18 ವರ್ಷದ ಯುವತಿ ನಾಪತ್ತೆ; ಪತ್ತೆಗೆ ಪೊಲೀಸರ ಮನವಿ

ಮಂಗಳೂರು, ಜೂನ್ 8: ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮದ ಕಲ್ಲುಗುಡ್ಡೆ ನಿವಾಸಿ ಅರ್. ಪೈನ್ ಮೆಹತಾಬ್ (18) ಎಂಬ ಯುವತಿ ಜೂನ್ 7ರಂದು ಮನೆಯಿಂದ ತೆರಳಿದ್ದು, ಬಳಿಕ ಕಾಣೆಯಾಗಿರುವ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಣೆಯಾದ ಯುವತಿಯು ಸುಮಾರು 162 ಸೆಂ.ಮೀ. ಎತ್ತರ ಹೊಂದಿದ್ದು, ಕಪ್ಪು ಬಣ್ಣದ ತಲೆಕೂದಲು, ಗೋಧಿ ಮೈಬಣ್ಣ ಹಾಗೂ ಸಾಧಾರಣ ಮೈಕಟ್ಟಿನವರಾಗಿದ್ದಾರೆ. ಕಾಣೆಯಾದ ಸಂದರ್ಭದಲ್ಲಿ ನೀಲಿ ಬಣ್ಣದ ಸೀರೆ ಮತ್ತು ನೀಲಿ ಬಣ್ಣದ ಬ್ಲೌಸ್ ಧರಿಸಿದ್ದರು.

ಅವರು ಕನ್ನಡ ಹಾಗೂ ಉರ್ದು ಭಾಷೆ ಮಾತನಾಡುತ್ತಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಾಣೆಯಾದ ಯುವತಿಯ ಕುರಿತು ಯಾವುದೇ ಮಾಹಿತಿ ದೊರೆತಲ್ಲಿ ಸಮೀಪದ ಪೊಲೀಸ್ ಠಾಣೆ ಅಥವಾ ಕಡಬ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಠಾಣಾಧಿಕಾರಿ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!