ಮೇಲಿನಮೊಗರು ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ವೇದವ್ಯಾಸ ಕಾಮತ್ ಚಾಲನೆ

ಮಂಗಳೂರು, ಜು. 7: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 47ನೇ ಮಿಲಾಗ್ರಿಸ್ ವಾರ್ಡ್‌ನ ಮೇಲಿನಮೊಗರು ಧ್ವಜಸ್ತಂಭದ ಸಮೀಪ ₹10 ಲಕ್ಷ ವಿಶೇಷ ಅನುದಾನದಲ್ಲಿ ಕೈಗೆತ್ತಿಕೊಳ್ಳಲಾಗಿರುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ವೇದವ್ಯಾಸ ಕಾಮತ್ ಗುದ್ದಲಿ ಪೂಜೆ ನೆರವೇರಿಸಿ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಸ್ಥಳೀಯ ನಿವಾಸಿಗಳ ಬಹುಕಾಲದ ಬೇಡಿಕೆಯಂತೆ ಲಭ್ಯವಿರುವ ವಿಶೇಷ ಅನುದಾನವನ್ನು ಬಳಸಿಕೊಂಡು ರಸ್ತೆ ಅಭಿವೃದ್ಧಿ ಕಾಮಗಾರಿ ಆರಂಭಿಸಲಾಗಿದೆ. ಕಾಮಗಾರಿ ಅವಧಿಯಲ್ಲಿ ಸಾರ್ವಜನಿಕರಿಗೆ ಕೆಲವೊಂದು ತಾತ್ಕಾಲಿಕ ಅಡಚಣೆಗಳು ಎದುರಾಗುವ ಸಾಧ್ಯತೆ ಇರುವುದರಿಂದ ಎಲ್ಲರೂ ಸಹಕಾರ ನೀಡುವಂತೆ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರಾದ ರಮೇಶ್ ಹೆಗ್ಡೆ, ಮೋಹನ್ ಪೂಜಾರಿ, ರಾಮಮೂರ್ತಿ ಸೋಮನಹಳ್ಳಿ, ಪ್ರವೀಣ್ ನಿಡ್ಡೇಲ್, ಶಬರೀಶ್, ಮಂಜುನಾಥ್ ಅತ್ತಾವರ, ವಿನೋದ್ ಕುಮಾರ್, ಶರ್ಮಿಳಾ ಶೆಟ್ಟಿ, ಹರೀಶ್ ರಾವ್, ಸುರೇಶ್ ಕುಮಾರ್, ಜ್ಯೋತಿ ಯಲಬುರ್ಗಿ, ಎಂ.ಬಿ. ರಾಜ, ಶೈಲಾ ಚಂದ್ರಹಾಸ್, ರಮಾಕಾಂತ್ ನಾಯಕ್ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಹಾಗೂ ಸ್ಥಳೀಯ ನಿವಾಸಿಗಳು ಉಪಸ್ಥಿತರಿದ್ದರು

SHARE
Loading spinner

Leave a Reply

Your email address will not be published. Required fields are marked *

error: Content is protected !!