ರಂಗ ಕಲಾವಿದ ದೇವ ನಾಗೇಶ್ ಅವರಿಗೆ ರಂಗನಮನ; ಬೆಂಗಳೂರಿನಲ್ಲಿ ಯುವ ನಾಟಕೋತ್ಸವ-2026

ಬೆಂಗಳೂರು: ಹಿರಿಯ ರಂಗ ಕಲಾವಿದ ದೇವ ನಾಗೇಶ್ ಅವರಿಗೆ ರಂಗನಮನ ಸಲ್ಲಿಸುವ ಅಂಗವಾಗಿ ನಂದನ ಸಂಘಟನೆ ಮತ್ತು ಕನ್ನಡ ಹಾಗೂ ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಯುವ ನಾಟಕೋತ್ಸವ-2026 ಜೂನ್ 16 ಮತ್ತು 17ರಂದು ಬೆಂಗಳೂರಿನ ನಯನ ರಂಗಮಂದಿರದಲ್ಲಿ ನಡೆಯಲಿದೆ.

ಜೂನ್ 16ರಂದು ಸಂಜೆ 5 ಗಂಟೆಗೆ ಚಲನಚಿತ್ರ ನಿರ್ದೇಶಕ ರಾಜ್ ರವಿಶಂಕರ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಚಂದ್ರಶೇಖರ್, ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಿ.ಎಂ. ತಿಮ್ಮಯ್ಯ, ಸುಗಮ ಸಂಗೀತ ಗಾಯಕಿ ಶೀಲಾ ಗುರುನಾಥ್ ಹಾಗೂ ನಂದನ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಕೆ.ವಿ. ನಾರಾಯಣಸ್ವಾಮಿ ಭಾಗವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಚಂದನ್ ನೃತ್ಯ ತಂಡದವರಿಂದ ನೃತ್ಯ ಪ್ರದರ್ಶನ ನಡೆಯಲಿದ್ದು, ಸಂಜೆ 6.30ಕ್ಕೆ ವಿ.ಕೆ.ಎಂ. ಕಲಾವಿದರು ಅಭಿನಯಿಸುವ ಡಾ. ಚಂದ್ರಶೇಖರ ಕಂಬಾರ ಅವರ ‘ಸಂಗ್ಯಾ-ಬಾಳ್ಯಾ’ ನಾಟಕ ಪ್ರದರ್ಶನಗೊಳ್ಳಲಿದೆ. ಈ ನಾಟಕವನ್ನು ಸಿ.ಎಂ. ತಿಮ್ಮಯ್ಯ ನಿರ್ದೇಶಿಸಿದ್ದು, ಲಕ್ಷ್ಮಣ್ ಸುವರ್ಣ, ಶಶಿಕಲಾ, ರಾಮಣ್ಣ ಹಾಗೂ ಪ್ರವೀಣ್ ಹಿನ್ನೆಲೆ ಸಂಗೀತದಲ್ಲಿ ಸಹಕರಿಸಲಿದ್ದಾರೆ.

ಜೂನ್ 17ರಂದು ಸಂಜೆ 5 ಗಂಟೆಗೆ ಶ್ರೀ ರಾಘವ ಕಲಾಸಂಗಮ (ರಿ) ವತಿಯಿಂದ ಸುಗಮ ಸಂಗೀತ ಕಾರ್ಯಕ್ರಮ ನಡೆಯಲಿದೆ. ಬಳಿಕ ಸಂಜೆ 6.30ಕ್ಕೆ ಭಾರತಿ ಕಲಾವೇದಿಕೆ ಅಭಿನಯಿಸುವ ‘ಗೊರುಚರ ಸಾಕ್ಷಿಕಲ್ಲು’ ನಾಟಕ ಪ್ರದರ್ಶನಗೊಳ್ಳಲಿದೆ. ಈ ನಾಟಕಕ್ಕೂ ಸಿ.ಎಂ. ತಿಮ್ಮಯ್ಯ ನಿರ್ದೇಶನ ನೀಡಿದ್ದು, ಎಸ್. ತಿಮ್ಮಯ್ಯ (ಮಲ್ಲು), ಮಂಡ್ಯ ಮಹದೇವ್, ನಿತೀಶ್, ತಿಲಕ್, ದಿವ್ಯಶ್ರೀ, ಪವಿತ್ರ, ನಿಸರ್ಗ, ತೇಜಸ್, ಪ್ರೀತಮ್, ವೈಷ್ಣವಿ ದುರ್ಗಾ, ಕೀರ್ತಿ, ವಿಸ್ಮಯ, ಯಶ್ವಂತ್ ತೇಜ್, ಜಾಹ್ನವಿ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ.

ಎರಡು ದಿನಗಳ ಈ ಯುವ ನಾಟಕೋತ್ಸವವು ರಂಗಭೂಮಿ ಕಲಾವಿದರಿಗೆ ವೇದಿಕೆಯಾಗುವ ಜೊತೆಗೆ ದೇವ ನಾಗೇಶ್ ಅವರ ಕಲಾಸೇವೆಗೆ ಗೌರವ ಸಲ್ಲಿಸುವ ಕಾರ್ಯಕ್ರಮವಾಗಲಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!