“ಸಂಘರ್ಷ ಭರಿತ ಜಗತ್ತು ಮತ್ತು ಬದುಕಿಗೆ ಯೋಗ ಜೀವನ ಶಾಂತಿಯನ್ನು, ಪ್ರೀತಿಯನ್ನು ಖಚಿತಪಡಿಸುತ್ತದೆ-ಪ್ರಧಾನಮಂತ್ರಿ ನರೇಂದ್ರ ಮೋದಿ

ವಿಶಾಖಪಟ್ಟಣಂನಲ್ಲಿ ನಡೆದ 11ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಭಾಗವಹಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು “ಸಂಘರ್ಷ ಭರಿತ ಜಗತ್ತು ಮತ್ತು ಬದುಕಿಗೆ ಯೋಗ ಜೀವನ ಶಾಂತಿಯನ್ನು, ಪ್ರೀತಿಯನ್ನು ಖಚಿತಪಡಿಸುತ್ತದೆ. ಈ ಯೋಗ ದಿನ ಮಾನವತೆ ಮತ್ತು ಶಾಂತಿಯ ಆರಂಭವಾಗಲಿ ಎಂದರು. ಯೋಗ ಜಾತಿ,ಮತ ಪಂಗಡ ಮೀರಿ ಸರ್ವರ ಬದುಕಿಗೂ ಅನ್ವಯವಾಗಿದೆ. ಇದು ಜಗತ್ತನ್ನೇ ಒಂದು ಗೂಡಿಸಿದೆ. 11ವರ್ಷಗಳಿಂದೀಚೆಗೆ ಯೋಗ ಪ್ರಪಂಚವನ್ನು ಬೆಸೆದಿದೆ. ಕೋಟ್ಯಾಂತರ,ಮನುಷ್ಯರ ಬದುಕಿನ ಭಾಗವಾಗಿದೆ ಎಂದು ಪ್ರಧಾನಿ ನುಡಿದರು.

ಈ ಬಾರಿಯ ಯೋಗ ದಿನಾಚರಣೆ ಆರೋಗ್ಯ ಮತ್ತು ಪ್ರಕೃತಿಯ ಆಶಯವನ್ನು ಹೊಂದಿದೆ. ಇದು ನಮ್ಮನ್ನು ಪರಸ್ಪರ ಜಾಗೃತಿಗೊಳಿಸುತ್ತದೆ. ಜಾಗತಿಕ ಮಟ್ಟದಲ್ಲಿ ಭೂಮಿ ಮತ್ತು ಆರೋಗ್ಯದ ಸಂಬಂಧಗಳ ಜಾಗೃತಿ ಮೂಡಿಸುತ್ತದೆ. ನಮ್ಮ ಆರೋಗ್ಯದ ಜತೆ ಪ್ರಕೃತಿಯ ಆರೋಗ್ಯವೂ ಸುಂದರವಾಗಿದ್ದರೆ ಮಾತ್ರ ಜೀವನದ ಆನಂದ ಎಂದು ಪ್ರಧಾನಿ ನೆನಪಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!