ರೈಲಿನಲ್ಲಿ ಮಹಿಳೆಯರೊಂದಿಗೆ ವಿಕೃತ ವರ್ತನೆ: ಕಾಸರಗೋಡು ಡಿಎಫ್‌ಒ ಅಮಾನತು

​ಕಾಸರಗೋಡು:ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳಾ ಪ್ರಯಾಣಿಕರ ಮುಂದೆ ಅಸಭ್ಯವಾಗಿ ವರ್ತಿಸಿ, ಲೈಂಗಿಕ ಚೇಷ್ಟೆ ಎಸಗಿದ ಆರೋಪ ಎದುರಿಸುತ್ತಿದ್ದ ಕಾಸರಗೋಡು ಡಿಎಫ್‌ಒ ಅರಣ್ಯಾಧಿಕಾರಿ ಜೋಸ್ ಮ್ಯಾಥ್ಯೂ ಅವರನ್ನು ಹುದ್ದೆಯಿಂದ ಅಮಾನತುಗೊಳಿಸಲಾಗಿದೆ.

​ಅಸಿಸ್ಟೆಂಟ್ ಫಾರೆಸ್ಟ್ ಕನ್ಸರ್ವೇಟರ್ ಹುದ್ದೆಯಲ್ಲಿದ್ದ ಜೋಸ್ ಗಿರಿ ನಿವಾಸಿ ಜೋಸ್ ಮ್ಯಾಥ್ಯೂ ವಿರುದ್ಧ ಈ ಕಠಿಣ ಶಿಸ್ತು ಕ್ರಮ ಜರುಗಿಸಲಾಗಿದೆ.ಕಾಸರಗೋಡು ತಲುಪಿದ ‘ಓಖಾ ಎಕ್ಸ್‌ಪ್ರೆಸ್’ ರೈಲಿನಲ್ಲಿ ಈ ಘಟನೆ ನಡೆದಿದೆ. ಮಹಿಳೆಯರ ಮುಂದೆ ವಿಕೃತ ಮೆರೆದ ಈ ಅಧಿಕಾರಿಯ ಕೃತ್ಯದ ವಿರುದ್ಧ ಪೊಯಿನಾಚಿ ನಿವಾಸಿ ಮಹಿಳೆ ರೈಲ್ವೆ ಪೊಲೀಸರಿಗೆ ದೂರು ನೀಡಿದ್ದರು.

​ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡ ಬೆನ್ನಲ್ಲೇ, ಇಲಾಖೆಯು ಅವರನ್ನು ಸೇವೆಯಿಂದ ಅಮಾನತುಗೊಳಿಸಿದ್ದು, ಘಟನೆ ಕುರಿತು ಉನ್ನತ ಮಟ್ಟದ ಇಲಾಖಾ ತನಿಖೆಗೆ ಆದೇಶಿಸಿದೆ.ಸಾರ್ವಜನಿಕ ವಲಯದಲ್ಲಿ ಈ ಅಘಾತಕಾರಿ ವರ್ತನೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!