8 ವರ್ಷಗಳಲ್ಲಿ ₹2 ಕೋಟಿಗೂ ಅಧಿಕ ಸಮಾಜಸೇವೆ: ರೋಟರಿ ಹಿಲ್ಸ್‌ನಿಂದ ಮಾದರಿ ಕಾರ್ಯ

2025ರಲ್ಲಿ ₹30 ಲಕ್ಷ ವೆಚ್ಚದ ಸಮಾಜಮುಖಿ ಯೋಜನೆಗಳು; ಜುಲೈ 5ರಂದು ನೂತನ ಪದಾಧಿಕಾರಿಗಳ ಪದಗ್ರಹಣ ಬಂಟ್ವಾಳ, ಜು.3: ಸಮಾಜಮುಖಿ ಸೇವಾ ಚಟುವಟಿಕೆಗಳ ಮೂಲಕ ಗುರುತಿಸಿಕೊಂಡಿರುವ ರೋಟರಿ ಹಿಲ್ಸ್ ಕ್ಲಬ್ ಕಳೆದ ಎಂಟು ವರ್ಷಗಳಲ್ಲಿ ₹2 ಕೋಟಿಗೂ ಅಧಿಕ ಮೊತ್ತದ ವಿವಿಧ ಸೇವಾ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದು, 2025ನೇ ಸಾಲಿನಲ್ಲೇ ಸುಮಾರು ₹30 ಲಕ್ಷ ವೆಚ್ಚದ ಸಮಾಜೋಪಯೋಗಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿದೆ ಎಂದು ಕ್ಲಬ್ ಅಧ್ಯಕ್ಷ ರೊ. ವಿಜಯ ಪೆರ್ನಾಂಡಿಸ್ ತಿಳಿಸಿದ್ದಾರೆ. ಬಿಸಿರೋಡಿನ ಪ್ರೆಸ್ ಕ್ಲಬ್‌ನಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ…

Read More

ನಾಗರಹಾವಿನ ಕಡಿತಕ್ಕೆ ಆಟೋ ಚಾಲಕ ಬಲಿ

ಹುಲ್ಲು ಕತ್ತರಿಸುವ ಯಂತ್ರ ಎತ್ತುವ ವೇಳೆ ದುರ್ಘಟನೆ; ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಾವು ಬಂಟ್ವಾಳ, ಜು.3: ನಾಗರಹಾವಿನ ಕಡಿತಕ್ಕೊಳಗಾದ ಆಟೋ ಚಾಲಕರೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಬಂಟ್ವಾಳ ತಾಲೂಕಿನ ಕೊಳ್ನಾಡು ಗ್ರಾಮದ ಸೆರ್ಕಳ ಕುದ್ಕಾರ್‌ನಲ್ಲಿ ಬುಧವಾರ ಬೆಳಿಗ್ಗೆ ನಡೆದಿದೆ. ಮೃತರನ್ನು ಸೆರ್ಕಳ ಕುದ್ಕಾರ್ ನಿವಾಸಿ ಸುಲೈಮಾನ್ ಅವರ ಪುತ್ರ ಹಾಗೂ ಆಟೋ ಚಾಲಕರಾದ ಹಸೈನಾ‌ರ್ (50) ಎಂದು ಗುರುತಿಸಲಾಗಿದೆ. ಬುಧವಾರ ಬೆಳಿಗ್ಗೆ ಮನೆಯ ಸಮೀಪದಲ್ಲಿ ಇರಿಸಿದ್ದ ಹುಲ್ಲು ಕತ್ತರಿಸುವ ಯಂತ್ರವನ್ನು ಎತ್ತಲು ಮುಂದಾದ ವೇಳೆ ಅದರ…

Read More

ಅಂಬೇಡ್ಕರ್ ಭವನಕ್ಕೆ ಸಮಾಜ ಕಲ್ಯಾಣ ಇಲಾಖೆ ಸ್ಥಳಾಂತರ: ನಾಮಫಲಕ ಇಲ್ಲ, ಮುಂಭಾಗದ ಬಾಗಿಲಿಗೆ ಬೀಗ; ಫಲಾನುಭವಿಗಳ ಪರದಾಟ

ಬಂಟ್ವಾಳ, ಜು.3: ದಲಿತ ಸಮುದಾಯದ ಬಹುಕಾಲದ ಬೇಡಿಕೆಗೆ ಸ್ಪಂದಿಸಿದ ಆಡಳಿತ, ಸಮಾಜ ಕಲ್ಯಾಣ ಇಲಾಖೆಯ ಕಚೇರಿಯನ್ನು ಅಂಬೇಡ್ಕರ್ ಭವನದ ಮೇಲಂತಸ್ತಿಗೆ ಸ್ಥಳಾಂತರಿಸಿದೆ. ಹಲವು ವರ್ಷಗಳಿಂದ ಖಾಸಗಿ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇಲಾಖೆಗೆ ಸರ್ಕಾರಿ ಕಟ್ಟಡದಲ್ಲಿ ಸ್ಥಳಾವಕಾಶ ದೊರೆತಿರುವುದನ್ನು ಸಾರ್ವಜನಿಕರು ಸ್ವಾಗತಿಸಿದ್ದಾರೆ. ಈ ಹಿಂದೆ ಸಮಾಜ ಕಲ್ಯಾಣ ಇಲಾಖೆಯ ಕಚೇರಿ ಹಳೆಯ ತಾಲೂಕು ಪಂಚಾಯತ್ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಕಟ್ಟಡವನ್ನು ಕೆಡವಿದ ಬಳಿಕ ಇಲಾಖೆಯನ್ನು ಖಾಸಗಿ ಬಾಡಿಗೆ ಕಟ್ಟಡಕ್ಕೆ ಸ್ಥಳಾಂತರಿಸಲಾಗಿತ್ತು. ಇಲಾಖೆಯನ್ನು ಅಂಬೇಡ್ಕರ್ ಭವನಕ್ಕೆ ಸ್ಥಳಾಂತರಿಸಬೇಕೆಂಬ ಬೇಡಿಕೆ ಹಲವು ಬಾರಿ…

Read More

ಬಂಟ್ವಾಳ ಎ.ಆರ್.ಟಿ.ಒ. ಕಚೇರಿಯನ್ನು ಸರ್ಕಾರಿ ಕಟ್ಟಡಕ್ಕೆ ಸ್ಥಳಾಂತರಿಸಲು ಜಿಲ್ಲಾಧಿಕಾರಿಗೆ ಮನವಿ

ಬಂಟ್ವಾಳ, ಜು.3: ಮೆಲ್ಕಾರ್‌ನ ಬಿರ್ವ ಕಾಂಪ್ಲೆಕ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಎ.ಆರ್.ಟಿ.ಒ. (ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ) ಕಚೇರಿಯನ್ನು ಖಾಸಗಿ ಕಟ್ಟಡದಿಂದ ಸ್ಥಳಾಂತರಿಸಿ ಸರ್ಕಾರಿ ಕಟ್ಟಡಕ್ಕೆ ವರ್ಗಾಯಿಸುವಂತೆ ಸಾಮಾಜಿಕ ಕಾರ್ಯಕರ್ತ ಖಾಲಿದ್ ನಂದಾವರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ. ಮನವಿಯಲ್ಲಿ, ಎ.ಆರ್.ಟಿ.ಒ. ಕಚೇರಿಗೆ ಸರ್ಕಾರದ ಬೊಕ್ಕಸದಿಂದ ಪ್ರತಿ ತಿಂಗಳು ಸುಮಾರು ₹4 ಲಕ್ಷ ಬಾಡಿಗೆ ಹಾಗೂ ತರಬೇತಿ ಮೈದಾನಕ್ಕಾಗಿ ಹೆಚ್ಚುವರಿಯಾಗಿ ₹25 ಸಾವಿರ ಪಾವತಿಸಲಾಗುತ್ತಿದೆ ಎಂದು ಆರೋಪಿಸಲಾಗಿದೆ. ರಾಜಕೀಯ ಪ್ರಭಾವದಿಂದ ಈ ವ್ಯವಸ್ಥೆ ಮುಂದುವರಿಯುತ್ತಿದ್ದು, ಸಾರ್ವಜನಿಕರಿಂದ ತೆರಿಗೆ ಮತ್ತು ವಿವಿಧ ಶುಲ್ಕಗಳ…

Read More

ಉಪ್ಪಳದಲ್ಲಿ 132ನೇ ಉಚಿತ ಫುಟ್ ಫಾಲ್ಸ್ ಥೆರಪಿ ಶಿಬಿರ: ಜುಲೈ 16ರವರೆಗೆ ಸಾರ್ವಜನಿಕರಿಗೆ ಅವಕಾಶ

ಉಪ್ಪಳ, ಜು.3: ಶ್ರೀ ಅಯ್ಯಪ್ಪ ಸೇವಾ ಸಮಿತಿ, ಅಯ್ಯಪ್ಪ ಮಂದಿರ ಉಪ್ಪಳ ಹಾಗೂ ಕಂಪಾನಿಯೋ ನೆಮ್ಮದಿ ವೆಲ್‌ನೆಸ್ ಸೆಂಟರ್, ಪುತ್ತೂರು ಇವರ ಜಂಟಿ ಆಶ್ರಯದಲ್ಲಿ 132ನೇ ಉಚಿತ ಫುಟ್ ಫಾಲ್ಸ್ ಥೆರಪಿ ಶಿಬಿರವನ್ನು ಜುಲೈ 2ರಿಂದ 16ರವರೆಗೆ ಉಪ್ಪಳದ ಅಯ್ಯಪ್ಪ ಮಂದಿರದ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಪ್ರತಿದಿನ ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ನಡೆಯುವ ಈ ಶಿಬಿರದಲ್ಲಿ ಸಾರ್ವಜನಿಕರು ಉಚಿತವಾಗಿ ಭಾಗವಹಿಸಿ ಥೆರಪಿಯ ಪ್ರಯೋಜನ ಪಡೆಯಬಹುದಾಗಿದೆ. ಶಿಬಿರವನ್ನು ಶ್ರೀ ಅಯ್ಯಪ್ಪ ಸೇವಾ ಸಮಿತಿ ಅಯ್ಯಪ್ಪ ಮಂದಿರ…

Read More

ಹಾಡು ಹಗಲೇ ಬೈಕ್‌ನಲ್ಲಿ ಬಂದು ಮಹಿಳೆಯನ್ನು ಕೆಡವಿ ಮೂರು ಪವನ್ ಚಿನ್ನದ ಸರ ದೋಚಿದ ದುಷ್ಕರ್ಮಿಗಳು

​ಕಾಸರಗೋಡು: ಮಧ್ಯಾಹ್ನದ ವೇಳೆ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳ ತಂಡವೊಂದು ಮಹಿಳೆಯನ್ನು ತಳ್ಳಿ, ಅವರ ಕುತ್ತಿಗೆಯಲ್ಲಿದ್ದ ಮೂರು ಪವನ್ ತೂಕದ ಚಿನ್ನದ ತಾಲಿಸರವನ್ನು ಕಸಿದುಕೊಂಡು ಪರಾರಿಯಾಗಿರುವ ಘಟನೆ ಕಾಸರಗೋಡಿನ ಮಾವುಂಗಾಲ್‌ನಲ್ಲಿ ನಡೆದಿದೆ. ​ನೆಲ್ಲಿತ್ತರ ಫುಡ್ ಪ್ರೊಡಕ್ಟ್ಸ್ ಸಂಸ್ಥೆಯ ಉದ್ಯೋಗಿ, ಪುಲಯನಡುಕದ ರವಿ ಅವರ ಪತ್ನಿ ಕೆ.ಸಿಂಧು (42) ಸರ ಕಳೆದುಕೊಂಡ ಮಹಿಳೆ. ಸಿಂಧು ಕೆಲಸ ಮುಗಿಸಿ ಮನೆಗೆ ವಾಪಸ್ಸಾದ ನಂತರ, ಸ್ಕೂಟರ್‌ನಲ್ಲಿ ಅಂಗಡಿಗೆ ಸಾಮಗ್ರಿ ತರಲು ತೆರಳಿದ್ದರು. ಮರಳಿ ಮನೆಗೆ ಹಿಂತಿರುಗುತ್ತಿದ್ದಾಗ, ಬಿಳಿ ಬಣ್ಣದ ಹಳೆಯ ಮಾದರಿಯ ಸ್ಕೂಟರ್‌ನಲ್ಲಿ…

Read More

ಹಾಚಿ ಇಟ್ಟಿಗಿಗೆ ‘ನಾಡೋಜ ಡಾ. ಕಯ್ಯಾರ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ-2026’

ಹೂವಿನಹಡಗಲಿ: ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಜನಪ್ರಿಯ ಆಧುನಿಕ ವಚನಕಾರ ಹಾಗೂ ಸುಪ್ರಸಿದ್ಧ ಸಾಹಿತಿ ಹಾಚಿ ಇಟ್ಟಿಗಿ ಅವರಿಗೆ ‘ನಾಡೋಜ ಡಾ. ಕಯ್ಯಾರ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ-2026’ ಘೋಷಿಸಲಾಗಿದೆ. ಜುಲೈ 26ರಂದು ಕನ್ನಡ ಭವನದಲ್ಲಿ ನಡೆಯಲಿರುವ ರಜತ ಸಂಭ್ರಮ ಸಮಾರೋಪ ಕಾರ್ಯಕ್ರಮ ಹಾಗೂ ಕರ್ನಾಟಕ ಗಡಿನಾಡು ಕನ್ನಡ ಸಮ್ಮೇಳನದ ಅಂಗವಾಗಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು ಎಂದು ಸಮ್ಮೇಳನ ಸಮಿತಿ ಅಧ್ಯಕ್ಷ ಡಾ. ಕೆ. ಎನ್. ವೆಂಕಟ್ರಮಣ ಹೊಳ್ಳ ಹಾಗೂ ಕನ್ನಡ ಭವನದ ಸ್ಥಾಪಕ ಅಧ್ಯಕ್ಷ ಡಾ….

Read More

ಮಣಿಪಾಲ: ಮಾಹೆ (MAHE) ವಿಶ್ವವಿದ್ಯಾಲಯದ ತಂತ್ರಜ್ಞಾನ ಮತ್ತು ವಿಜ್ಞಾನ ವಿಭಾಗದ ಸಹ ಕುಲಪತಿಯಾಗಿ ಡಾ. ಕರುಣಾಕರ್ ಎ. ಕೋಟೆಗಾರ್ ಅವರು ಜುಲೈ 1ರಂದು ಅಧಿಕಾರ ಸ್ವೀಕರಿಸಿದರು.

ಈ ಹುದ್ದೆಯಲ್ಲಿ ತಮ್ಮ ಅಧಿಕಾರಾವಧಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಡಾ. ನಾರಾಯಣ ಸಭಾಹಿತ್ ಅವರು ಇನ್ನು ಮುಂದೆ ಮಾಹೆ ವಿಶ್ವವಿದ್ಯಾಲಯದ ಸಲಹೆಗಾರರಾಗಿ ಕಾರ್ಯನಿರ್ವಹಿಸಲಿದ್ದಾರೆ. ಶಿಕ್ಷಣ ತಜ್ಞ ಹಾಗೂ ಆಡಳಿತಗಾರರಾಗಿರುವ ಡಾ. ಕರುಣಾಕರ್ ಕೋಟೆಗಾರ್ ಅವರು ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಬೋಧನೆ, ಸಂಶೋಧನೆ, ಶೈಕ್ಷಣಿಕ ನಾಯಕತ್ವ ಹಾಗೂ ಅಂತಾರಾಷ್ಟ್ರೀಯ ಸಹಯೋಗ ಸೇರಿದಂತೆ 29 ವರ್ಷಗಳಿಗೂ ಅಧಿಕ ಅನುಭವ ಹೊಂದಿದ್ದಾರೆ. 2024ರ ಅಕ್ಟೋಬರ್‌ನಿಂದ ಜೈಪುರದ ಮಣಿಪಾಲ ಕ್ಯಾಂಪಸ್‌ನ ಸಹ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಎಂಐಟಿಯ ಡೇಟಾ ಸೈನ್ಸ್ ಮತ್ತು ಕಂಪ್ಯೂಟರ್ ಅಪ್ಲಿಕೇಶನ್…

Read More

ಮಂಗಳೂರಿನಲ್ಲಿ ‘ಭಾವಸಂಗಮ’ ಜಿಲ್ಲಾ ಮಟ್ಟದ ಗಾಯನ ಸ್ಪರ್ಧೆ: ಜುಲೈ 18, 19 ಹಾಗೂ 26ರಂದು ಆಯೋಜನೆ

ಮಂಗಳೂರು, ಜು.3: ಕಲಾಮೃತ ಮಂಗಳೂರು ಹಾಗೂ ನಮ್ಮ ಕುಡ್ಲ ಸಂಸ್ಥೆಗಳು, ಶಾರದಾ ವಿದ್ಯಾಲಯ ಮಂಗಳೂರು ಸಹಯೋಗದೊಂದಿಗೆ “ಭಾವಸಂಗಮ” ಜಿಲ್ಲಾ ಮಟ್ಟದ ಭಕ್ತಿಗೀತೆ, ಭಾವಗೀತೆ ಹಾಗೂ ದೇಶಭಕ್ತಿ ಗೀತೆಗಳ ವೈಯಕ್ತಿಕ ಗಾಯನ ಸ್ಪರ್ಧೆಯನ್ನು ಜುಲೈ 18, 19 ಹಾಗೂ 26ರಂದು ಮಂಗಳೂರಿನಲ್ಲಿ ಆಯೋಜಿಸಿವೆ ಎಂದು ಕಲಾಮೃತ ಸದಸ್ಯ ಗಣೇಶ್ ಸೋಮಯಾಜಿ ತಿಳಿಸಿದ್ದಾರೆ. ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಪರ್ಧೆಯ ಪ್ರಥಮ ಹಂತ ಜುಲೈ 18 ಮತ್ತು 19ರಂದು ನವರತ್ನ ಪ್ಯಾಲೇಸ್‌ನಲ್ಲಿ ನಡೆಯಲಿದ್ದು, ದ್ವಿತೀಯ ಹಂತದ ಸೆಮಿಫೈನಲ್ ಹಾಗೂ…

Read More

ಜನಪ್ರಿಯ ವೈದ್ಯರೂ, ಪ್ರಸಿದ್ಧ ಸಾಹಿತಿಯೂ ಆಗಿರುವ ಡಾ. ಸುರೇಶ್ ನೆಗಳಗುಳಿ ಇವರು “ನಾಡೋಜ ಡಾ. ಕಯ್ಯಾರ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ -2026″ಕ್ಕೆ ಆಯ್ಕೆ.

ಕಾಸರಗೋಡು : ಡಾ ವಾಮನ್ ರಾವ್ ಬೇಕಲ್ -ಸಂದ್ಯಾ ರಾಣಿ ಟೀಚರ್ ಸಾರತ್ಯದ, ಕಾಸರಗೋಡು ನುಳ್ಳಿಪ್ಪಾಡಿಯ ಕನ್ನಡ ಭವನ ಮತ್ತು ಗ್ರಂಥಾಲಯ, ಕನ್ನಡ ಭವನ ಪ್ರಕಾಶನ, ಹಾಗೂ ವಾಮನ್ ರಾವ್ ಬೇಕಲ್ ಸ್ಥಾಪಿತ ಕೇರಳ ರಾಜ್ಯ -ಕನ್ನಡ ಚುಟುಕು ಸಾಹಿತ್ಯ ಪರಿಷತ್ತು ಸಂಯುಕ್ತ ಆಶ್ರಯದಲ್ಲಿ ಜೂಲೈ 26.ಭಾನುವಾರ ನಡೆಯಲಿರುವ “ಕರ್ನಾಟಕ ಗಡಿನಾಡು ಕನ್ನಡ ಸಮ್ಮೇಳನ “ದಲ್ಲಿ ಅಪ್ರತಿಮ ಮುಕ್ತಕ ಕವಿ, ಸಾಹಿತಿ, ಹಿರಿಯ ಜನಪ್ರಿಯ ವೈದ್ಯರೂ ಆಗಿರುವ ಡಾ. ಸುರೇಶ್ ನೆಗಳಗುಳಿ ಇವರಿಗೆ ಸಮ್ಮೇಳನದಲ್ಲಿ “ನಾಡೋಜ ಡಾ….

Read More
error: Content is protected !!