ಮಂಗಳೂರು: ಮಂಗಳೂರು ಜಿಲ್ಲಾ ಸಣ್ಣ ಕೈಗಾರಿಕಾ ಸಂಘ (DSIA) ಮಹಿಳಾ ವಿಭಾಗದ ವತಿಯಿಂದ ಸರಳ ಹೇರ್ ಬನ್ ಮತ್ತು ಹೇರ್ ಸ್ಟೈಲ್ ಕುರಿತ ಕಾರ್ಯಾಗಾರವನ್ನು ಜೂನ್ 3ರಂದು ಬೆಳಿಗ್ಗೆ 10.30 ಗಂಟೆಗೆ ಯೆಯ್ಯಾಡಿ ಕೈಗಾರಿಕಾ ಪ್ರದೇಶದಲ್ಲಿರುವ ಡಿ.ಎಸ್.ಐ.ಎ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಕಾರ್ಯಾಗಾರವನ್ನು ಅನುಭವಸಂಪನ್ನ ಸಂಪನ್ಮೂಲ ವ್ಯಕ್ತಿ ಶ್ರೀಮತಿ ಗೀತಾ ರಾಜಾರಾಮ ನಡೆಸಿಕೊಡಲಿದ್ದು, ಕೂದಲು ತಯಾರಿ, ಕ್ರಿಂಪಿಂಗ್ ತಂತ್ರಗಳು, ಬ್ಯಾಕ್-ಕಾಂಬಿಂಗ್ ವಿಧಾನಗಳು ಹಾಗೂ ಸರಳ ಮತ್ತು ಆಕರ್ಷಕ ಹೇರ್ ಸ್ಟೈಲ್ಗಳ ಬಗ್ಗೆ ಪ್ರಾಯೋಗಿಕ ತರಬೇತಿ ನೀಡಲಿದ್ದಾರೆ.
ಸೌಂದರ್ಯ ಮತ್ತು ಹೇರ್ ಸ್ಟೈಲಿಂಗ್ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವ ಮಹಿಳೆಯರು ಹಾಗೂ ಯುವತಿಯರು ಈ ಕಾರ್ಯಾಗಾರದ ಪ್ರಯೋಜನ ಪಡೆಯುವಂತೆ ಸಂಘದ ಮಹಿಳಾ ವಿಭಾಗ ವಿನಂತಿಸಿದೆ.
ಹೆಚ್ಚಿನ ಮಾಹಿತಿಗಾಗಿ 9483791031 ಅಥವಾ 9886912666 ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.