ಶೀಘ್ರ ಕಲ್ಯಾಣ ಪ್ರಾಪ್ತಿ ಗೆ ಸ್ವಯಂವರ ಪಾರ್ವತಿ ಯಾಗ.ಜುಲೈ 5 ರಂದು ಅಂಬಾರು ಸದಾಶಿವ ಕ್ಷೇತ್ರ ದಲ್ಲಿ.

“‘ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು” ಎಂಬ ಮಾತಿನಂತೆ ಯಾವುದೇ ತಂದೆ ತಾಯಿಗಳಿಗೆ ತನ್ನ ಮಕ್ಕಳನ್ನು ಉನ್ನತ ಭವಿಷ್ಯಕ್ಕೆ ಹೊಂದಿಕೊಳ್ಳುವಂತೆ ಯೋಗ್ಯವಾದ ವಧು ವರರನ್ನು ತನ್ನ ಮಕ್ಕಳಿಗೆ ಅನ್ವೇಶಿಸಿ ಮದುವೆಯ ಭಾಗ್ಯವನ್ನು ಕಣ್ತುಂಬಿಸಿಕೊಳ್ಳುತ್ತಾರೆ.ಅದರಲ್ಲೂ ಹೆಣ್ಣು ಮಕ್ಕಳಿಗೆ ಶೀಘ್ರವಾಗಿ ಯೋಗ್ಯವಾದ ಸಂಬಂಧಗಳನ್ನು ಅನ್ವೇಷಣೆ ಮಾಡಿ ಬದುಕು ಕಟ್ಟಿಕೊಳ್ಳುವಂತೆ ಹೆತ್ತವರು ಅದೆಷ್ಟು ಕನಸುಗಳನ್ನು ಕಾಣುತ್ತಾರೆ.


ಆದರೆ ಸ್ತ್ರೀಯರಿಗೆ ವಿವಾಹ ಭಾಗ್ಯವು ಮಂದಗತಿಯಲ್ಲಿ ಸಾಗುತ್ತಿದ್ದರೆ, ತಾನು ಅಂದುಕೊಂಡಂತಹ ವರ ಲಭಿಸದೆ ವಿವಾಹ ಭಾಗ್ಯವು ಮಟಕುಗೊಳ್ಳುತ್ತಿದ್ದರೆ ಶೀಘ್ರ ಕಲ್ಯಾಣ ಪ್ರಾಪ್ತಿಯಾಗಲು ಸ್ವಯಂವರ ಪಾರ್ವತಿಯಾಗ ಹಾಗೂ ದುರ್ಗಾ ದೀಪ ನಮಸ್ಕಾರ ದಂತಹ ಪೂಜೆ ಹೋಮ ಹವನಾದಿಗಳನ್ನು ಮಾಡಿ ತನ್ನ ಇಷ್ಟಾರ್ಥವನ್ನು ಪೂರೈಸಿ ತನ್ನ ಜೀವನದಲ್ಲಿ ಸಫಲರಾದ ಅದೆಷ್ಟೋ ಜನರಿದ್ದಾರೆ.


ಪರ್ವತರಾಜನ ಮಗಳಾದ ಪಾರ್ವತಿ ದೇವಿಯು ಪರಶಿವನನ್ನು ಪತಿಯಾಗಿ ಪಡೆಯಬೇಕಿದ್ದರೆ, ಭಕ್ತಿ ಭಾವದಿಂದ ಇಂತಹ ಯಾಗವನ್ನು ಮಾಡಿದ್ದು ಪುರಾಣ ದಲ್ಲಿ ಉಲ್ಲೇಖವಾಗಿದೆ. ಪಾರ್ವತಿ ದೇವಿಯು ಯಾಗವನ್ನು ಮಾಡುವ ಸಂದರ್ಭದಲ್ಲಿ ಶಿವನು ಮೊದಲು ತೇಜೋಮ ಯವಾದ ಅಗ್ನಿ ರೂಪದಲ್ಲಿ

ಪ್ರತ್ಯಕ್ಷನಾದಾಗ ತೃಪ್ತ ರಾಗದ ಪಾರ್ವತಿ ದೇವಿಯು ತನ್ನ ಪ್ರಾರ್ಥನೆಯನ್ನು ಮತ್ತಷ್ಟು ಕಠಿಣ ಗೊಳಿಸಿದಾಗ ಪರಶಿವನು ತನ್ನ ನೈಜ ರೂಪದಲ್ಲಿ ಆದಿಶಕ್ತಿಯಾದ ಪಾರ್ವತಿ ದೇವಿಗೆ ಪ್ರತ್ಯಕ್ಷವಾಗುತ್ತಾರೆ ಈ ರೀತಿಯಾಗಿ ಪರಶಿವನನ್ನು ಪ್ರಸನ್ನಗೊಳಿಸಿ ತನ್ನ ಪತಿ ದೇವರನ್ನಾಗಿ ಪಡೆಯಲು ಪಾರ್ವತಿ ದೇವಿಯು ಸ್ವತಃ. ಯಾಗವನ್ನು ಮಾಡಿದ್ದು ಐತಿಯ್ಯಾ ವಾಗಿದೆ. ಈ ರೀತಿಯಾಗಿ ಶೀಘ್ರಾತಿ ಶೀಘ್ರ ಕಲ್ಯಾಣ ಪ್ರಾಪ್ತಿಗೆ ಈಗಲೂ ಸ್ವಯಂವರ ಪಾರ್ವತಿಯಾಗವನ್ನು ಮಾಡುತ್ತಾರೆ.

ಕಲಿಯುಗದಲ್ಲಿ ಯಜ್ಞ ಯಾಗದಿ ಗಳಿಂದ ಇಷ್ಟಾರ್ಥವನ್ನು ಸಿದ್ದಿಸಿಕೊಳ್ಳ ಬಹುದೆಂದು ಋಷಿ ಮುನಿಗಳು ನಮಗೆ ತಿಳಿಸಿಕೊಟ್ಟಿರುತ್ತಾರೆ ಎಂಬುದು ನಿಜ. ವಿವಾಹ, ಉದ್ಯೋಗ,ಸಂತಾನಪ್ರಾಪ್ತಿ ಗೆ ಹಾಗೂ ಇಷ್ಟಾರ್ಥ ಸಾಧನೆಗೆ ಮಂಗಲ್ಪಾಡಿ ಅಂಬಾರು ಶ್ರೀ ಸದಾಶಿವ ಕ್ಷೇತ್ರದಲ್ಲಿ
ನವಗ್ರಹ ಸಹಿತ ಸ್ವಯಂವರ ಪಾರ್ವತಿ ಯಾಗವು ಸಾಮೂಹಿಕವಾಗಿ ಜುಲೈ 05 ರಂದು ನಡೆಯಲಿರುವುದು.

ಯಾಗ ಪ್ರಸಾದದಿಂದ ಗ್ರಹದೋಷ ನಿವಾರಣೆಯಾಗಿ ವಿವಾಹ ಪ್ರತಿಬಂಧಕ ನಿವಾರಣೆಯಾಗಿ ಕ್ಷಿಪ್ರ ವಿವಾಹ ಸೀದ್ದಿಯೂ ಸಂತಾನ ಪ್ರಾಪ್ತಿಯೂ ವಿವಿದ ಕಾರಣಗಳಿಂದ ಬೆರ್ಪಟ್ಟ ದಾಂಪತ್ಯ ಜೀವನವು ಈ ಯಾಗದಿಂದ ಪುನಃ ಒಂದಾಗಲು ಸಾಧ್ಯವಾಗುತ್ತದೆ. ಉತ್ತಮ ಉದ್ಯೋಗ, ವ್ಯವಹಾರಗಲ್ಲಿ ಜನಾಕರ್ಷಣೆ,ಸಮಸ್ತ ಇಷ್ಟಾರ್ಥ ಸಿದ್ದಿಯೂ ಕಾರ್ಯ ಸಿದ್ದಿಯೂ ನೆರವೇರಿ ನಂಬಿದ ಭಕ್ತರಿಗೆ ಇಷ್ಟಾರ್ಥ ಸಿದ್ಧಿಯಾಗಿ ಸಮಾಜವು ಸದೃಢವಾಗುತದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!