ಕಾಸರಗೋಡು ಜಿಲ್ಲಾ ಕೇರಳೋತ್ಸವದಲ್ಲಿ ಲಕ್ಕಿ ಬ್ರದರ್ಸ್ ಮಂಜೇಶ್ವರ ತಂಡಕ್ಕೆ ದ್ವಿತೀಯ ಸ್ಥಾನ

ಕಾಸರಗೋಡು ಜಿಲ್ಲಾ ಕೇರಳೋತ್ಸವದಲ್ಲಿ ಲಕ್ಕಿ ಬ್ರದರ್ಸ್ ಮಂಜೇಶ್ವರ ತಂಡ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದೆ.ಮೆಹಂದಿ ವಿಭಾಗದಲ್ಲಿ ಅಫ್ಸಾ & ಅಸ್ಮಾ ಹಾಗೂ ಪ್ರಬಂಧ ಬರವಣಿಗೆಯಲ್ಲಿ ಪೂಜಾ ಲಕ್ಷ್ಮಿ ಪ್ರಥಮ ಸ್ಥಾನ ಗಳಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.ಕಥಾ ಪ್ರಸಂಗ ಜನಪದ ನೃತ್ಯ ವಿಭಾಗದಲ್ಲಿ ಕುಮಾರಿ ಶಿಬಿರಾ ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ.ಕಥಾ ರಚನೆಯಲ್ಲಿ ಕುಬ್ರಾ ರವರು ‘ಎ’ ಗ್ರೇಡ್ ಗಳಿಸಿದ್ದಾರೆ.

ಮಂಜೇಶ್ವರ ಬ್ಲಾಕ್ ತಂಡವನ್ನು ಮುನ್ನಡೆಸಿದ ತಂಡದ ನಾಯಕ ಕಲಾವಿದ ಸಿದ್ದಿಕ್ ಮಂಜೇಶ್ವರ ಅವರನ್ನು ಬ್ಲಾಕ್ ಅಧ್ಯಕ್ಷ ಸೈಫುಲ್ಲಾ ತಂಗಳ್ ಹಾಗೂ ಮಂಜೇಶ್ವರ ಪಂಚಾಯತ್ ಅಧ್ಯಕ್ಷ ಬಶೀರ್ ಕನಿಲ ಅಭಿನಂದಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!