ಪೂರ್ವಜರ ಪ್ರಕಾರ ಈ ತಿಂಗಳು ಜನರಿಗೆ ಬಹಳ ಕಷ್ಟದ ತಿಂಗಳು, ಅದಕ್ಕೋಸ್ಕರ ಪ್ರಕೃತಿಯಲ್ಲೇ ಆದ ತಿಂಡಿ ತಿನಸುಗಳನ್ನು ತಿನ್ನುತಿದ್ದರು, ಈಗ ಹಾಗೆ ಅಲ್ಲ, ಆದ್ರೂ ಅದನ್ನು ಕೊರೋನ ನಮಗೆ ನೆನಪು ಮಾಡಿಸಿತು 🙏
ಇನ್ನೊಂದು ವಿಷಯ ಏನೆಂದರೆ ನಮ್ಮ ಅಜ್ಜ, ಅಪ್ಪ ಆಸ್ತಿ ಮಾಡಿಟ್ಟು ಹೋಗಿರ್ತಾರೆ, ಆ ಆಸ್ತಿಯ ಮೇಲೆ ಕಣ್ಣಿಡುವ ನಾವು..,ಅವರಿಗೆ ಬಡಿಸಲು ಕೆಲವರಿಗೆ ಪುರುಸೊತ್ತು ಇರುವುದಿಲ್ಲ .ನಮ್ಮನ್ನು ಅಗಲಿದ ಆತ್ಮಕ್ಕೆ, ಪ್ರೇತಗಳಿಗೆ ಕುಟುಂಬದ, ಅಥವಾ ಮನೆಯವರು ಸೇರಿ ಅವರಿಗೆ ಬಡಿಸುವ ಕ್ರಮ ಒಂದು ವಿಶೇಷ ಪದ್ಧತಿಯೆ ನಮ್ಮ ತುಳುನಾಡಿನಲ್ಲಿ ಮಾಡುತ್ತಿರುವುದು ಒಳ್ಳೆಯ ಸಂಪ್ರದಾಯ🙏

ವರ್ಷಕ್ಕೆ ಒಮ್ಮೆಯಾದರೂ ಅವರನ್ನು ನೆನಪು ಮಾಡುವ ಒಂದು ಪದ್ಧತಿ ತುಂಬಾ ಒಳ್ಳೆಯದು 🙏
ಮೂಲಗಳ ಪ್ರಕಾರ ಈ ಒಂದು ತಿಂಗಳು ದೇವರು ಅವರನ್ನು ಭೂಮಿಗೆ ಕಳುಹಿಸುತ್ತಾರೆ ಎಂಬ ನಂಬಿಕೆ

ಅವರೂ ಕೂಡ ನಾವು ಬಡಿಸುವ ಅನ್ನವನ್ನು ಗಾಳಿ ಆವರ ಮೂಲಕ ತಿನ್ನಲು ಹಾತೋರೆಯುತ್ತಾರೆ
ಆದ್ರೆ, ಈಗ ಹಲವು ಕಡೆ ಕುಟುಂಬದವರಿಗೆ ಪುರುಸೊತ್ತು ಇಲ್ಲ, ಅಥವಾ ಅದೆಲ್ಲಾ ಸುಮ್ಮನೆ ಅನ್ನುವ ದ್ರಿಷ್ಟಿ ಯಿಂದ ಇಂತಹ ಆಚಾರಗಳು ನಿಂತು ಹೋಗಿವೆ
ಒಂದು ವಿಷಯ ನೆನಪಿಡಿ ದೈವ, ದೇವರ ದೋಷಕ್ಕೆ ಪರಿಹಾರ ಇದೆ
ಆದ್ರೆ ಇವರು ಮುನಿಸಿ ಕೊಂಡರೆ ಪರಿಹಾರ ಮಾಡಲು ಕಷ್ಟ, ಇವರ ಮುನಿಸು ನಮ್ಮನ್ನು ಜೀವನದಲ್ಲಿ ಏಳಿಗೆಯಾಗಲು ಬಿಡುವುದಿಲ್ಲ, ಮಾತ್ರವಲ್ಲದೆ, ಶರೀರಕ್ಕೆ ಭಾದಿಸುವ, ಕೈ ಕಾಲು ನೋವು, ಅತಿಯಾದ ಆಕಲಿಕೆ, ನಿದ್ರಾಹೀನತೆ, ಸಣ್ಣ ಮಗು ಜೋರಾಗಿ ನಿರಂತರ ಅಳುವುದು, ಮನೆಯಲ್ಲಿ ಮಾಡಿಟ್ಟ ಪಧಾರ್ಥ ತಿಂಡಿ ತಿನಸುಗಳು, ಬೇಗನೆ ಹಾಳಾಗುವುದು, ಸಣ್ಣ ಮಕ್ಕಳಿಗೆ ಪದೇ ಪದೇ ಜ್ವರ ಬರುವುದು, ದೊಡ್ಡವರು ಜಾರಿ ಬೀಳುವುದು, ಇದೆಲ್ಲಾ ಇವರನ್ನು ಸಂತ್ರಪ್ತ ಪಡಿಸದಿದ್ದರೆ ಆಗುವಂತಹ ತೊಂದರೆಗಳು. ಆದರಿಂದ ತರವಾಡು, ಕುಟುಂಬ ಮನೆಯಲ್ಲಿ ಅವರಿಗೆ ಬಡಿಸಿ 🙏

ಒಂದು ದಿನ ಎಲ್ಲರೂ ಒಮ್ಮೆ ಸೇರಿದಾಗೆಯೂ ಆಗುತ್ತೆ ಅವರಿಗೆ ಸಂತ್ರಪ್ತ ಪಡಿಸಲೂ ಆಗುತ್ತೆ, ನಮಗೊಂದು ಒಳ್ಳೆ ಊಟ ಸಿಕ್ಕಿದ ಹಾಗೆಯೂ ಆಗುತ್ತೆ, ಎಲ್ಲರೂ ಸೇರಿ ಒಟ್ಟಿಗೆ ಕುಳಿತು ಊಟ ಮಾಡುವ ಭಾಗ್ಯವೂ ಸಿಗುತ್ತೆ 🙏
ಅವರು ಜೀವಂತ ಇರುವಾಗ ನಮ್ಮನ್ನು ಸಾಕಿ ಬೆಳೆಸಿ, ನಮ್ಮನ್ನು ಈ ಹಂತಕ್ಕೆ ಮುಟ್ಟಿಸಿದ್ದಾರೆ, ಆದ್ರೆ ಅವರಿಗೆ ಒಮ್ಮೆ ಬಡಿಸಲು ನಮ್ಮಿಂದ ಆಗುವುದಿಲ್ಲ ಅಂದ್ರೆ, ನಮ್ಮ ಮರಣ ನಂತರ ನಮಗೆ ಸಂಬಂಧ ಪಟ್ಟವರು ಬಡಿಸದಿದ್ದರೆ, ನಮ್ಮ ಆತ್ಮಕ್ಕೂ ನೋವಾಗ ಬಹುದೇನೋ….?
ಇದು ಒಂದು ಪದ್ಧತಿ ಅಲ್ಲ ಅವರಿಗೆ ಕೊಡುವ ಗೌರವ ಹಾಗೂ ಪ್ರೀತಿ ❣️
❣️ಸ್ನೇಹಜೀವಿ❣️

ಬರಹ ✍️:-ಉದಯಮಲ್ಲಿ, ಅಮ್ಮ್ಚಿ ಕೆರೆ, ಬೆದ್ರಡ್ಕ, ಸಿರಿಬಾಗಿಲು, ಕಾಸರಗೋಡು

