ಬದಿಯಡ್ಕ–ಕುಂಬಳೆ ರಸ್ತೆಯಲ್ಲಿ ಕೋಳಿ ತ್ಯಾಜ್ಯ ಕಸ: ಸಾರ್ವಜನಿಕರಿಗೆ ತೀವ್ರ ತೊಂದರೆ

ಬದಿಯಡ್ಕ ಕುಂಬಳೆ ರಸ್ತೆ ಹಾದುಹೋಗುವ ನೈಫ್ ಜಂಕ್ಷನ್‌ ಬಸ್ ಸ್ಟಾಪ್ ಬಳಿ, ಕೋಳಿ ತ್ಯಾಜ್ಯ ಸೇರಿದಂತೆ ದುರ್ವಾಸನೆ ಬೀರುವ ಕಸವನ್ನು ರಸ್ತೆಬದಿಯಲ್ಲಿ ಸುರಿಯಲಾಗಿದ್ದು, ಪ್ರಯಾಣಿಕರು ಮತ್ತು ನಿವಾಸಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳದಿದ್ದರೆ, ಈ ಪ್ರದೇಶದಲ್ಲಿ ಸಾಂಕ್ರಾಮಿಕ ರೋಗಗಳು ಹರಡುವ ಭಯ ಸ್ಥಳೀಯರಲ್ಲಿದೆ.

ಸಾಮಾಜಿಕ ಕಾರ್ಯಕರ್ತರಾದ ಹ್ಯಾರಿಸ್ ಬಿಡಿಕೆ, ರಫೀಕ್ ಆರ್‌ಕೆ, ಮುಹಮ್ಮದ್ ಅಲಿ ಪೆರ್ಡಾಲ ಹಾಗೂ ಅಶ್ರಫ್ ಲಿಟಲ್ ಡ್ರೀಮ್ಸ್ ಅವರು ತಕ್ಷಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!