80ನೇ ವರ್ಷದ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಹೊಸಂಗಡಿ ಟೆಂಪೋ ಸ್ಟಾಂಡ್‌ನಲ್ಲಿ ಟೆಂಪೋ ಸ್ಟಾಂಡ್ ಡ್ರೈವರ್ಸ್ ಮತ್ತು ಓನರ್ಸ್ ಅಸೋಸಿಯೇಷನ್ ವತಿಯಿಂದ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು.


ಅಸೋಸಿಯೇಷನ್‌ನ ಅಧ್ಯಕ್ಷರಾದ ಲತೀಫ್ ಕನಿಲ ಅವರು ಧ್ವಜಾರೋಹಣ ನೆರವೇರಿಸಿ,
ಈ ಸಂದರ್ಭದಲ್ಲಿ ಗೌರವಾಧ್ಯಕ್ಷರಾದ ಯೋಗೀಶ್ ಕನಿಲ, ಕಾರ್ಯದರ್ಶಿ ಅಶೋಕ್ ಹೊಸಂಗಡಿ, ಖಜಾಂಚಿ ಕಿಶೋರ್ ಉದ್ಯಾವರ ಸೇರಿದಂತೆ ಅಸೋಸಿಯೇಷನ್‌ನ ಪದಾಧಿಕಾರಿಗಳು ಹಾಗೂ ಹಿರಿಯ ಚಾಲಕರು ಉಪಸ್ಥಿತರಿದ್ದರು.


ಹಿರಿಯ ಚಾಲಕರಾದ ವಿಜಯ್ ಮಜಿಬೈಲ್, ನವೀನ್ ಉದ್ಯಾವರ, ದಿನೇಶ್ ಬೆಜ್ಜ, ಅಬ್ದುಲ್ ರಹ್ಮಾನ್ ಬಡಾಜೆ ಹಾಗೂ ಲತೀಫ್ ಕಡಂಬಾರ್ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಅಧ್ಯಕ್ಷರಾದ ಲತೀಫ್ ಕನಿಲ ಅವರು ಸ್ವಾಗತಿಸಿದರು. ಮೊಯಿದು ಮಜಿಬೈಲ್ ಅವರು ಧನ್ಯವಾದ ಅರ್ಪಿಸಿದರು.
ಹೊಸಂಗಡಿಯ ಜೀವ ನಡಿಯಾಗಿರುವ ಟೆಂಪೋ ಸೇವೆಯು ತಮ್ಮ ಅಸೋಸಿಯೇಷನ್‌ನ ಯಾವುದೇ ಸದಸ್ಯರಿಗೆ ಆರೋಗ್ಯ ಸಮಸ್ಯೆ ಸೇರಿದಂತೆ ಯಾವುದೇ ತೊಂದರೆ ಎದುರಾದಲ್ಲಿ ಸಂಘಟನೆಯ ವತಿಯಿಂದ ಅಗತ್ಯ ನೆರವು ನೀಡುವ ಉದ್ದೇಶ ಹೊಂದಿದೆ ಎಂದು ಪದಾಧಿಕಾರಿಗಳು ತಿಳಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದವರಿಗೆ ತಿಂಡಿ ವ್ಯವಸ್ಥೆಯನ್ನೂ ಮಾಡಲಾಗಿತ್ತು.ಕಾರ್ಯಕ್ರಮದಲ್ಲಿ ಎಲ್ಲಾ ಚಾಲಕರು ಹಾಗೂ ಸದಸ್ಯರು ಉಪಸ್ಥಿತರಿದ್ದು 80ನೇ ಸ್ವಾತಂತ್ರ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಿದರು.


