ಚಿತ್ರಕ್ಕೊಂದು ಬರಹ ✍️

ಒಮ್ಮೆ ಮಗ ತನ್ನ ತಂದೆಯನ್ನು ಕೇಳಿದ:- ಅಪ್ಪಾ ನಾನು ದೊಡ್ಡವನಾದ ಮೇಲೆ ನಿಮಗೆ ಏನು ಕೊಡಲಿ….?

ತಂದೆ ನಗುತ್ತಾ ಹೇಳಿದರು:- ನೀನು ಚಿಕ್ಕವನಿದ್ದಾಗ ನಡೆಯಲು ಕಲಿಯುವಾಗ ನನ್ನ ಕೈ ಹಿಡಿದಿದ್ದೆ ನಾನು ವಯಸ್ಸಾದ ಮೇಲೆ ನಡೆಯಲು ಕಷ್ಟವಾದರೆ ಅದೇ ಕೈಯನ್ನು ಮತ್ತೆ ಹಿಡಿದುಕೋ ಮಗಾ ಅಂತ

ಬದುಕು ಅಂದ್ರೆ…..!”

ಹುಟ್ಟು

ಬೆತ್ತಲೆ ಬಂದು ಸ್ನಾನ ಮಾಡುವುದು ……!

ಸಾವು

ಬೆತ್ತಲೆ ಸ್ನಾನ ಮಾಡಿಸಿ ಹೋಗುವುದು….!

ಬದುಕು

ಜೀವನದ ನಡುವೆ ಸ್ವಲ್ಪ ಬಟ್ಟೆ ಬದಲಾಯಿಸುವುದು.

ಇಷ್ಟೇ… 🫵

ನೀತಿ ಪಾಠ
“ನಾವು ಪಡೆದ ಪ್ರೀತಿಯನ್ನು ಮರಳಿ ನೀಡಿದಾಗ,ಜೀವನ ಚಕ್ರವು ಇನ್ನಷ್ಟು ಸುಂದರವಾಗುತ್ತದೆ.”

ಹೀಗೊಂದು ಕವಿತೆ😂

ಜಲ್ಲಿಕಟ್ಟುನೇ ಭಯಂಕರ ಆಟ
ಎಂದು ಹೆದರಬೇಡಿ….!

“ತಾಳಿ ಕಟ್ಟು” ಎಂಬ ಸಂಪ್ರದಾಯಿಕ ಆಟ
ಅದಕ್ಕಿಂತಲೂ ಭಯಂಕರ…!

ಜಲ್ಲಿಕಟ್ಟುನಲ್ಲಿ ಮಾತುಬಾರದ ಗೂಳಿಯೊಡನೆ
ಕೆಲ ಗಂಟೆಗಳು ಹೋರಾಟ….!

“ತಾಳಿಕಟ್ಟು” ವಿನಲ್ಲಿ ಮಾತನಾಡುವ ಕಾಳಿಯೊಡನೆ
ಜನ್ಮಪೂರ್ತಿ ಪರದಾಟ….!!

✍️ಬರಹ :-ಉದಯಮಲ್ಲಿ, ಅಮ್ಮ್ಚಿ ಕೆರೆ, ಬೆದ್ರಡ್ಕ, ಸಿರಿಬಾಗಿಲು, ಕಾಸರಗೋಡು

SHARE
Loading spinner

Leave a Reply

Your email address will not be published. Required fields are marked *

error: Content is protected !!