ಮಂಗಳೂರು: ನೇತಾಜಿ ಸುಭಾಸ್‌ಚಂದ್ರಬೋಸ್ ಗ್ರಾಮೀಣ ಸೇವಾ ಅಭಿವೃದ್ಧಿ ಸಂಸ್ಥೆ, ಹುಬ್ಬಳ್ಳಿ ವತಿಯಿಂದ ಮಂಗಳೂರು ಜಿಲ್ಲೆಯಲ್ಲಿ ಸಂವಿಧಾನ ಜಾಗೃತಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.
ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಂಘದ ರಾಜ್ಯ ವ್ಯವಸ್ಥಾಪಕ ಸಂಗೊಳ್ಳಿ ಸೋಮಣ್ಣ ಮಾತನಾಡಿ, ಸಹಕಾರ ಇಲಾಖೆ ಅಡಿಯಲ್ಲಿ ಬರುವ ಖಾಸಗಿ ಬ್ಯಾಂಕ್‌ಗಳು, ಪತ್ತಿನ ಸಹಕಾರ ಸಂಘಗಳು, ಕೋಆಪರೇಟಿವ್ ಸಂಸ್ಥೆಗಳು ಹಾಗೂ ಕೆಎಂಎಫ್ ಡೈರಿ ಮತ್ತು ಹಾಲು ಉತ್ಪಾದಕರ ಸಂಘಗಳಲ್ಲಿ ಭಾರತದ ಸಂವಿಧಾನದ ಪೀಠಿಕೆ ಬೋರ್ಡ್ ಅಳವಡಿಸಲು ಅನುಮತಿ ದೊರೆತಿದೆ ಎಂದು ಹೇಳಿದರು.
ಈ ಹಿನ್ನೆಲೆಯಲ್ಲಿ ಸಂಸ್ಥೆ ರಾಜ್ಯಾದ್ಯಂತ ಜಾಗೃತಿ ಕಾರ್ಯದಲ್ಲಿ ತೊಡಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಸರ್ಕಾರಿ ಹಾಗೂ ಸಹಕಾರ ಸಂಸ್ಥೆಗಳಲ್ಲಿ ಇಂದಿನಿಂದಲೇ ಸಂವಿಧಾನ ಪೀಠಿಕೆ ಬೋರ್ಡ್‌ಗಳನ್ನು ವಿತರಿಸುವ ಕಾರ್ಯ ಪ್ರಾರಂಭಿಸಲಾಗಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷೆ ವಿದ್ಯಾಲಕ್ಷ್ಮಿ, ಸದಸ್ಯರಾದ ಅಂಕಿತಾ, ಕಾರ್ತಿಕ್ ಹಾಗೂ ಸತೀಶ್ ಉಪಸ್ಥಿತರಿದ್ದರು.