ತಾಲೂಕಿನ ರಾಷ್ಟ್ರೀಯ ಹೆದ್ದಾರಿ 275ರ ಎಮ್ಮೆಕೊಪ್ಪಲು ಗ್ರಾಮದ ಪುಟ್ಟನಕೆರೆ ಬಳಿ ಸಂಭವಿಸಿದೆ.ಮೈಸೂರು ನಗರದ ಅರವಿಂದ ನಗರದ ನಿವಾಸಿ ಮಹದೇವು ಅವರ ಪುತ್ರ, ವೃತ್ತಿಯಲ್ಲಿ ಫೋಟೋಗ್ರಾಫರ್ ಆಗಿದ್ದ ಅಭಿಲಾಷ್ (27) ಮೃತಪಟ್ಟ ದುರ್ದೈವಿ.

ಅಭಿಲಾಷ್ ಅವರು ತಮ್ಮ ಬೈಕ್‌ನಲ್ಲಿ ಕೆಲಸದ ನಿಮಿತ್ತ ಹುಣಸೂರಿಗೆ ಆಗಮಿಸುತ್ತಿದ್ದರು. ಈ ವೇಳೆ ಮೈಸೂರು ಕಡೆಯಿಂದ ಬಂದ ಗೂಡ್ಸ್ ಕ್ಯಾಂಟರ್ ವಾಹನ ಹಿಂಬದಿಯಿಂದ ಬೈಕ್‌ಗೆ ಶರವೇಗದಲ್ಲಿ ಡಿಕ್ಕಿ ಹೊಡೆದಿದೆ. ಡಿಕ್ಕಿಯಾದ ರಭಸಕ್ಕೆ ಬೈಕ್‌ನಿಂದ ರಸ್ತೆಗೆ ಎಸೆಯಲ್ಪಟ್ಟ ಅಭಿಲಾಷ್ ಅವರ ತಲೆಗೆ ತೀವ್ರ ಪೆಟ್ಟು ಬಿದ್ದು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ಮೃತ ಅಭಿಲಾಷ್‌ಗೆ ಇತ್ತೀಚೆಗಷ್ಟೇ ಮದುವೆ ನಿಶ್ಚಯವಾಗಿದ್ದು, ಮುಂಬರುವ ನವೆಂಬರ್ ನಲ್ಲಿ ವಿವಾಹ ನೆರವೇರಬೇಕಿತ್ತು ಎಂದು ಮೃತನ ಸಹೋದರ ಅಭಿಷೇಕ್ ತಿಳಿಸಿದ್ದಾರೆ.
ಮೃತ ಅಭಿಲಾಷ್‌ಗೆ ಇತ್ತೀಚೆಗಷ್ಟೇ ಮದುವೆ ನಿಶ್ಚಯವಾಗಿದ್ದು, ಮುಂಬರುವ ನವೆಂಬರ್ ನಲ್ಲಿ ವಿವಾಹ ನೆರವೇರಬೇಕಿತ್ತು ಎಂದು ಮೃತನ ಸಹೋದರ ಅಭಿಷೇಕ್ ತಿಳಿಸಿದ್ದಾರೆ.

ವಿಷಯ ತಿಳಿದ ತಕ್ಷಣ ಹುಣಸೂರು ನಗರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಶಿವಮಾಧು ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮೃತದೇಹವನ್ನು ಹುಣಸೂರು ಸಾರ್ವಜನಿಕ ಆಸ್ಪತ್ರೆಯ ಶವಗಾರಕ್ಕೆ ರವಾನಿಸಿ, ಮರಣೋತ್ತರ ಪರೀಕ್ಷೆಯ ನಂತರ ವಾರಸುದಾರರಿಗೆ ಹಸ್ತಾಂತರಿಸಲಾಯಿತು. ಘಟನೆಗೆ ಸಂಬಂಧಿಸಿದಂತೆ ಎರಡೂ ವಾಹನಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
