ದೈವಾರಾಧನೆ🙏

“ಪಾಸದ ಪಡಿಯರಿ”

ದೈವಾರಾಧನೆಯಲ್ಲಿ ಪಾಸಾದ ಪಡಿಯರಿಗೆ ಬಹಳ ಪ್ರಾಮುಖ್ಯತೆ ಇದೆ, ಪಾಸ ಅಂದ್ರೆ ಉಪವಾಸ, ದೈವನರ್ತಕರು ದೈವ ಕೋಲ ಕಟ್ಟುವ ಒಂದು ದಿನ ಮುಂಚೆಯಿಂದ ಉಪವಾಸ ಹಿಡಿದಿರಬೇಕು, ( ಕೆಲವೊಂದು ದೈವಗಳಿಗೆ ಬೇಡ )ಅದಕ್ಕೆ ಅವರು ದೈವ ಕೋಲ ಬಿರಿದ ನಂತರ ಮನೆಗೆ ಹೋಗಿ ಆ ಅಕ್ಕಿಯನ್ನು ಬೇಯಿಸಿ ಊಟ ಮಾಡುತ್ತಾರೆ, ಆಗಿನ ಕಾಲ ಹಾಗಿತ್ತು, ನಮ್ಮ ದೈವ ಕೋಲವನ್ನು ಉಪವಾಸ ಹಿಡಿದು ಕಟ್ಟಿದ ನಂತರ ನರ್ತಕ ಹಸಿವಿನಿಂದ ಇರಬಾರದು ಎಂಬ ಸಂಕಲ್ಪದಿಂದ ದೈವದ ಹೆಸರಲ್ಲಿ ಮೂರು ಸೇರು ಕುಚ್ಚಿಲಕ್ಕಿ, ತೆಂಗಿನಕಾಯಿ, ವೀಳ್ಯದೆಲೆ, ಇಟ್ಟು ಕೊಡುತ್ತಾರೆ.

ಅದನ್ನು ದೈವನರ್ತಕರು ಕ್ರಮ ಬದ್ದವಾಗಿ ದೈವದ ಹೆಸರಲ್ಲಿ ಸ್ವೀಕರಿಸುತ್ತಾರೆ. ನಂತರ ಎಣ್ಣೆ ಬೂಲ್ಯ ಸ್ವೀಕರಿಸಿ ಸ್ನಾನಕ್ಕೆ ಹೋಗುವುದು ಪದ್ಧತಿ.

ದೈವಕಲದಲ್ಲಿ ಎಲ್ಲವೂ ಪ್ರಕೃತಿ ದತ್ತವಾಗಿರ ಬೇಕು ಎಂಬ ನಿಯಮ ಇದೆ, ಅದಕ್ಕೆ ಬೇಕಾಗಿ ಪಡಿಯರಿ ಕೊಡುವ “ತಡ್ಪೆ” ನೈಸರ್ಗಿಕವಾಗಿ ಮರದ ಬಲ್ಲಿಗಳಿಂದ ಅಥವಾo ಒಲಿಗಳಿಂದ ಮಾಡಿದ ಆಗಿರಬೇಕು, ಈಗ ಕೆಲವು ಕಡೆ ಪ್ಲಾಸ್ಟಿಕ್, ಸ್ಟೀಲ್, ಬೆಳ್ಳಿ ಗಳಿಂದ ಕೂಡಿದ ತಡ್ಪೆ ಗಳಲ್ಲಿ ಕೊಡುತ್ತಾರೆ ಇದು ಸರಿಯಲ್ಲ ಎಂಬುದು ನನ್ನ ವಯುಕ್ತಿಕ ಅಭಿಪ್ರಾಯ.

ಪಡಿಯರಿ ಹಿಡಿಯುವ ಕ್ರಮ

ದೈವನರ್ತಕನು ಪಡಿಯರಿಯನ್ನು ಹಿಡಿದುಕೊಂಡು, ದೈವದ ಹೆಸರು, ಮತ್ತು ಹುಟ್ಟುಕಟ್ಟಳೆಯನ್ನು ಹೇಳಿ, ದೈವವನ್ನು ಸಾನಿಧ್ಯಕ್ಕೆ ಕರೆಯುತ್ತಾರೆ, ನಂತರ ತಂತ್ರಿ, ಗುತ್ತು ಬಾರಗೇರ,ಗ್ರಾಮದ (ಮದ್ಯಸ್ತರ), ಸಭೆಯ ಹಾಗೂ ನಡೆಸುವವರ ಅಪ್ಪಣೆ ತೆಗೆದು ಸ್ವೀಕರಿಸುತ್ತಾರೆ.
ತಡ್ಪೆ ಗೆ ಅಕ್ಕಿ ಹಾಕುವಾಗ ಸಾಕು ಅನ್ನುವ ಪದ ಬರಬಾರದು.

ದೈವಕಟ್ಟಳೆಯಲ್ಲಿ ಇಂತಹ ಹಲವಾರು ಕ್ರಮಗಳಿವೆ

“ಪನಿಯೆರೆ ಸಮುದ್ರದ ನೀರ್ ದಾತ್ ಉಂಡು, ತೆರಿಪಾಯಿನಿ ಒಂಜಿ ಪನಿ ಬರ್ಸದಾತ್”

ನಂಬಿಕೆ ಒರಿಪಾಗ 🙏

❣️ಸ್ನೇಹಜೀವಿ❣️

ಬರಹ✍️:- ಉದಯಮಲ್ಲಿ, ಅಮ್ಮ್ಚಿ ಕೆರೆ, ಬೆದ್ರಡ್ಕ, ಸಿರಿಬಾಗಿಲು, ಕಾಸರಗೋಡು

SHARE
Loading spinner

Leave a Reply

Your email address will not be published. Required fields are marked *

error: Content is protected !!