ಮಂಜೇಶ್ವರ: ಶ್ರೀ ಛಾಯಾಸುತ ಕುಣಿತ ಭಜನಾ ತಂಡ, ಮಂಜೇಶ್ವರ ಇದರ ನೂತನ ಸಮವಸ್ತ್ರದ ಲೋಕಾರ್ಪಣೆ ಕಾರ್ಯಕ್ರಮವು ಹೊಸಂಗಡಿಯ ಪ್ರೇರಣಾ ಸಭಾಂಗಣದಲ್ಲಿ ಅದ್ದೂರಿಯಾಗಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹರೀಶೆಟ್ಟಿ ಅವರು ವಹಿಸಿಕೊಂಡಿದ್ದರು. ಖ್ಯಾತ ಹಿನ್ನೆಲೆ ಗಾಯಕ ಸಂದೇಶ್ ನೀರ್ಮಾರ್ಗ ಅವರು ನೂತನ ಸಮವಸ್ತ್ರವನ್ನು ಅನಾವರಣಗೊಳಿಸಿ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ನೀಡಿದರು.
ತಂಡದ ನೂತನ ಸಮವಸ್ತ್ರಕ್ಕೆ ಮಂಗಳೂರಿನ ರಿತೇಶ್ ಅವರು ಪ್ರಾಯೋಜಕತ್ವ ನೀಡಿದ್ದು, ಈ ಸಂದರ್ಭದಲ್ಲಿ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.




ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಅಕ್ಷತಾ ಬೈಕಾಡಿ, ಪ್ರಸಾದ್ ಆಳಪೆ, ಶಾಲಿನಿ ಆಳಪೆ, ಪ್ರಶಾಂತ್ ಆಚಾರ್ಯ ಹಾಗೂ ಜಯಶ್ರೀ ಅವರು ಭಾಗವಹಿಸಿ ಶುಭಾಶಯಗಳನ್ನು ತಿಳಿಸಿದರು. ಕುಣಿತ ಭಜನೆಯ ಮೂಲಕ ನಮ್ಮ ಸಂಸ್ಕೃತಿ, ಭಕ್ತಿ ಮತ್ತು ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವಲ್ಲಿ ಇಂತಹ ತಂಡಗಳ ಪಾತ್ರ ಮಹತ್ತರವಾಗಿದೆ ಎಂದು ಅತಿಥಿಗಳು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಸಮಾಜಸೇವೆ ಹಾಗೂ ತಂಡದ ಬೆಳವಣಿಗೆಗೆ ನೀಡಿದ ಕೊಡುಗೆಯನ್ನು ಪರಿಗಣಿಸಿ ವಿಶೇಷ ಸನ್ಮಾನ ಕಾರ್ಯಕ್ರಮವೂ ನಡೆಯಿತು. ಮಂತ್ರಾಕ್ಷರಿ ಟ್ರಾವೆಲ್ಸ್ನ ಬಸ್ ಚಾಲಕ ನಿತೇಶ್ ಕುತಾರ್, ಮಹಾಮಾಯಿ ಟ್ರಾವೆಲ್ಸ್ನ ಯತೀಶ್, ಶ್ರೀ ಛಾಯಾಸುತ ಕುಣಿತ ಭಜನಾ ತಂಡದ ಸಾಮಾಜಿಕ ಜಾಲತಾಣ ನಿರ್ವಹಣೆಯನ್ನು ಯಶಸ್ವಿಯಾಗಿ ನಡೆಸುತ್ತಿರುವ ಹೇಮಂತ್ ಬೇಜ್ಜ ಹಾಗೂ ನಿರೂಪಕ ಶರತ್ ಬೇಕೂರು ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ತಂಡದ ಸದಸ್ಯರು, ಅಭಿಮಾನಿಗಳು ಹಾಗೂ ಗಣ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದರು.
ಕೊನೆಯಲ್ಲಿ ಶರತ್ ಬೇಕೂರು ಅವರು ಕೃತಜ್ಞತಾ ಭಾಷಣ ಸಲ್ಲಿಸಿ ಕಾರ್ಯಕ್ರಮವನ್ನು ನಿರೂಪಿಸಿದರು.


