ಕಾಸರಗೋಡು: ಕಾಸರಗೋಡು ಮೀಪುಗಿರಿ ನಿವಾಸಿಗಳಾದ ತಂದೆ ಮತ್ತು ಮಗಳನ್ನು ಬಾಡಿಗೆ ಮನೆಯಲ್ಲಿ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ ಹಚ್ಚಲಾಗಿದೆ.


ಮೀಪುಗಿರಿಯ ಗಣೇಶ (55) ಹಾಗೂ ಅವರ ಮಗಳು, ಪರವನಡುಕಂ ಸರ್ಕಾರಿ ಹಿರಿಯ ಮಾಧ್ಯಮಿಕ ಶಾಲೆಯ ಪ್ಲಸ್ ಟು ವಿದ್ಯಾರ್ಥಿನಿ ವೈಷ್ಣವಿ (17) ಸಾವನ್ನಪ್ಪಿದ ದುರ್ದೈವಿಗಳು.
ಶನಿವಾರ ರಾತ್ರಿ 11.10ರ ಸುಮಾರಿಗೆ ಮನೆಯ ಮಲಗುವ ಕೋಣೆಯಲ್ಲಿ ಒಂದೇ ಹುಕ್ನಲ್ಲಿ ಇಬ್ಬರನ್ನೂ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ ಹಚ್ಚಲಾಗಿದೆ.
ಮಾಹಿತಿ ಅರಿತು ಮೇಲ್ಪರಂಬ ಪೊಲೀಸರು ಸ್ಥಳಕ್ಕೆ ಆಗಮಿಸಿ ಮುಂದಿನ ಕಾನೂನು ಕ್ರಮಗಳನ್ನು ಕೈಗೊಂಡಿದ್ದಾರೆ.


