ಕರ್ನಾಟಕದ ಮೇರು ಕಲಾವಿದರೀಗೆ ಗಡಿನಾಡು ಕಾಸರಗೋಡಿನ ಗೌರವಾರ್ಪಣೆ

ಕರ್ನಾಟಕ ಗಡಿನಾಡು ಕನ್ನಡ ಸಮ್ಮೇಳನ ದ ತ್ರಿತೀಯ ದಿನ 27.7.2026.ಡಾ. ಜಾನಪದ ಎಸ್. ಬಾಲಾಜಿ ಉದ್ಘಾಟಿಸಿ ಚಾಲನೆ ನೀಡಿದ ಗಡಿನಾಡು ಕಲಾ ಮೇಳ ದಲ್ಲಿ ಬೆಂಗಳೂರಿನ ಶ್ರೀ ನಾಗರಾಜ್ ಬೆಂಗಳೂರು ಇವರ ಕಲಾ ತಂಡ ಗಳಿಗೆ, ಉತ್ತಮ ಕಲಾ ಪ್ರದರ್ಶನ ನೀಡಿದ ಪ್ರತಿಬಾವಂತ ಕಲಾವಿದರಾದ, ಕುಮಾರ್, ಶಶಿಕಲಾ, ಶರತ್, ಸೌಂದರ್ಯ, ಚೌದಪ್ಪ, ವರುಣ್, ಶ್ವೇತ ವಿಜಯ್, ದೀಪಿಕಾ, ರಾಧಿಕಾ, ಸ್ನೇಹ, ಅರ್ಪಿತಾ, ಯುಕ್ತ, ಅಮುದ್ರ ಕೆ. ಎಸ್. ಪ್ರಿಯಾಂಕ, ಭಾರ್ಗವಿ, ಮೇಘ, ಅಮೃತ, ಶುಭ, ರೋಹನ, ಹರ್ಷಿಣಿ, ವೀಕ್ಷ ಇವರುಗಳಿಗೆ ಕರ್ನಾಟಕ -ಗಡಿನಾಡು ಕನ್ನಡ ಸಮ್ಮೇಳನ ಸಮಿತಿ ಅಧ್ಯಕ್ಷರಾದ ಡಾ. ಕೆ. ಏನ್ ವೆಂಕಟ್ರಮಣ ಹೊಳ್ಳ ಅಭಿನಂದಿಸಿದರು. ಕನ್ನಡ ಭವನ ಸ್ಥಾಪಕ ಸಂಚಾಲಕರಾದ ಡಾ. ವಾಮನ್ ರಾವ್ ಬೇಕಲ್ -ಸಂದ್ಯಾ ರಾಣಿ ಟೀಚರ್ ಕಲಾವಿದರೀಗೆ ಪ್ರಮಾಣ ಪತ್ರ ಹಾಗೂ ಸ್ಮರಣಿಕೆ ನೀಡಿ ಗೌರವಿಸಿದರು.


ಕನ್ನಡ ಭವನ ಕಾರ್ಯದರ್ಶಿ ವಸಂತ್ ಕೆರೆಮನೆ ಸ್ವಾಗತಿಸಿ, ಸಂಘಟನಾ ಕಾರ್ಯದರ್ಶಿ ರಾಜೇಶ್ ಕೋಟೆಕಣಿ ವಂದಿಸಿದರು. ಕನ್ನಡ ಭವನ ಸಮೂಹ ಸಂಸ್ಥೆಗಳ ಕೇಂದ್ರ ಸಮಿತಿ ಗೌರವಾಧ್ಯಕ್ಷರಾದ ಪತ್ರಕರ್ತ ಪ್ರದೀಪ್ ಬೇಕಲ್ ನಿರೂಪಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!