ನಾವೂರ ಗ್ರಾಮದ ಕೂಡಿಬೈಲಿನಲ್ಲಿ 15 ನೇ ವರ್ಷದ ಬಂಟ್ವಾಳ ಕಂಬಳ: ಆಗಮಿಸಲಿದ್ದಾರೆ ಮುಖ್ಯಮಂತ್ರಿ ಸಿದ್ದರಾಮಯ್ಯ

ಮೂಡೂರು-ಪಡೂರು ಜೋಡುಕರೆ ಕಂಬಳ ಸಮಿತಿ ಬಂಟ್ವಾಳ ವತಿಯಿಂದ ನಾವೂರ ಗ್ರಾಮದ ಕೂಡಿಬೈಲಿನಲ್ಲಿ ನಡೆಯುವ 15 ನೇ ವರ್ಷದ ಬಂಟ್ವಾಳ ಕಂಬಳಕ್ಕೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಗಮಿಸಲಿದ್ದಾರೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದರು. ಅವರು ನಾವೂರದ ಕಂಬಳದ ವೇದಿಕೆಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಸಿ.ಎಂ.ಸಿದ್ದರಾಮಯ್ಯ ಅವರು ಮಂಗಳೂರಿಗೆ ಸಂಜೆ ಆಗಮಿಸಿ ಅಲ್ಲಿಂದ ನೇರವಾಗಿ ನಾವೂರದ ಕಂಬಳ ಕೂಟಕ್ಕೆ ಆಗಮಿಸಿ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಲಿದ್ದಾರೆ.ಬಳಿಕ 8.30 ಗಂಟೆಗೆ ಮತ್ತೆ ಮಂಗಳೂರಿನಿಂದ ಬೆಂಗಳೂರಿಗೆ ತೆರಳಿದ್ದಾರೆ.ಇದು ನಮ್ಮ- ನಿಮ್ಮ ಕಂಬಳವಾಗಿದ್ದು, ಎಲ್ಲರೂ ಕಂಬಳ ಕೂಟದಲ್ಲಿ ಭಾಗವಹಿಸಿ ಎಂದು ತಿಳಿಸಿದರು.

ಬಂಟ್ವಾಳ ಕಂಬಳ ಅತ್ಯುತ್ತಮವಾದ ಕಂಬಳ ಕೂಟವೆಂದು ಕಂಬಳದ ಅಭಿಮಾನಿಗಳ ಅಚ್ಚುಮೆಚ್ಚಿನ ಮಾತು ನಮಗೆ ಸ್ಪೂರ್ತಿಯಾಗಿದೆ.ಈ ಬಾರಿ ವಿಶೇಷವಾಗಿ ಶಾಶ್ವಥವಾದ ಸಭಾ ವೇದಿಕೆಗೆ ಪೆಂಡಾಲ್ ,ಪ್ಯಾನ್ ಅಳವಡಿಸಲಾಗಿದೆ. ಛಾಯಾಗ್ರಾಹಕರ ಸಂಘದ ಸದಸ್ಯರಿಗೆ ಕಂಬಳದ ವಿಭಿನ್ನ ಚಿತ್ರಗಳ ಸೆರೆ ಹಿಡಿಯಲು ಅವಕಾಶವನ್ನು ನೀಡುವ ಉದ್ದೇಶದಿಂದ ಸಂಘದ ವತಿಯಿಂದ ಜಿಲ್ಲಾ ಮಟ್ಟದ ಸ್ಪರ್ಧೆಯನ್ನು ಏರ್ಪಡಿಸಿದ್ದಾರೆ.

ಸಮಿತಿ ಅಧ್ಯಕ್ಷ ಪಿಯೂಸ್ ಎಲ್ ರೊಡ್ರಿಗಸ್, ಸಂಚಾಲಕ ಪದ್ಮನಾಭ ರೈ, ಕಾರ್ಯಧ್ಯಕ್ಷ ಚಂದ್ರಪ್ರಕಾಶ್ ಶೆಟ್ಟಿ, ಸಮಿತಿ ಪ್ರಮುಖರಾದ ಬೇಬಿಕುಂದರ್, ಬಾಲಕೃಷ್ಣ ಅಂಚನ್, ಅಬ್ಬಾಸ್ ಆಲಿ, ಸುದೀಪ್ ಶೆಟ್ಟಿ, ಸಿದ್ದೀಕ್ ಬೊಗೋಡಿ, ಪದ್ಮನಾಭ ರೈ ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!