ಬಂಟ್ವಾಳ: ” ನಾಗ ನ ಹೋಟೆಲ್ ಬಂದ್ ಗೆ” ಈವರೆಗೆ ದ.ಕ.ಜಿಲ್ಲೆಯ ವಿವಿಧ ಹೋಟೆಲ್ ಗಳು ಗ್ಯಾಸ್ ಅಭಾವದಿಂದ ಬಾಗಿಲು ಹಾಕಿದ ಬಗ್ಗೆ ನಾವು ಸುದ್ದಿಯನ್ನು ಕೇಳಿದ್ದೇವೆ. ಆದರೆ ಇಂದು ಬಿಸಿರೋಡಿನ ಫೇಮಸ್ ಕ್ಯಾಂಟೀನ್ ” ನಾಗಾ” ಕ್ಯಾಂಟೀನ್ ಕೂಡ ಬೀಗ ಹಾಕಿದೆ.
ಯುದ್ಧದ ಕಾರಣಕ್ಕಾಗಿ ಗ್ಯಾಸ್ ನ ಅಭಾವ ತಲೆದೋರಿದ್ದು,ಉದ್ಯಮದಲ್ಲಿ ಬಹಳಷ್ಟು ಏರುಪೇರು ಕಂಡುಬರುತ್ತಿದೆ. ದಿನವೊಂದಕ್ಕೆ ಸಾವಿರಾರು ಜನರು ಸರಕಾರಿ ಅಧಿಕಾರಿಗಳು,ವಕೀಲರುಗಳು,ಉದ್ಯಮಿಗಳು ಹೀಗೆ ಎಲ್ಲಾ ಸ್ತರದ ಜನರಿಗೆ ಚಹಾತಿಂಡಿ ನೀಡುತ್ತಿದ್ದ ನಾಗರಾಜ್ ಅವರ ನಾಗಾ ಕ್ಯಾಂಟೀನ್ ಗ್ಯಾಸ್ ಕೊರತೆಯ ಕಾರಣಕ್ಕಾಗಿ ಬಂದ್ ಆಗಿದೆ ಎಂದು ತಿಳಿಸಿದ್ದಾರೆ.
ಕೊರೊನಾ ಮಹಾಮಾರಿಯ ಸಂದರ್ಭದ ಲಾಕ್ ಡೌನ್ ಬಿಟ್ಟರೆ ವರ್ಷ ಪೂರ್ತಿ ನಾಗಾ ನಾ ಕ್ಯಾಂಟೀನ್ ತೆರೆದಿರುತ್ತದೆ.
ಬೆಳಿಗ್ಗೆ 6 ರಿಂದ ಸಂಜೆ 7 ಗಂಟೆವರೆಗೆ ಸೇವೆ ನೀಡುತ್ತಿದ್ದ ಕ್ಯಾಂಟೀನ್ ಬಂದ್ ಆಗಿರುವುದು ಸಾರ್ವಜನಿಕ ವಲಯದಲ್ಲಿ ಒಂದಷ್ಟು ಆತಂಕವನ್ನು ಉಂಟುಮಾಡಿದೆ.
ವಾಣಿಜ್ಯ ಬಳಕೆಯ ಗ್ಯಾಸ್ ನಲ್ಲಿ ವ್ಯತ್ಯಯ ಉಂಟಾಗಿ ತಿಂಡಿ ತಯಾರಿಸುವುದು ಅಸಾಧ್ಯ ಎಂದು ಹೇಳಲಾಗಿದೆ.
ಇದೇ ಮಾದರಿಯಲ್ಲಿ ಗ್ಯಾಸ್ ನ ವ್ಯತ್ಯಯಗಳು ತಲೆದೋರಿದರೆ ಬಿಸಿರೋಡಿನ ಬಹುತೇಕ ಎಲ್ಲಾ ಹೋಟೆಲ್ ಉದ್ಯಮ ಸ್ಥಗಿತಗೊಳ್ಳುವ ಸಾಧ್ಯತೆಗಳಿವೆ.
ಮತ್ತೆ ಕೊರೊನಾ ಕರಿಛಾಯೆ ಮೂಡವ ಆತಂಕ ಕಾಣುತ್ತಿದೆ.
ಒಟ್ಟಿನಲ್ಲಿ ಮತ್ತೆ ಕಟ್ಟಿಗೆ ಸೌಧೆ ಒಲೆಯ ಹಳೆಯ ನೆನಪು ಜನರ ಕಣ್ಣ ಮುಂದೆ ಸುಳಿದಾಡುತ್ತಿದ್ದು,ಮನೆಯ ಮೂಲೆಯಲ್ಲಿದ್ದ ಟಿಫಿನ್ ಬಾಕ್ಸ್ ಗಳು ಮತ್ತೆ ಮುನ್ನಲೆಗೆ ಬರಬಹುದೇ?