ, ಮಂಜೇಶ್ವರ ಸೇರಿದಂತೆ ಎಲ್ಲಾ 24 ವಾರ್ಡ್ ಗಳಲ್ಲೂ ಯಾವುದೇ ಅಹಿತಕರ ಘಟನೆಗಳು ನಡೆದ ಬಗ್ಗೆ ವರದಿಯಾಗಿಲ್ಲ.ಕೆಲವೆಡೆ…

Read More

ರಾಮಗುಡ್ಡೆಯ ವಿಷ್ಣು ಚಾಮುಂಡೇಶ್ವರಿ ದೇವಾಲಯದಲ್ಲಿ ಒತ್ತೆಕೋಲ ಸೇವೆ

ಕಾಸರಗೋಡು: ದೈವಾರಾಧನೆಯು ತುಳುನಾಡು, ಉತ್ತರ ಮಲಬಾರ್ ಭಾಗದಲ್ಲಿ ಕಂಡು ಬರುವ ಅಪರೂಪದ ಅಚರಣೆಯಾಗಿದೆ . ದೈವರಾಧನೆಗಳು ವಿಶೇಷ ಸ್ಥಾನವನ್ನು ಅಲಂಕರಿಸಿದೆ . ಎಲ್ಲಾ ದೈವಾರಾಧನೆಗಿಂತಲೂ ವಿಶಿಷ್ಟವಾಗಿ ಕಂಡು ಬರುವ ದೈವಾರಾಧನೆಯೆಂದರೆ ಅದು ವಿಷ್ಣು ಮೂರ್ತಿಯ ಒತ್ತೆಕೋಲ ಸೇವೆ. ಉತ್ತರ ಕೇರಳ ಮತ್ತು ತುಳುನಾಡಿನ ಭಾಗದಲ್ಲಿ ಭೂತಾರಾಧನೆಗಳು ಹೆಚ್ಚೇ ನಡೆಯುತ್ತದೆ . ಆದ್ರೆ ಒತ್ತೆಕೋಲ ಸೇವೆಯು ಎಲ್ಲೆಡೆ ಕಂಡು ಬರುವುದು ತುಂಬಾನೇ ವಿರಳ.ತುಳುನಾಡಿನ ಕೆಲವೇ ಕಡೆಗಳಲ್ಲಿ ಈ ಆಚರಣೆಯನ್ನು ನಡೆಸುವ ಕ್ರಮವಿದೆ. ಕೇರಳ ಗಡಿ ಹಂಚಿಕೊಂಡಿರುವ ಪುತ್ತೂರು ,…

Read More

ಉಪ್ಪಳಿಗೆಯಲ್ಲಿ ಕೋಮು ದ್ವೇಷ ಭಾಷಣ ಪ್ರಕರಣ; ಕಲ್ಲಡ್ಕ ಭಟ್ ಗೆ ಜಾಮೀನು

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಳಿಗೆಯಲ್ಲಿ ಅಕ್ಟೋಬರ್ 20ರಂದು ನಡೆದಿದ್ದ ದೀಪೋತ್ಸವ ಕಾರ್ಯಕ್ರಮದಲ್ಲಿ ಕೋಮು ದ್ವೇಷದ ಮತ್ತು ಅಪಮಾನಕಾರಿಯಾಗಿ ಭಾಷಣ ಮಾಡಿರುವ ಆರೋಪದಡಿಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಹಿಂದೂ‌ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಅವರಿಗೆ ಜಾಮೀನು ಮಂಜೂರಾಗಿದೆ. 5ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ಪುತ್ತೂರು ಜಾಮೀನು ಮಂಜೂರು ಮಾಡಿದೆ. ಪ್ರಭಾಕರ್ ಭಟ್ ಪರವಾಗಿ ಹಿರಿಯ ವಕೀಲ ಮಹೇಶ್ ಕಜೆ ವಾದ ಮಂಡಿಸಿದರು. ಪುತ್ತೂರು ತಾಲೂಕಿನ ಉಪ್ಪಳಿಗೆ ಎಂಬಲ್ಲಿ ಅ.22ರಂದು ನಡೆದ ದೀಪೋತ್ಸವ ಮತ್ತು ಗೋಪೂಜೆಯಲ್ಲಿ…

Read More

ಮಂಗಳೂರು ಏರ್‌ಪೋರ್ಟ್‌ಗೆ ತುರ್ತಾಗಿ “ಪಾಯಿಂಟ್ ಆಫ್ ಕಾಲ್ʼ ಸ್ಥಾನಮಾನ ನೀಡಲು ನಿಯಮ 377ರಡಿಯಲ್ಲಿ ಸಂಸದ ಚೌಟ ಲೋಕಸಭೆಯಲ್ಲಿ ಒತ್ತಾಯ

ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತುರ್ತಾಗಿ “ಪಾಯಿಂಟ್ ಆಫ್ ಕಾಲ್ (PoC)” ಸ್ಥಾನ-ಮಾನ ನೀಡುವ ಅಗತ್ಯತೆಯನ್ನು ದಕ್ಷಿಣ ಕನ್ನಡ ಸಂಸದ ಬ್ರಿಜೇಶ್ ಚೌಟ ಅವರು ಇಂದು ಸಂಸತ್ತಿನಲ್ಲಿ ಪ್ರಸ್ತಾಪಿಸಿದ್ದಾರೆ. ಲೋಕಸಭೆಯಲ್ಲಿ ನಿಯಮ 377ರಡಿಯಲ್ಲಿ ಈ ವಿಷಯದ ಬಗ್ಗೆ ಧ್ವನಿಯೆತ್ತಿರುವ ಸಂಸದ ಕ್ಯಾ. ಚೌಟ ಅವರು, ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಕರಾವಳಿ ಕರ್ನಾಟಕ ಮತ್ತು ನೆರೆಯ ಕೇರಳಕ್ಕೆ ಪ್ರಮುಖ ವಾಯುಯಾನ ಹೆಬ್ಬಾಗಿಲಾಗಿದೆ. ಈ ಏರ್‌ಪೋರ್ಟ್‌ 2024-25ರ ಅವಧಿಯಲ್ಲಿ 7.15 ಲಕ್ಷ ಅಂತಾರಾಷ್ಟ್ರೀಯ ಪ್ರಯಾಣಿಕರು ಸೇರಿದಂತೆ ಒಟ್ಟು…

Read More
error: Content is protected !!