ಕಾಸರಗೋಡು: ಬಾಡಿಗೆ ಮನೆಯಲ್ಲಿ ತಂದೆ-ಮಗಳು ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: ಕಾಸರಗೋಡು ಮೀಪುಗಿರಿ ನಿವಾಸಿಗಳಾದ ತಂದೆ ಮತ್ತು ಮಗಳನ್ನು ಬಾಡಿಗೆ ಮನೆಯಲ್ಲಿ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ ಹಚ್ಚಲಾಗಿದೆ.

​ಮೀಪುಗಿರಿಯ ಗಣೇಶ (55) ಹಾಗೂ ಅವರ ಮಗಳು, ಪರವನಡುಕಂ ಸರ್ಕಾರಿ ಹಿರಿಯ ಮಾಧ್ಯಮಿಕ ಶಾಲೆಯ ಪ್ಲಸ್ ಟು ವಿದ್ಯಾರ್ಥಿನಿ ವೈಷ್ಣವಿ (17) ಸಾವನ್ನಪ್ಪಿದ ದುರ್ದೈವಿಗಳು.

​ಶನಿವಾರ ರಾತ್ರಿ 11.10ರ ಸುಮಾರಿಗೆ ಮನೆಯ ಮಲಗುವ ಕೋಣೆಯಲ್ಲಿ ಒಂದೇ ಹುಕ್‌ನಲ್ಲಿ ಇಬ್ಬರನ್ನೂ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ ಹಚ್ಚಲಾಗಿದೆ.

ಮಾಹಿತಿ ಅರಿತು ಮೇಲ್ಪರಂಬ ಪೊಲೀಸರು ಸ್ಥಳಕ್ಕೆ ಆಗಮಿಸಿ ಮುಂದಿನ ಕಾನೂನು ಕ್ರಮಗಳನ್ನು ಕೈಗೊಂಡಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!