ಖಾಸಗಿ ವಾಹನಗಳಲ್ಲಿ (White Board) ಶಾಲಾ ಮಕ್ಕಳನ್ನು ಸಾಗಿಸುತ್ತಿರುವ ಹಾಗೂ ಬಾಡಿಗೆ ಮಾಡುತ್ತಿರುವ ವಾಹನಗಳ ವಿರುದ್ಧ ಕಠಿನ ಕ್ರಮ ಕೈಗೊಳ್ಳಲು ಮನವಿ

ಮಂಗಳೂರು: ನಮ್ಮ ನೆಲದ ಕಾನೂನಿಗನುಗುಣವಾಗಿ ನಾವು ಮಕ್ಕಳ ವಾಹನಗಳನ್ನು ಚಲಾಯಿಸುತ್ತಾ ಬಂದಿರುತ್ತೇವೆ. ತಮಗೆ ತಿಳಿದಂತೆ ಟೂರಿಸ್ಟ್ ವಾಹನಗಳಲ್ಲಿ (Yellow Board) ಮಾತ್ರವೇ ಶಾಲಾ ಮಕ್ಕಳನ್ನು ಕೊಂಡೊಯ್ಯಲು ಹಾಗೂ ಬಾಡಿಗೆ ಮಾಡಲು ಅವಕಾಶವಿದ್ದು, ನಮ್ಮ ಸಂಘದ ಎಲ್ಲಾ ಸದಸ್ಯರು ಈ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾ ಬಂದಿರುತ್ತೇವೆ. ಹೀಗಿರುವಲ್ಲಿ ನಿರಂತರವಾಗಿ ಖಾಸಗಿ ವಾಹನಗಳಲ್ಲಿ (White Board) ಯಥೇಚ್ಛಿತವಾಗಿ ಶಾಲಾ ಮಕ್ಕಳನ್ನು ಕೆಲವು ಚಾಲಕರು ‌ಸಾಗಿದುತ್ತಿದ್ದಾರೆ. ಕಾನೂನು ಉಲ್ಲಂಘಿಸುವ ಚಾಲಕ/ಮಾಲಕರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಹಲವಾರು ಭಾರಿ ಸಂಬಂಧಪಟ್ಟ ಇಲಾಖಾಧಿಕಾರಿಗಳಿಗೆ ನಮ್ಮ ಸಂಘದ ವತಿಯಿಂದ ಮನವಿ ಸಲ್ಲಿಸಿದರೂ ಯಾವುದೇ ರೀತಿಯ ಕ್ರಮ ಕೈಗೊಂಡಿರುವುದಿಲ್ಲಾ. ಖಾಸಗಿ (ವೈಟ್ ಬೋರ್ಡ್)ವಾಹನದ ಚಾಲಕರು/ಮಾಲಕರು ಮಾಡಿರುವ ತಪ್ಪಿಗೆ, ಕಾನೂನನ್ನು ಪಾಲಿಸುವ ನಮಗೆ ಕೂಡಾ ತೊಂದರೆಯಾಗಿರುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಈ ಹಿಂದೆಯೂ ಖಾಸಗಿ ವಾಹನಗಳಲ್ಲಿ ಬಾಡಿಗೆ ಆಧಾರದ ಮೇಲೆ ಶಾಲಾ ಮಕ್ಕಳನ್ನು ಸಾಗಿಸುತ್ತಿರುವಾಗ ಸಂಭವಿಸಿದ ಅಪಘಾತಗಳು ಹೃದಯವಿದ್ರಾವಕ ವಾಗಿರುತ್ತವೆ. ಇಂತಹ ಘಟನೆಗಳು ನಮ್ಮ ಕಣ್ಣ ಮುಂದಿದ್ದರೂ ಮಂಗಳೂರು ಸೇರಿದಂತೆ ಜಿಲ್ಲೆಯ ಅನೇಕ ಕಡೆಗಳಲ್ಲಿ ವಾಹನ ಸಂಚಾರ ನಿಯಮಗಳನ್ನೇ ಉಲ್ಲಂಘಿಸಿ ಅದರಲ್ಲೂ ಶಾಲಾ ಮಕ್ಕಳನ್ನು ಸಾಗಿಸುತ್ತಿರುವುದು ಅಕ್ಷಮ್ಯ ಅಪರಾಧವಾಗಿದೆ.

ಈ ಹಿಂದಿನ 5,6 ವರ್ಷಗಳಿಂದ ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿಕೊಂಡು ಬಂದಿರುತ್ತೇವೆ. ಈ ಕುರಿತು ಯಾವುದೇ ರೀತಿಯ ಕಾನೂನು ಕ್ರಮ ಗಳನ್ನು ಸಂಬಂಧಪಟ್ಟ ಇಲಾಖೆಯಿಂದ ಸಿಗದಿರುವುದು ವಿಷಾದನೀಯವಾಗಿದೆ.

ಟೂರಿಸ್ಟ್ ವಾಹನಗಳ ಇನ್ಸೂರೆನ್ಸ್ ದುಬಾರಿಯಾಗಿರುತ್ತವೆ ಹಾಗೂ ನಾವು ಅದನ್ನು ಭರಿಸಿಕೊಂಡು ಬಂದಿರುತ್ತೇವೆ. ಉದಾ: ವರ್ಷಕ್ಕೆ ರೂ.23,000/- (ಇಪ್ಪತ್ತಮೂರು ಸಾವಿರ), ಸರಕಾರದಿಂದ ಬಂದ ಹೊಸ ಕಾನೂನು ಅಂದರೆ ಪ್ಯಾನಿಕ್ ಬಟನ್ ಬೆಲೆ ರೂ.14,000/- (ಹದಿನಾಲ್ಕು ಸಾವಿರ) ಆಗಿರುತ್ತದೆ. ಇದನ್ನೂ ಅಳವಡಿಸಿಕೊಂಡಿರುತ್ತೇವೆ. ಪ್ರತಿ ವರ್ಷ ವರ್ಷ( ತೆರಿಗೆ) ಟ್ಯಾಕ್ಸ್ ಪಾವತಿಸಿ ವಾಹನ‌ ತಪಾಸಣೆ ಯನ್ನು ಮಾಡಿಕೊಂಡು ಬಂದಿರುತ್ತೇವೆ.

ಆದರೆ ಬೇಸರದ ವಿಷಯವೆಂದರೆ ಖಾಸಗಿ ವಾಹನಗಳಲ್ಲಿ ಪ್ಯಾನಿಕ್ ಬಟನ್ ಆಗಲಿ, ದುಬಾರಿ ಇನ್ಸೂರೆನ್ಸ್ ಆಗಲಿ, ಯಾವುದೇ ರೀತಿಯ ತೆರಿಗೆ ಗಳನ್ನು ಪಾವತಿಸದೆ ಬಾಡಿಗೆ ಆಧಾರದಲ್ಲಿ ಮಕ್ಕಳನ್ನು ಸಾಗಿಸುವುದು ಅಪರಾಧ ಹಾಗೂ ಇದು ಸರಕಾರದ ಬೊಕ್ಕಸಕ್ಕೆ ತುಂಬಲಾರದ ನಷ್ಟವಾಗಿರುತ್ತದೆ. ಆದುದರಿಂದ ತಾವುಗಳು ಈ ಬಗ್ಗೆ ತುರ್ತು ಗಮನ ಹರಿಸಿ ಶಾಲಾ ಮಕ್ಕಳನ್ನು ಖಾಸಗಿ ವಾಹನಗಳಲ್ಲಿ (White Board) ಸಾಗಿಸುತ್ತಿರುವ ವಾಹನಗಳ ಮೇಲೆ ನಿಗಾ ಇಟ್ಟು ಕಟ್ಟುನಿಟ್ಟಿನ ಕಾನೂನು ಕ್ರಮ ಜರಗಿಸಿ ಅಂತಹ ವಾಹನಗಳನ್ನು ಟೂರಿಸ್ಟ್ ವಾಹನಗಳನ್ನಾಗಿ ಮಾರ್ಪಡಿಸಲು ಸರಕಾರದ ಗಮನಕ್ಕೆ ತರಲು ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಪತ್ರಿಕಾ ಮಾಧ್ಯಮದಲ್ಲಿ ಹಾಗೂ ದೃಶ್ಯ ಮಾಧ್ಯಮಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯದಲ್ಲಿ ನಮ್ಮೊಂದಿಗೆ ಸಹಕರಿಸಬೇಕು ಮತ್ತು ಸರಕಾರದ ಇಲಾಖೆಗಳಿಗೆ ನಿಮ್ಮಿಂದ ಅರಿವು ಮೂಡಿಸಿ ಹಾಗೂ ಜಿಲ್ಲೆಯಾದ್ಯಂತ ಎಲ್ಲಾ ಶಾಲಾ ಆಡಳಿತ ಮಂಡಳಿಗಳಿಗೆ ಈ ನಿಯಮವನ್ನು ಪಾಲಿಸುವಂತೆ ಆದೇಶಿಸಲು ಸಂಬಂದಪಟ್ಟ ಅಧಿಕಾರಿಗಳಿಗೆ ಸೂಚಿಸಬೇಕಾಗಿ ತಮ್ಮಲ್ಲಿ ವಿನಮ್ರವಾಗಿ ವಿನಂತಿಸುತ್ತಿದ್ದೇವೆ.

ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದವರು.

ಸುನಿಲ್ ಕುಮಾರ್ ಬಜಾಲ್ ಸಂಘದ ಗೌರವಾಧ್ಯಕ್ಷರು
ಕಿರಣ್ ಲೇಡಿಹಿಲ್ ಸಂಘದ ಕಾರ್ಯಾಧ್ಯಕ್ಷರು
ಸತೀಶ್ ಪೂಜಾರಿ ಅಶೋಕನಗರ ಸಂಘದ ಅಧ್ಯಕ್ಷರು
ಮೋಹನ್ ಕುಮಾರ್ ಅತ್ತಾವರ ಸಂಘದ ಸ್ಥಾಪಕ ಅಧ್ಯಕ್ಷರು
ಹರೀಶ್ ಪೂಜಾರಿ ಸಂಘದ ಪ್ರಧಾನ ಕಾರ್ಯದರ್ಶಿ

ಸಂಘದ ಇತರ ಮುಖಂಡರಾದ ಲೋಕೇಶ್ ಸುರತ್ಕಲ್,ಮುನ್ನ ಪದವಿನಂಗಡಿ,ನರೇಂದ್ರ ಹೊಯಿಗೆಬೈಲ್,ರಾಜೇಶ್ ಕುಳಾಯಿ,ದಿನೇಶ್ ಕುಂಜತ್ತಬೈಲ್, ಶಂಕರ ಮುಂತಾದವರು ಹಾಜರಿದ್ದರು.

ದಕ್ಷಿಣ ಕನ್ನಡ ಜಿಲ್ಲಾ ಶಾಲಾ ಮಕ್ಕಳ ವಾಹನ ಚಾಲಕರ ಸಂಘ (ರಿ) ಮಂಗಳೂರು

SHARE
Loading spinner

Leave a Reply

Your email address will not be published. Required fields are marked *

error: Content is protected !!