ಬಾಡೂರು ಅಂಗಡಿ ವರಾಂಡದಲ್ಲಿ ಮಧ್ಯವಯಸ್ಕರ ಮೃತದೇಹ ಪತ್ತೆ

​ಕಾಸರಗೋಡು: ಜಿಲ್ಲೆಯ ಬಾಡೂರು ಪ್ರದೇಶದಲ್ಲಿ ಮಧ್ಯವಯಸ್ಕರೊಬ್ಬರು ಅಂಗಡಿಯ ವರಾಂಡದಲ್ಲಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಅಂಗಡಿಮೊಗರು ದೇಲಂಪಾಡಿ ನಿವಾಸಿ ವಿಠಲ ಆಳ್ವ (50) ಸಾವನ್ನಪ್ಪಿದ ದುರ್ದೈವಿ.

​ಸ್ಥಳದಲ್ಲಿ ತೀವ್ರ ದುರ್ನಾತ ಬೀರುತ್ತಿದ್ದ ಹಿನ್ನೆಲೆಯಲ್ಲಿ ಅನುಮಾನಗೊಂಡ ಸ್ಥಳೀಯರು ಪರಿಶೀಲಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಅಂದಾಜು ಮೂರು ದಿನಗಳ ಹಿಂದೆಯೇ ಅವರು ಸಾವನ್ನಪ್ಪಿರುವುದಾಗಿ ಶಂಕಿಸಲಾಗಿದೆ. ಸ್ಥಳೀಯರ ಮಾಹಿತಿ ಆಧರಿಸಿ ಬದಿಯಡ್ಕ ಠಾಣಾ ಪೊಲೀಸರು ತಕ್ಷಣವೇ ಧಾವಿಸಿ, ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ರವಾನಿಸಿ ಮರಣೋತ್ತರ ಪರೀಕ್ಷೆ ಪೂರ್ಣಗೊಳಿಸಿದ್ದಾರೆ.

ಪೊಲೀಸರು ಈ ಕುರಿತು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!