ಪೋರ್ಚುಗಲ್‌ಗೆ ಸೋಲು, ಸ್ಪೇನ್ ಕ್ವಾರ್ಟರ್‌ಫೈನಲ್‌ಗೆ; 1-0 ಗೋಲಿನ ಜಯ, ರೊನಾಲ್ಡೊ ಕಣ್ಣೀರಿನ ವಿದಾಯ

ಫಿಫಾ ವಿಶ್ವಕಪ್ 2026:* ಪೋರ್ಚುಗಲ್ ತಂಡ ವಿಶ್ವಕಪ್‌ನಿಂದ ಹೊರಬಿದ್ದಿದೆ. ಪ್ರೀ-ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಸ್ಪೇನ್ 1-0 ಗೋಲುಗಳ ಅಂತರದಲ್ಲಿ ಪೋರ್ಚುಗಲ್‌ನ್ನು ಸೋಲಿಸಿ ಕ್ವಾರ್ಟರ್‌ಫೈನಲ್‌ಗೆ ಪ್ರವೇಶಿಸಿದೆ.

ಹೆಚ್ಚುವರಿ ಸಮಯದಲ್ಲಿ (ಇಂಜುರಿ ಟೈಮ್) ಬದಲಿ ಆಟಗಾರನಾಗಿ ಕಣಕ್ಕಿಳಿದ ಮಿಕೆಲ್ ಮೆರಿನೋ ಪಂದ್ಯದಲ್ಲಿ ಏಕೈಕ ಮತ್ತು ನಿರ್ಣಾಯಕ ಗೋಲು ದಾಖಲಿಸಿ ಸ್ಪೇನ್‌ಗೆ ಗೆಲುವು ತಂದುಕೊಟ್ಟರು.

ಇಂಜುರಿ ಟೈಮ್‌ನಲ್ಲಿ ಬಂದ ಆ ಗೋಲು ಪೋರ್ಚುಗಲ್‌ನ ವಿಶ್ವಕಪ್ ಕನಸಿಗೆ ತೆರೆ ಎಳೆದಿತು. ಡಲ್ಲಾಸ್‌ನಲ್ಲಿ ನಡೆದ ಈ ರೋಚಕ ಪಂದ್ಯದಲ್ಲಿ ಆರಂಭದಿಂದಲೇ ಸ್ಪೇನ್ ಆಕ್ರಮಣಕಾರಿ ಆಟ ಪ್ರದರ್ಶಿಸಿತು.

ಪಂದ್ಯದ ಆರಂಭಿಕ ನಿಮಿಷಗಳಲ್ಲೇ ಸ್ಪೇನ್‌ನ ದಾಳಿಯಾಟ ಪೋರ್ಚುಗಲ್ ರಕ್ಷಣೆಯನ್ನು ಒತ್ತಡಕ್ಕೆ ಸಿಲುಕಿಸಿತು. ಎಂಟನೇ ನಿಮಿಷದಲ್ಲಿ ದೊರೆತ ಸುವರ್ಣಾವಕಾಶವನ್ನು ಮಿಕೆಲ್ ಓಯರ್‌ಸಬಾಲ್ ಬಳಸಿಕೊಳ್ಳಲು ವಿಫಲರಾದರು.

ಬಲಭಾಗದ ವಿಂಗ್‌ನಿಂದ ಯುವ ತಾರೆ ಲಮೀನ್ ಯಮಾಲ್ ಹಲವು ಬಾರಿ ಗೋಲು ಗುರಿಯಾಗಿಸಿ ಶಾಟ್‌ಗಳನ್ನು ಹೊಡೆದರೂ, ಪೋರ್ಚುಗಲ್‌ನ ರಕ್ಷಣಾ ಆಟಗಾರರು ಅವುಗಳನ್ನು ತಡೆದರು.

ಪೋರ್ಚುಗಲ್ ಗೋಲ್‌ಕೀಪರ್ ಡಿಯೋಗೋ ಕೋಸ್ಟಾ ಅವರ ಅದ್ಭುತ ಸೇವ್‌ಗಳು ಮೊದಲಾರ್ಧದಲ್ಲಿ ತಂಡವನ್ನು ಹಲವು ಬಾರಿ ಸಂಕಷ್ಟದಿಂದ ಪಾರು ಮಾಡಿದ್ದವು. ಆದರೆ ಕೊನೆಯ ಕ್ಷಣದಲ್ಲಿ ಬಂದ ಮೆರಿನೋ ಅವರ ಗೋಲಿಗೆ ತಡೆಯೊಡ್ಡಲು ಸಾಧ್ಯವಾಗಲಿಲ್ಲ. ಪರಿಣಾಮ, ಪೋರ್ಚುಗಲ್‌ನ ವಿಶ್ವಕಪ್ ಪಯಣ ಅಂತ್ಯಗೊಂಡರೆ, ಸ್ಪೇನ್ ಕ್ವಾರ್ಟರ್‌ಫೈನಲ್‌ಗೆ ಭರ್ಜರಿ ಎಂಟ್ರಿ ನೀಡಿತು.

SHARE
Loading spinner

Leave a Reply

Your email address will not be published. Required fields are marked *

error: Content is protected !!