ಮಂಗಳೂರು: ಲಯನ್ಸ್ ಜಿಲ್ಲೆ 317D ವತಿಯಿಂದ ಹತ್ತು ಫಲಾನುಭವಿಗಳಿಗೆ ಸುಮಾರು ₹3 ಲಕ್ಷ ಮೌಲ್ಯದ ಕೃತಕ ಕಾಲುಗಳನ್ನು ವಿತರಿಸಲಾಯಿತು.

ಲಯನ್ಸ್ ಜಿಲ್ಲಾ ಗವರ್ನರ್ ಕುಡ್ಪಿ ಅರವಿಂದ್ ಶೆಣೈ ಅವರು ಫಲಾನುಭವಿಗಳಿಗೆ ಕೃತಕ ಕಾಲುಗಳನ್ನು ವಿತರಿಸಿ ಶುಭ ಹಾರೈಸಿದರು. ಸಮಾಜಸೇವೆಯ ಅಂಗವಾಗಿ ಲಯನ್ಸ್ ಸಂಸ್ಥೆ ಅಗತ್ಯವಿರುವವರಿಗೆ ಕೃತಕ ಅಂಗಗಳನ್ನು ಒದಗಿಸುವ ಮೂಲಕ ಅವರ ಬದುಕಿಗೆ ಹೊಸ ಆಶಾಕಿರಣ ಮೂಡಿಸುವ ಕಾರ್ಯವನ್ನು ನಿರಂತರವಾಗಿ ಕೈಗೊಳ್ಳುತ್ತಿದೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಲಯನ್ಸ್ ಲಿಂಬ್ ಸೆಂಟರ್‌ನ ನಿರ್ದೇಶಕರೂ ಖ್ಯಾತ ಎಲುಬು ತಜ್ಞರೂ ಆದ ಡಾ. ಶಾಂತರಾಮ್ ಶೆಟ್ಟಿ, ಡಾ. ಕೆ.ಆರ್. ಕಾಮತ್, ಡಾ. ನೆಜಿಲ್ಲಾ, ಬಾಲಕೃಷ್ಣ ಹೆಗ್ಡೆ, ಸುರೇಶ್ ಶೆಟ್ಟಿ, ಹೇಮಾ ರಾವ್, ನ್ಯಾನ್ಸಿ ಹಾಗೂ ಸೀಮಾ ಉಪಸ್ಥಿತರಿದ್ದರು.ಈ ಕುರಿತು ಜಿಲ್ಲಾ ಸಂಪರ್ಕ ಅಧಿಕಾರಿ ಸುದರ್ಶನ್ ಪಡಿಯಾರ್ ವಿಟ್ಲ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


