ಆನೆಕಲ್ಲು:: ಎ.ಯು. ಪಿ ಶಾಲೆ ಆನೆಕಲ್ಲಿನಲ್ಲಿ ರಕ್ಷಕ ಶಿಕ್ಷಕ ಸಂಘದ ಮಹಾಸಭೆಯು ಜರಗಿತು. ಕಾರ್ಯಕ್ರಮದ ಉದ್ಘಾಟನೆಯನ್ನು ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಪ್ರಶಾಂತ್ ನೆರವೇರಿಸಿದರು. ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷರಾದ ಅಶೋಕ್ ಕೊಡ್ಲಮೊಗರು ರವರ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಶಾಲಾ ಪ್ರಬಂಧಕ ಪ್ರತಿನಿಧಿ ಮುರಳಿ ಶ್ಯಾಮ್,ಎಸ್.ಎಂ.ಸಿ ಅಧ್ಯಕ್ಷರಾದ ಅಶ್ರಫ್, ಮಾತೃ ಮಂಡಳಿ ಅಧ್ಯಕ್ಷರಾದ ಶೋಭ ಕತ್ತೆರಿಕೋಡಿ, ನಿವೃತ್ತ ಮುಖ್ಯೋಪಾಧ್ಯಾಯಿನಿ ರೇಣುಕಾ ಮೊದಲಾದವರು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಶಾಲಾ ಮುಖ್ಯೋಪಾಧ್ಯಯರಾದ ರವಿಶಂಕರ್ ಸರ್ ವಾರ್ಷಿಕ ವರದಿ ಹಾಗೂ ಆಯ ವ್ಯಯ ಮಂಡಿಸಿದರು.

ಈ ಸಂದರ್ಭದಲ್ಲಿ ಶಾಲೆಯ ಶೈಕ್ಷಣಿಕ ಪ್ರಗತಿಯ ಬಗ್ಗೆ ರಕ್ಷಕರು ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು. ತದನಂತರ 2026-27 ನೇ ಶೈಕ್ಷಣಿಕ ವರ್ಷದ ನೂತನ ಸಮಿತಿಯ ಆಯ್ಕೆ ಜರಗಿತು. ಅಧ್ಯಕ್ಷರಾಗಿ ಖಾದರ್ ಆನೆಕಲ್ಲು ,ಉಪಾಧ್ಯಕ್ಷರಾಗಿ ಅಶೋಕ್ ಕೊಡ್ಲಮೊಗರು, ಮಾತೃ ಮಂಡಳಿಯ ಅಧ್ಯಕ್ಷರಾಗಿ ಶೋಭ ಕತ್ತೆರಿಕೋಡಿ,ಉಪಾಧ್ಯಕ್ಷರಾಗಿ ಶಾಂಭವಿ ಹಾಗೂ ಹದಿನೈದು ಮಂದಿ ಸದಸ್ಯರ ಆಯ್ಕೆ ಮಾಡಲಾಯಿತು. ಶಾಲಾ ಹಿರಿಯ ಶಿಕ್ಷಕರಾದ ಹರೀಶ್ .ವಿ ಸ್ವಾಗತಿಸಿ, ಸಿತಾರ ಟೀಚರ್ ವಂದಿಸಿದರು. ಜೀವನ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು.


