ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಯುಡಿಆರ್: 35/2026 ಕಲಂ: 194 (3)(iv)ಬಿ.ಎನ್. ಎಸ್ ರಂತೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲಾಗಿ, ಸದ್ರಿ ಮುಶ್ತಕ್ ಮೃತಪಟ್ಟ ಸ್ಥಳದಲ್ಲಿ ಕಳವು ಕೃತ್ಯ ನಡೆದಿರುವುದು ಕಂಡುಬಂದಿರುತ್ತದೆ. ಈ ಹಿನ್ನೆಲೆಯಲ್ಲಿ ಬೆಳ್ತಂಗಡಿ ಠಾಣೆಯಲ್ಲಿ ಅಪರಾಧ ಕ್ರಮಾಂಕ 73/2026, ಕಲಂ 331(4),305 ಜೊತೆಗೆ 3(5) ಬಿಎನ್ ಎಸ್-2023 ಪ್ರಕರಣ ದಾಖಲಾಗಿದ್ದು, ಕಳವು ಕೃತ್ಯದ ತನಿಖೆ ನಡೆಸಲಾಗಿ ಆರೋಪಿ ಬೆಳ್ತಂಗಡಿ ಕಾಶಿಪಟ್ನ ನಿವಾಸಿ ಪಿ ಇಬ್ರಾಹಿಂ ಲತೀಫ್ (36) ಎಂಬಾತನನ್ನು ದಿನಾಂಕ: 14.07.2026 ರಂದು ಬೆಳ್ತಂಗಡಿ ಠಾಣಾ ಪೊಲೀಸರು ದಸ್ತಗಿರಿ ಮಾಡಿರುತ್ತಾರೆ.

ಆರೋಪಿಯ ವಿಚಾರಣೆಯ ವೇಳೆ ಸದ್ರಿ ಮೃತ ಮುಶ್ತಕ್ ಹಾಗೂ ಇಬ್ರಾಹಿಂ ಲತೀಫ್ (36) ರವರುಗಳು ಮತ್ತೋರ್ವ ಆರೋಪಿಯೊಂದಿಗೆ ಸೇರಿ ದಿನಾಂಕ:30.06.2026 ರಂದು ರಾತ್ರಿ ಬೆಳ್ತಂಗಡಿ ಕುವೆಟ್ಟು ಶಕ್ತಿನಗರ ಎಂಬಲ್ಲಿರುವ ಸಂಸ್ಥೆಯೊಂದರ ಆವರಣದಲ್ಲಿದ್ದ ಅಲ್ಯೂಮಿನಿಯಂ/ಕಬ್ಬಿಣದ ಸೊತ್ತುಗಳನ್ನು ಕಳವು ಮಾಡಿದ್ದು ಈ ವೇಳೆ ಆಕಸ್ಮಿಕವಾಗಿ ಮುಶ್ತಕ್ ನ ಕುತ್ತಿಗೆಗೆ ಕಬ್ಬಿಣದ ತಂತಿ ಸಿಲುಕಿ ಮೃತಪಟ್ಟಿರುವುದಾಗಿ ತಿಳಿಸಿರುತ್ತಾನೆ. ಆರೋಪಿಯು ಕಳ್ಳತನ ಮಾಡಿದ ಒಟ್ಟು 550 ಕೆಜಿ ಅಲ್ಯೂಮಿನಿಯಂ ವಯರ್ ಗಳನ್ನು ಸ್ವಾಧೀನಪಡಿಸಲಾಗಿರುತ್ತದೆ.

ಆರೋಪಿಯ ವಿಚಾರಣೆಯ ವೇಳೆ ಈತನು ವೇಣೂರು ಠಾಣೆ, ಉಪ್ಪಿನಂಗಡಿ ಠಾಣೆ, ಅರೆಹಳ್ಳಿ ಠಾಣೆ ಹಾಗೂ ಶಿವಮೊಗ್ಗ ಗ್ರಾಮಾಂತರ ಠಾಣೆಗಳಲ್ಲಿ ಸೇರಿದಂತೆ ಒಟ್ಟು 16 ಕಳವು ಪ್ರಕರಣಗಳಲ್ಲಿ ಬಾಗಿಯಾಗಿರುವುದು ತಿಳಿದುಬಂದಿರುತ್ತದೆ.


