ಕಾಸರಗೋಡು: ಮನೆಯೊಂದರ ಸಿಟೌಟ್‌ನಲ್ಲಿ ವ್ಯಕ್ತಿ ನಿಗೂಢವಾಗಿ ಸಾವು

ಕಾಸರಗೋಡು: ಬದಿಯಡ್ಕ ಮಾಡತ್ತಡ್ಕದ ಕಾಡಮನೆ ಬಳಿ ವ್ಯಕ್ತಿಯೊಬ್ಬರು ಮನೆಯ ಸಿಟೌಟ್‌ನಲ್ಲಿ ನಿಗೂಢ ರೀತಿಯಲ್ಲಿ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಮಾಡತ್ತಡ್ಕ ನಿವಾಸಿ ನಾರಾಯಣ ನಾಯ್ಕ (54) ಸಾವನ್ನಪ್ಪಿದ ದುರ್ದೈವಿ.

​ ಮನೆಯ ಸಿಟೌಟ್‌ನಲ್ಲಿ ಈ ಅನಿರೀಕ್ಷಿತ ಸಾವು ಸಂಭವಿಸಿದ್ದು, ಆ ಸಮಯದಲ್ಲಿ ಮನೆಯಲ್ಲಿ ಇವರು ಮಾತ್ರವೇ ಇದ್ದರೆಂದು ತಿಳಿದುಬಂದಿದೆ.

ಘಟನೆಯ ಸುತ್ತಲೂ ಕೆಲವೊಂದು ಅನುಮಾನಗಳು ಮೂಡಿಬಂದಿದ್ದು, ಈ ಕುರಿತು ಬದಿಯಡ್ಕ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಹಾಗೂ ತನಿಖೆಯನ್ನು ತೀವ್ರಗೊಳಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!