ಪುತ್ತೂರು: ಅಡುಗೆ ಅನಿಲ ಕೊರತೆ ಕುರಿತು ಶಾಸಕರ-ಮಾಜಿ ಶಾಸಕರ ನಡುವೆ ವಾಗ್ವಾದ

ಪುತ್ತೂರು: ಅಡುಗೆ ಅನಿಲ ಕೊರತೆ ಆತಂಕ ಬೇಡ ಎಂದು ಮಾಜಿ ಶಾಸಕರು ಯಾವ ಆಧಾರದ ಮೇಲೆ ಹೇಳಿದ್ದಾರೆ ಎಂಬುದು ಗೊತ್ತಿಲ್ಲ. ಎಲ್ಲಿಯೂ ಕೂಡಾ ಗ್ಯಾಸ್ ಇಲ್ಲ. ಹಾಗಾಗಿ ಗ್ಯಾಸ್‌ ವಿಚಾರದಲ್ಲಿ ಸುಳ್ಳು ಹೇಳುವುದನ್ನು ನಿಲ್ಲಿಸಲಿ ಎಂದು ಹಾಲಿ ಶಾಸಕ ಅಶೋಕ್ ಕುಮಾರ್ ರೈ ಅವರು ಪ್ರತಿಕ್ರಿಯಿಸಿದ್ದಾರೆ.

ಮಾಜಿ ಶಾಸಕ ಸಂಜೀವ ಮಠಂದೂರು ಅವರು ಅನಿಲ ಕೊರತೆ ಆತಂಕ ಬೇಡ. ಮೋದಿ ನೇತೃತ್ವದಲ್ಲಿ ಸಮರ್ಪಕವಾಗಿ ಪೂರೈಕೆ ಆಗುತ್ತದೆ ಎಂದು ಹೇಳಿಕೆ ನೀಡಿದ್ದರು. ಇದೆ ವಿಚಾರವಾಗಿ ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ಸಭೆ ಬಳಿಕ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಶಾಸಕ ಅಶೋಕ್ ಕುಮಾ‌ರ್ ರೈ ಅವರು ಇವತ್ತು ಗ್ರಾಹಕರಿಗೆ 35 ರಿಂದ 40 ದಿನಕ್ಕೆ ಒಂದು ಸಿಲಿಂಡರ್‌ ಸಿಗುತ್ತದೆ. ನನಗೆ ಸುಳ್ಯದಲ್ಲಿ ಸ್ವತಃ ಗ್ಯಾಸ್ ಏಜೆನ್ಸಿ ಇದೆ. ನಮ್ಮಲ್ಲಿ 45 ದಿವಸಕ್ಕೆ ಗ್ಯಾಸ್ ಕೊಡುತ್ತೇವೆ. ನಮಗೆ ಲೋಡ್ ಬರದೆ 4 ದಿನ ಆಗಿದೆ. ಜನ ಅಂಗಡಿ ಎದುರು ಸರತಿ ನಿಲ್ಲುವ ಪರಿಸ್ಥಿತಿ ಎದುರಾಗಿದೆ. ಹೊಟೇಲ್‌ಗಳು ಬಂದ್‌ ಆಗಿದೆ. ಯಾವ ಹೊಟೇಲ್‌ನಲ್ಲಿ ಕೂಡಾ ಗ್ಯಾಸ್ ಇಲ್ಲ. ಉಪ್ಪಿನಂಗಡಿ ಕಂಬಳದ ಸಮಯ ಹೊಟೇಲ್ ಹಾಕಲು ನಾವು ಗ್ಯಾಸ್ ತೆಗೆಸಿಕೊಟ್ಟ ಬಳಿಕ ಅವರು ಹೊಟೇಲ್ ಮಾಡಿದರು. ಮೊನ್ನೆ ಮಾಜಿ ಶಾಸಕರು ಎಲ್ಲಿಯೂ ಗ್ಯಾಸ್ ಶಾರ್ಟೆಜ್ ಇಲ್ಲ ಎಂದು ಹೇಳಿಕೆ ನೀಡಿದ್ದರು. ಈಗ ಒಮ್ಮೆ ಹೇಳಿಕೆ ನೀಡಲಿ ನೋಡೋಣ. ಈ ಪರಿಸ್ಥಿತಿ ಎಲ್ಲಾದರೂ ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರವಿರುತ್ತಿದ್ದರೆ ಇಲ್ಲಿ ವಿರೋಧ ಪಕ್ಷದವರು ಹೆಗಲಿನಲ್ಲಿ ಗ್ಯಾಸ್‌ ಸಿಲಿಂಡ‌ರ್ ಇಟ್ಟು ರೋಡ್‌ನಲ್ಲಿ ಓಡಾಡುತ್ತಿದ್ದರು. ಆದರೆ ಕಾಂಗ್ರೆಸ್ ನವರು ಚೀಫ್ ರಾಜಕೀಯ ಮಾಡಲು ಹೋಗುವುದಿಲ್ಲ. ನಾವು ದೇಶದ ಹಿತರಕ್ಷಣೆಯಿಂದಾಗಿ ಬೀದಿಗಿಳಿದಿಲ್ಲ ಎಂದು ಹೇಳಿದರು.

ಇವತ್ತು ಹೊಟೇಲ್‌ನಲ್ಲಿ ವ್ಯವಹಾರವಿಲ್ಲ. ಆಟೋ ಚಾಲಕರು ಗ್ಯಾಸ್‌ ಇಲ್ಲದೆ ಪರದಾಡುವ ಪರಿಸ್ಥಿತಿ ಎದುರಾಗಿದೆ. ಆದರೂ ಎಲ್ಲಿಯೂ ತೊಂದರೆ ಇಲ್ಲ ನಾವು ಬೇಕಾದಷ್ಟು ಗ್ಯಾಸ್‌ ಕೊಡುತ್ತೇವೆ ಎಂದು ಮಿಸ್‌ಗೈಡ್ ಮಾಡಬೇಡಿ. ಇದ್ದದನ್ನು ಇದ್ದಂತೆ ಹೇಳಿ. ಮಾಧ್ಯಮದ ಮುಂದೆ ಯಾವ ಹೇಳಿಕೆ ಕೊಡುವುದಿದ್ದರೂ ಸ್ವಲ್ಪ ಆಲೋಚನೆ ಮಾಡಿ ಹೇಳಿ. ಸುಳ್ಳು ಹೇಳಿಕೆ ಕೊಡುವುದನ್ನು ಸ್ವಲ್ಪ ನಿಲ್ಲಿಸಿ ಎಂದವರು ಹೇಳಿದರು.

ಗ್ಯಾಸ್‌ ಸರಬರಾಜು ಮಾಡುವುದಕ್ಕೂ ಯುದ್ಧಕ್ಕೂ ಸಂಬಂಧ ಕಡಿಮೆ. ಯುದ್ಧ ಆಗುವುದು ಬೇರೆ ಬೇರೆ ದೇಶದಲ್ಲಿ. ಎರಡೇ ದಿವಸದಲ್ಲಿ ನಮ್ಮಲ್ಲಿ ಗ್ಯಾಸ್ ಶಾರ್ಟೇಜ್ ಆದರೆ ಭಾರತ ದೇಶ ಇವತ್ತು ಇನ್ನೊಂದು ದೇಶದೊಂದಿಗೆ ಯುದ್ಧ ಮಾಡಿದರೆ ಪರಿಸ್ಥಿತಿ ಏನಾಗುವುದು. ಯುದ್ದಕ್ಕೂ ಗ್ಯಾಸ್‌ಗೂ ಸಂಬಂಧವಿಲ್ಲ. ಬೇರೆ ದೇಶದಿಂದ ತರಿಸಿಕೊಡಬಹುದು. ಕೃಷಿಕರಿಗೂ ಗೊಬ್ಬರ ಸಮಸ್ಯೆ ಎದುರಾಗಿದೆ. ಕೇಂದ್ರ ಸರಕಾರ ಸರಿಯಾದ ಕ್ರಮ ಕೈಗೊಳ್ಳಬೇಕು ಎಂದು ಶಾಸಕರು ಹೇಳಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!